ಹೊಸ ವರ್ಷದ ಮೊದಲ ಕನ್ನಡ ಸಿನಿಮಾ ಬಾಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ 'ಬಾಸ್' ಚಿತ್ರ 2011ರಲ್ಲಿ ತೆರೆಕಾಣುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ 'ಬಾಸ್' ಚಿತ್ರ2010ನೇ ವರ್ಷದ ಕೊನೆಯ ಚಿತ್ರವಾಗಬೇಕಿತ್ತು.
ದರ್ಶನ್, ನವ್ಯಾ ನಾಯರ್, ರೇಖಾ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಹೊಸ ವರ್ಷದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬ ಉತ್ಸಾಹದಲ್ಲಿ ಚಿತ್ರತಂಡವಿದೆ. ಚಿತ್ರ ತಡವಾಗಿ ಚಿತ್ರಮಂದಿರಕ್ಕೆ ಬರುತ್ತಿದ್ದರೂ ಪ್ರೇಕ್ಷಕರನ್ನು ಸೆಳೆಯುವ ಎಲ್ಲ ಲಕ್ಷಣಗಳನ್ನು ಹೊಂದಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ರಮೇಶ್ ಯಾದವ್.
ರಘು ರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರ 'ಬಾಸ್' ಎಲ್ಲವೂ ಸರಿಹೋಗಿದ್ದರೆ ಡಿಸೆಂಬರ್ 31ರಂದು ತೆರೆಕಾಣಬೇಕಿತ್ತು. ಬಾಸ್ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗಲೆ ಯು/ಎ ಪ್ರಮಾಣ ಪತ್ರವನ್ನು ನೀಡಿದೆ. ಒಟ್ಟಿನಲ್ಲಿ ಈ ಚಿತ್ರ ಯಶಸ್ವಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಚಿತ್ರ ತಂಡವಿದೆ. [ಬಾಸ್]
More from Filmibeat
English summary
Darshan lead Boss is the first Kannada movie to release in the year 2011. Navya Nair and Rekha are the female leads of the movie. Ramesh Yadav is the producer of Boss. Raghu Raj's debut directional movie has been passed by the censor board with a U/A certificate.


Click it and Unblock the Notifications











