For Quick Alerts
  ALLOW NOTIFICATIONS  
  For Daily Alerts

  ಸಾರಥಿಗೆ ಖರ್ಚಾಗಿದ್ದು 7 ಕೋಟಿ, ಲಾಭ 20 ಕೋಟಿ

  |

  ಕಳೆದ 2011ರ ದಕ್ಷಿಣ ಭಾರತದ ವರ್ಷದ ವಿವಾದಾತ್ಮಕ ವ್ಯಕ್ತಿಯಾಗಿ ಹೊರಹೊಮ್ಮಿದರೂ ನಟ ದರ್ಶನ್, ಸ್ಯಾಂಡಲ್ ವುಡ್ ನ ನಂಬರ್ ಒನ್ ಯಶಸ್ವೀ ನಟ ಎನಿಸಿಕೊಂಡಿದ್ದಾರೆ. ಇದೀಗ ಕನ್ನಡದ ಬಾಕ್ಸ್ ಆಫೀಸ್ ಕಿಂಗ್, ಬಾಕ್ಸ್ ಆಫೀಸ್ ಸುಲ್ತಾನ್ ಎಂದೆಲ್ಲ ಕರೆಸಿಕೊಳ್ಳುತ್ತಿರುವ ದರ್ಶನ್ ರ ಚಿತ್ರ ಸಾರಥಿ ಬಾಕ್ಸ್ ಆಫಿಸ್ ನಲ್ಲಿ ಅತೀ ಹೆಚ್ಚು ಗಳಿಸಿದ ಚಿತ್ರವಾಗಿದೆ.

  ಕಳೆದ ವರ್ಷದ ಆರಂಭದಲ್ಲಿ ಬಂದ ಪ್ರಿನ್ಸ್ ಮತ್ತು ಬಾಸ್ ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸಿದ್ದವು. ದರ್ಶನ್ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಆಗದಿದ್ದರೂ ದರ್ಶನ್ ಚಿತ್ರಗಳಿಗಿರುವ ಜನರ ಕ್ರೇಜ್ ಕಡಿಮೆಯಾಗಿತ್ತು. ಆದರೆ ಸಾರಥಿ ದರ್ಶನ್ ರನ್ನು ಮೊದಲಿದ್ದ ಸ್ಥಾನಕ್ಕಿಂತ ನಿರೀಕ್ಷೆ ಮೀರಿ ಮೇಲೆ ನಿಲ್ಲಿಸಿದೆ.

  ಸಾರಥಿ ಚಿತ್ರಕ್ಕೆ ಖರ್ಚಾಗಿದ್ದು ರು. 7 ಕೋಟಿ. ಆದರೆ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ ನಿವ್ವಳ ಲಾಭ ರು. 15 ಕೋಟಿ. ಜೊತೆಗೆ ಟಿವಿ ರೈಟ್ಸ್ ಮತ್ತು ಆಡಿಯೋ ರೈಟ್ಸ್ ಗಳಿಂದ ರು. 5 ಕೋಟಿ ಬಂದಿದೆ. ಅಲ್ಲಿಗೆ ಒಟ್ಟೂ ಲಾಭ ರು. 20 ಕೋಟಿ ಆದಂತಾಗಿದೆ. ಕಳೆದ ವರ್ಷ 2011ರಲ್ಲಿ ಸಾರಥಿ ಹೊರತುಪಡಿಸಿ ಯಾವ ಚಿತ್ರವೂ ಇಷ್ಟು ಗಳಿಸಿಲ್ಲ. (ಒನ್ ಇಂಡಿಯಾ ಕನ್ನಡ)

  English summary
  Despite being a most controversial South Indian actor in 2011, Darshan has become the successful star of Sandalwood in the past year, as his movie Sarathi has done good business at the Box Office.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X