»   » ಮುಂಗಾರುಮಳೆ ಪ್ರೀತಂ ಗುಬ್ಬಿ ಜತೆ ಹಾಗೇ ಸುಮ್ಮನೆ

ಮುಂಗಾರುಮಳೆ ಪ್ರೀತಂ ಗುಬ್ಬಿ ಜತೆ ಹಾಗೇ ಸುಮ್ಮನೆ

Subscribe to Filmibeat Kannada

ಮುಂಗಾರುಮಳೆಗೆ ಚಿತ್ರಕಥೆ ಒದಗಿಸಿ,ಅಪಾರ ಜನಪ್ರಿಯತೆ ಗಳಿಸಿದ ಲೇಖಕ ಪ್ರೀತಂ ಗುಬ್ಬಿ. ಈಗ ತಮ್ಮ ಚೊಚ್ಚಲ ನಿರ್ದೇಶನದ ಹಾಗೆ ಸುಮ್ಮನೆ ಚಿತ್ರದ ಚಿತ್ರೀಕರಣದಲ್ಲಿ ಅವಿರತವಾಗಿ ದುಡಿಯುತ್ತಿದ್ದ್ದಾರೆ. ಮುಂಗಾರುಮಳೆ, ಗೆಳೆಯ, ಅರಮನೆಯಂಥ ಚಿತ್ರಗಳಿಗೆ ಸರಳ ಕಥೆಗಳನ್ನು ಬರೆದು ವಿಮರ್ಶಕರ ಮೆಚ್ಚುಗೆಗೂ ಪ್ರೀತಂ ಪಾತ್ರರಾಗಿದ್ದಾರೆ. ಮುಂಗಾರು ಮಳೆಯ ಬಲು ಜನಪ್ರಿಯ ಹಾಡು 'ಅನಿಸುತಿದೆ ಯಾಕೋ ಇಂದು..' ಹಾಡಿನಲ್ಲಿ ಬರುವ ಹಾಗೆ ಸುಮ್ಮನೆ ಎಂಬ ಪದಗಳನ್ನೇ ತಮ್ಮ ಚಿತ್ರದ ಹೆಸರಾಗಿ ಬಳಸಿಕೊಂಡಿದ್ದಾರೆ.ಜತೆಗೆ ಪ್ಯಾರ್ ಹೋಗಯಾ ಎಂಬ ಜೋಡಿ ಪದವನ್ನು ಸೇರಿಸಿದ್ದಾರೆ.

*ದಟ್ಸ್ ಸಿನಿತಂಡ

ನಾಯಕ ಕಿರಣ್(ಎಸ್ಸೆಮೆಸ್ 6260 ಚಿತ್ರದಲ್ಲಿ ಕಾಣಿಸಿದವ) ಹಾಗೂ ಮುಂಬೈ ಬೆಡಗಿ ಸುಹಾಸಿ(ಸ್ಲೈಸ್ ಜಾಹೀರಾತಿನಲ್ಲಿ ಕಾಣಿಸಿದಾಕೆ)ಗೆ ಇದು ಕನ್ನಡದಲ್ಲಿ ಮೊದಲ ಚಿತ್ರ. ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಬೇಡಿಕೆಯಲ್ಲಿರುವ ನಟ, ನಟಿಯರನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡುವ ಮೂಲಕ ಪ್ರೀತಂ ವಿಭಿನ್ನತೆ ಮೆರೆದಿದ್ದಾರೆ. ಮುಂಗಾರು ಮಳೆ ಭಾಗ 2 ಶುರು ವಾಗುತ್ತದೆ ಗಣೇಶ್ , ರಮ್ಯಾ ನಟಿಸುತ್ತಾರೆ. ಪುನೀತ್ ಕೂಡ ನಟಿಸುವ ಸಾಧ್ಯತೆಯಿದೆ. ಯೋಗರಾಜ್ ಭಟ್ ಬರೀ ಕಥೆ ಬರಿತ್ತಾರಂತೆ, ನಿರ್ದೇಶನ ಪ್ರೀತಂದಂತೆ, ರಾಕ್ ಲೈನ್ ಬ್ಯಾನರ್ ಚಿತ್ರ ಎಂಬೆಲ್ಲಾ ಸುದ್ದಿಗಳಿಗೆ ಮುಕ್ತಾಯ ಹಾಡಿದ್ದು, ಮಾರ್ಚ್ 2 ರಂದು. ಅಂದು 'ಹಾಗೆ ಸುಮ್ಮನೆ 'ಚಿತ್ರ ಸೆಟ್ಟೇರಿತು. ಅಂದಿನಿಂದ ಚಿತ್ರೀಕರಣ ತ್ವರಿತ ಗತಿಯಲ್ಲಿ ಸಾಗಿದೆ.

