»   » ಅರ್ಜುನ ದರ್ಶನ್ ಚಿತ್ರ ಬ್ಯಾಂಕಾಕ್ ನಲ್ಲಿ ಶೂಟಿಂಗ್

ಅರ್ಜುನ ದರ್ಶನ್ ಚಿತ್ರ ಬ್ಯಾಂಕಾಕ್ ನಲ್ಲಿ ಶೂಟಿಂಗ್

Posted By:
Subscribe to Filmibeat Kannada

ರಾಜ್ಯದ ಐದು ಕೋಟಿ ಜನರಲ್ಲಿ ಇವನೊಬ್ಬನೆ ಅರ್ಜುನ. ಇದು ಸುಳ್ಳಲ್ಲ. ದರ್ಶನ್ ಅಭಿನಯದ ಅರ್ಜುನ ಚಿತ್ರಕ್ಕೆ ಕವಿರಾಜ್ ಅವರು ಬರೆದಿರುವ ಗೀತೆಯಲ್ಲಿ ಬರುವ ಸಾಲು. ಬ್ಯಾಂಕಾಕ್ ನಲ್ಲಿ ಮೀರಾಚೋಪ್ರಾ ಜತೆ ದರ್ಶನ್ ಅಮೋಘವಾಗಿ ನರ್ತಿಸಿದ್ದನ್ನು ನಿರ್ದೇಶಕ ಶಾಹುರಾಜ್ ಶಿಂಧೆ ಚಿತ್ರೀಕರಿಸಿಕೊಂಡರು.

20 ಕ್ಕೂ ಹೆಚ್ಚು ರಷ್ಯಾದ ನೃತ್ಯಗಾರರೊಂದಿಗೆ ನಾಯಕ ದರ್ಶನ್ ಗುಂಟೂರು ಗುಂಟೂರು ನಾವೂರು ಗುಂಟೂರು ಎಂದು ಹೆಜ್ಜೆ ಹಾಕಿದ್ದನ್ನು ಹಾಗೂ ನಟ ಶರತ್‌ಲೋಹಿತಾಶ್ವ ಅವರು ಸಹ ನೃತ್ಯಗಾರರೊಂದಿಗೆ ಪಾಲ್ಗೊಂಡ ಗೀತೆಯನ್ನು ಒಳಗೊಂಡಂತೆ ಒಟ್ಟು ಎರಡು ಗೀತೆಗಳನ್ನು ಬ್ಯಾಂಕಾಕ್‌ನಲ್ಲಿ 8ದಿನಗಳಲ್ಲಿ ಚಿತ್ರೀಕರಿಸಿಕೊಂಡು ಬಂದ ಅರ್ಜುನನ ತಂಡ ಈಗ ನಗರದಲ್ಲಿ ಬೀಡು ಬಿಟ್ಟಿದೆ.

ಜಯಣ್ಣ ಫಿಲಮ್ಸ್ ಲಾಂಛನದಲ್ಲಿ ಶ್ರೀಮತಿ ಶಶಿಕಲಾ ನರೇಂದ್ರನಾಥ್, ಎನ್.ಜಯಣ್ಣ, ಬೋಗೆಂದ್ರ ಹಾಗೂ ಎನ್.ಮೋಹನ್‌ಕುಮಾರ್ ಒಟ್ಟಾಗಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಶಾಹುರಾಜ್ ಶಿಂಧೆ ನಿರ್ದೇಶಿಸುತ್ತಿದ್ದಾರೆ. ಹರಿಕೃಷ್ಣರ ಸಂಗೀತವಿರುವ ಅರ್ಜುನನಿಗೆ ಪಿ.ಕೆ.ಎಚ್.ದಾಸ್ ಅವರ ಛಾಯಾಗ್ರಹಣವಿದೆ. ದೀಪು ಸಂಕಲನ, ಚಿನ್ನಿಪ್ರಕಾಶ್, ತ್ರಿಭುವನ್ ನೃತ್ಯ, ಜನಾರ್ದನ್ ಮಹರ್ಷಿ ಚಿತ್ರಕಥೆ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಎಂ.ಚಂದ್ರಪ್ಪ ನಿರ್ಮಾಣ ನಿರ್ವಹಣೆ, ಕೃಷ್ಣಮೋಹನ್ ಹಾಗೂ ಮೋಹನ್ ಮಾಂಬಳ್ಳಿ ಸಹನಿರ್ದೇಶನವಿದೆ

ತಾರಾಬಳಗದಲ್ಲಿ ದರ್ಶನ್, ಅನಂತನಾಗ್, ಅವಿನಾಶ್, ಮೀರಾಚೋಪ್ರಾ, ಸಂಜನ, ಊರ್ವಶಿ, ಸುಮನ್, ಶರತ್ ಲೋಹಿತಾಶ್ವ, ಅಜಯ್, ಅಮಿತ್, ಸತ್ಯಜಿತ್, ಬುಲೆಟ್ ಪ್ರಕಾಶ್, ಅಶೋಕ್‌ರಾವ್, ಸಾಯಿಕೃಷ್ಣ, ಮೋಹನ್‌ಜುನೇಜ, ಶೈಲಜಾಜೋಷಿ, ಹೇಮಕಲಾ ಹಾಗೂ ಪಂಕಜ ಇದ್ದಾರೆ.

ಗಜ, ಇಂದ್ರ ಚಿತ್ರಗಳ ಯಶಸ್ಸಿನ ನಂತರ ದರ್ಶನ್ ಅರ್ಜುನ್ ಚಿತ್ರದಲ್ಲಿ ಮತ್ತೊಮ್ಮೆ ಸಾಹಸಭರಿತ ಪ್ರೇಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ದರ್ಶನ್ ಅವರ ಚಿತ್ರಗಳಿಗೆ ಮೊದಲಿಂದಲೂ ಸಂಗೀತ ನೀಡುತ್ತಾ ಬಂದಿರುವ ಹರಿಕೃಷ್ಣ ಇಲ್ಲಿ ಹೊಸ ಬಗೆಯ ಹಾಡನ್ನು ಹೆಣೆಯಲಿದ್ದಾರಂತೆ.

(ದಟ್ಸ್ ಸಿನಿವಾರ್ತೆ)
ದರ್ಶನ್ ತೂಗುದೀಪನಿಗೆ ಈಗ ಮೀರಾ ಭಜನೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada