»   » ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ

ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ

Posted By:
Subscribe to Filmibeat Kannada

ಸಂವಾದ.ಕಾಂ ತುಮಕೂರು ಬಳಿಯ ದೇವರಾಯನದುರ್ಗದಲ್ಲಿ ಹಮ್ಮಿಕೊಂಡಿರುವ ಗಿರೀಶ್ ಕಾಸರವಳ್ಳಿ ಗೌರವಾರ್ಥ ಕನ್ನಡದ ಪರ್ಯಾಯ ಸಿನಿಮಾದ ಪರಂಪರೆಯನ್ನ ನೆನಪಿಸುವ ಎರಡು ದಿನಗಳ ಚಲನಚಿತ್ರ ರಸಗ್ರಹಣ-ಚಿಂತನಾ ಕೂಟದ ಅಂಗವಾಗಿ 'ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ' ಎಂಬ ವಿಷಯದ ಮೇಲೆ ಪ್ರಬಂಧಗಳನ್ನು ಆಹ್ವಾನಿಸುತ್ತಿದೆ.

ಪ್ರಸ್ತುತ ಸಂದರ್ಭದಲ್ಲಿ ನಮಗೆ ಯಾವ ತರಹದ ಸಿನೆಮಾಗಳ ಅಗತ್ಯವಿದೆ? ಇಂದಿನ ಸಿನೆಮಾಗಳು ನಮ್ಮ ನಿರೀಕ್ಷೆಯ ಮಟ್ಟದಲ್ಲಿವೆಯೇ? ನಮ್ಮ ನಿರೀಕ್ಷೆಗಳಾದರೂ ಯಾವ ಬಗೆಯವು? ಇಂಥಹ ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತಿರುವ ಸಂದರ್ಭದಲ್ಲಿ ಒಂದು ಸಂವಾದದ ಅಗತ್ಯವಿದೆ ಎಂಬುದು ನಮ್ಮ ಅನಿಸಿಕೆ.

ಪ್ರಬಂಧದ ವಿಷಯ: "ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ"
ಬರವಣಿಗೆ ಪರ್ಯಾಯ ಸಿನೆಮಾ ಮತ್ತು ಪ್ರಸ್ತುತ ಸಂದರ್ಭದಲ್ಲಿ ನಮಗೆ ಎಂಥಹ ಸಿನೆಮಾ ಬೇಕು ಎಂಬುದರ ಕುರಿತಾಗಿರಬೇಕು.

ಸ್ಪರ್ಧೆಯ ನಿಯಮಗಳು:
1. ಪ್ರಬಂಧ ಸ್ವಂತದ್ದಾಗಿರಬೇಕು, ಈವರೆಗೂ ಎಲ್ಲೂ ಪ್ರಕಟವಾಗಿರಬಾರದು.
2. ಸ್ಫುಟವಾದ ಅಕ್ಷರಗಳಲ್ಲಿ ಬಿಳಿಹಾಳೆಯ ಒಂದು ಮಗ್ಗುಲಲ್ಲಿ ರಚನೆ ಇದ್ದರೆ ಉತ್ತಮ.
3. ಬರಹ ಅಥವಾ ನುಡಿ ಯಲ್ಲಿ ಕೂಡ ಈ-ಬರಹ ಗಳನ್ನು ಕಳುಹಿಸಬಹುದು.
4. ಪದಗಳ ಮಿತಿಯ ಬಗ್ಗೆ ಯಾವುದೇ ನಿಯಮಗಳು ಇಲ್ಲ.
5. ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
6. ಪ್ರತಿ ವ್ಯಕ್ತಿಗೆ ಒಂದು ವಿಮರ್ಶೆಯನ್ನು ಮಾತ್ರ ಕಳುಹಿಸಲು ಅವಕಾಶವಿರುತ್ತದೆ.
7. ಪ್ರಬಂಧಗಳನ್ನು ಕಳುಹಿಸಲು ಕೊನೆಯ ದಿನಾಂಕ : ನವೆಂಬರ್ 15, 2008
8. ಆಯ್ಕೆಯಾದ ಪ್ರತಿ ಬರಹಗಳಿಗೆ 2000/- ರೂಪಾಯಿಗಳ ಬಹುಮಾನವಿದೆ.
9. ಸ್ಪರ್ಧೆಯನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕವಾಗಿ ನಡೆಸಲಾಗುವುದು..

ಸೂಚನೆ: ವಿಜೇತರನ್ನು ನವೆಂಬರ್ 22 ಮತ್ತು 23ರಂದು ನಡೆಯಲಿರುವ ಸಮಾರಂಭಕ್ಕೆ ಆಹ್ವಾನಿಸಿ, ಬಹುಮಾನ ವಿತರಿಸಲಾಗುವುದು.

ಪ್ರಬಂಧಗಳನ್ನು ಕಳುಹಿಸಬೇಕಾದ ಅಂಚೆ ವಿಳಾಸ:

ಅರೇಹಳ್ಳಿ ರವಿ
ಸಂವಾದ ಡಾಟ್ ಕಾಂ
ನಂ.72,4ನೇ ಅಡ್ಡ ರಸ್ತೆ, 18ನೇ ಮುಖ್ಯ ರಸ್ತೆ,
ಬಿ.ಟಿ.ಎಮ್ ಮೊದಲನೇ ಹಂತ
ಬೆಂಗಳೂರು-68

ನುಡಿ/ಬರಹ ದ ಪ್ರತಿಗಳನ್ನು ಕಳುಹಿಸಲು ಈ-ಮೇಲ್ ವಿಳಾಸ: krnsmyle@gmail.com
ಪ್ರಬಂಧದ ವಿಷಯದ ಕುರಿತು ಹೆಚ್ಚಿನ ವಿವರಗಳಿಗೆ ಅಥವಾ ಇನ್ಯಾವುದೇ ಸಂದೇಹಗಳಿದ್ದಲ್ಲಿ ಸಂಪರ್ಕಿಸಿ: 9901399671, 9731755966

ಕಾರ್ಯಕ್ರಮದಲ್ಲಿ ಭಾಗವಹಿಸುವ ಇಚ್ಛೆಯಿದ್ದಲ್ಲಿ ಸಂವಾದ.ಕಾಂನ ಕಾಸರವಳ್ಳಿ ಕಾರ್ಯಕ್ರಮದ ವಿಶೇಷ ಪುಟಕ್ಕೆ ಭೇಟಿ ಕೊಡಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada