ಹಿನ್ನೆಲೆ ಸಂಗೀತದಲ್ಲಿ ಮಿಂದೆದ್ದ ದಿಗಂತ್ 'ತಾರೆ'
ಧೂದ್ ಪೇಡ ದಿಗಂತ್ ಹಾಗೂ ಊರ್ವಶಿ ಸೋಲಂಕಿ ಅಭಿನಯದ ತಾರೆ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ದಾವಣಗೆರೆ, ಮಧುಗಿರಿ, ಚಿಕ್ಕಮಗಳೂರು, ಬೆಂಗಳೂರು, ಕೆಮ್ಮಣುಗುಂಡಿ ಮುಂತಾದ ಕಡೆಗಳಲ್ಲಿ 'ತಾರೆಗೆ 40ದಿನಗಳ ಚಿತ್ರೀಕರಣ ನಡೆದಿದೆ.
ಶಿವರಾಜ್ ಹೊಸಕೆರೆ ನಿರ್ದೆಶನದ 'ತಾರೆ' ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಅಳವಡಿಸಲಾಗಿದೆ ಎಂದು ನಿರ್ಮಾಪಕ ಕೆ.ಕೆ.ರವೀಶ್ ತಿಳಿಸಿದ್ದಾರೆ. ದಿಗಂತ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಊರ್ವಶಿ ಸೋಲಂಕಿ. ಸಂಜನಾ, ಪ್ರೊ.ದೊಡ್ಡರಂಗೇಗೌಡ, ರಾಹುಲ್, ಕರಿಬಸವಯ್ಯ, ಟೆನ್ನಿಸ್ ಕೃಷ್ಣ, ರೇಖಾದಾಸ್ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.
ಜಯಂತಕಾಯ್ಕಿಣಿ, ಹೃದಯ ಶಿವ, ನಾಗೇಂದ್ರ ಪ್ರಸಾದ್, ಪ್ರೊ.ದೊಡ್ಡರಂಗೇಗೌಡ ಹಾಗೂ ನವೀನ್ ಈ ಚಿತ್ರದ ಗೀತೆಗಳನ್ನು ರಚಿಸಿದ್ದಾರೆ. ಕೆ.ಕೆ.ರವೀಶ್ ಕಥೆ, ಸಿ.ಆರ್.ಬಾಬಿ ಸಂಗೀತ, ರಮೇಶಪ್ಪಿ ಛಾಯಾಗ್ರಹಣ, ದಾಮೋದರ್ ಸಂಕಲನ, ದೇವ್ ಸಂಪತ್ ಮತ್ತು ಫೈವ್‌ಸ್ಟಾರ್ ಗಣೇಶ್ ನೃತ್ಯ 'ತಾರೆ' ಚಿತ್ರಕ್ಕಿದೆ.
ದಿಗಂತ್ ತಾರೆ ಊರ್ವಶಿ ಸೋಲಂಕಿ ಶಿವರಾಜ್ ಹೊಸಕೆರೆ ದೊಡ್ಡರಂಗೇ ಗೌಡ ಜಯಂತ ಕಾಯ್ಕಿಣಿ diganth urvashi solanki taare shivaraj hoskere jayanth kaikini


Click it and Unblock the Notifications