ಜಯಮ್ಮನ ಮಗ ದುನಿಯಾ ವಿಜಯ್ ಜಾಕಿಚಾನ್ ಫೈಟ್

Duniya Vijay
ದುನಿಯಾ ವಿಜಯ್ ಬದಲಾಗಿದ್ದಾರೆ, ಬದಲಾಗುತ್ತಲೇ ಇದ್ದಾರೆ. ಬದಲಾವಣೆ ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೇ ತನ್ನಲ್ಲೂ ಆಗಬೇಕು ಎಂದು ವಿಜಿಗೆ ಅನ್ನಿಸಿದೆಯಂತೆ. ವಿಜಯ್ ಎಂಬ 'ನಾಟ್ ಹ್ಯಾಂಡ್ ಸಮ್ ಹುಡುಗ' ದುನಿಯಾ ಚಿತ್ರದ ಮೂಲಕ ನಾಯಕ ನಟನಾಗಿ ಈಗ ಬೆಳೆದಿರುವ ಎತ್ತರ ನಿಜವಾಗಿಯೂ ಮೆಚ್ಚತಕ್ಕದ್ದು.

ಕಪ್ಪು ಬಣ್ಣ ಹಾಗು ಚೆನ್ನಾಗಿಲ್ಲದ ಮುಖವನ್ನು ಹೊತ್ತುಕೊಂಡು ಚಿತ್ರರಂಗದಲ್ಲಿ ಈ ಪರಿ ಬೆಳೆದಿರುವ ವಿಜಿ ಜೊತೆ ನಟಿಸಲು ಸಾಕಷ್ಟು ನಟಿಯರು ಈಗಲೂ ಹಿಂದೇಟು ಹಾಕುತ್ತಾರಂತೆ. ಆದರೆ ಅವರ ನೇಮ್ ಮತ್ತು ಫೇಮ್, ರಮ್ಯಾಳಂಥ ನಟಿಯೇ ನಟಿಸುವಂತೆ ಮಾಡಿದೆ ಎಂಬುದೂ ಸತ್ಯ. ಬದಲಾಯಿಸಿಕೊಳ್ಳಲಾಗದ ಬಣ್ಣದ ಬಗ್ಗೆ ಚಿಂತಿಸುವುದನ್ನು ವಿಜಿಯೂ ಬಿಟ್ಟಿದ್ದಾರೆ.

ಜಾಕಿಚಾನ್ ತರಹ ಫೈಟ್ ಮಾಡುತ್ತಲೇ ಕಾಮಿಡಿ ಮಾಡುವ, 'ಹ್ಯೂಮರಸ್ ಫೈಟ್' ಮಾಡಲು ಯೋಚಿಸಿದ್ದಾರೆ ಈಗ ವಿಜಯ್. ವಿಲ್ ಪವರ್ ಮತ್ತು ಸ್ಪೈನ್ ಅಂಡ್ ಬ್ರೈನ್ ಇದ್ದರೆ ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯಬಹುದು ಎಂದು ವಿಜಿ ಸಾಧಿಸಿ ತೋರಿಸಿದ್ದಾರೆ. ಇದೀಗ ಜನಕ್ಕೆ ಸ್ಪೂರ್ತಿಯಾಗುವಂತೆ ಬದುಕಬೇಕೆಂಬ ಜ್ಞಾನೋದಯವೂ ಆಗಿದೆಯಂತೆ.

ಸದ್ಯಕ್ಕೆ ಈ ವಿಜಯ್ ಕೈತುಂಬಾ ಚಿತ್ರಗಳಿವೆ. ಜರಾಸಂಧ ಬಿಡುಗಡೆಗೆ ರೆಡಿ. 'ಭೀಮಾ ತೀರದಲ್ಲಿ', ರಜನಿಕಾಂತ್, ಚಿತ್ರೀಕರಣ ಹಂತದಲ್ಲಿದೆ. ಅವರದೇ ಬ್ಯಾನರ್ ನಲ್ಲಿ 'ಜಯಮ್ಮನ ಮಗ' ಎಂಬ ಚಿತ್ರ ಬರಲಿದೆ. ಈ ಟೈಟಲ್ ಸೂರಿಯದು. ನಿರ್ದೇಶನ ಸೂರಿ ಅಥವಾ ಸೂರಿ ಶಿಷ್ಯ 'ದಾಡಿ ವಿಜಿ'. ವಿಜಿಗಳಲ್ಲಾ ಬ್ಯಸಿಯಾಗುವಂತಿದ್ದಾರೆ, ಆಲ್ ದಿ ಬೆಸ್ಟ್.

More from Filmibeat

English summary
Actor Duniya Vijay is now thinking for changes in his Career. He wants to admit jockychan fight in his upcoming movie. He has a number of movies in his hand now.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X