ನಾಯಕ, ನಾಯಕಿಯರನ್ನು ಹೊಸಬರಿಗೆ ಅವಕಾಶ ಕೊಟ್ಟರೂ, ತಾಂತ್ರಿಕ ವರ್ಗದಲ್ಲಿ ರಾಜಿಯಾಗಿಲ್ಲ. ಮುಂಗಾರುಮಳೆಗೆ ದುಡಿದ ಸಿನಿಛಾಯಾಗ್ರಾಹಕ ಎಸ್. ಕೃಷ್ಣ, ಸಂಗೀತ ನಿರ್ದೇಶಕ ಮನೋಮೂರ್ತಿ, ಸಾಹಿತಿ ಜಯಂತ್ ಕಾಯ್ಕಿಣಿ, ನೃತ್ಯ ನಿರ್ದೇಶಕ ಹರ್ಷ ಹಾಗೂ ಇಮ್ರಾನ್, ಸಂಕಲನಕಾರ ದೀಪು ಅವರನ್ನು ಈ ಚಿತ್ರಕ್ಕೆ ಉಳಿಸಿಕೊಂಡಿದ್ದಾರೆ. ಉಳಿದಂತೆ ಮುಖ್ಯ ಪಾತ್ರವರ್ಗದಲ್ಲಿ ಎಡಕಲ್ಲುಗುಡ್ಡದ ಮೇಲೆ ಚಂದ್ರಶೇಖರ್ ಹಾಗೂ ಹಿರಿಯ ನಟ ಶರತ್ ಬಾಬು ಅವರಿಗೆ ಉತ್ತಮ ಪಾತ್ರ ಸೃಷ್ಟಿಸಲಾಗಿದೆ.

44 ದಿನಗಳ ಚಿತ್ರೀಕರಣದ ವೇಳಾಪಟ್ಟಿಯ ಪ್ರಕಾರದಂತೆ ನಡೆಯುತ್ತಿರುವ ಪ್ರೀತಂ, ಈಗಾಗಲೇ 32 ದಿನಗಳ ಮಾತಿನ ಭಾಗ ಹಾಗೂ ಒಂದು ಹಾಡಿನ ಚಿತ್ರೀಕರಣ ಮುಗಿಸಿದ್ದಾರೆ. ಉಳಿದ ನಾಲ್ಕು ಹಾಡುಗಳ ಚಿತ್ರೀಕರಣ ಜೂನ್15ರ ನಂತರ ನಡೆಯಲಿದೆ. ಮುಂಗಾರು ಮಳೆ ಚಿತ್ರೀಕರಿಸಿದ ಭಾಗಗಳಲ್ಲಿ ಚಿತ್ರೀಕರಣ ನಡೆಸದ ಹಾಗೆ ಎಚ್ಚರಿಕೆ ವಹಿಸಿದ ಪ್ರೀತಂ ಉತ್ತಮ ಲೋಕೆಷನ್ ಹುಡುಕಾಟದಲ್ಲಿ ತಿಂಗಳುಗಳನ್ನು ಕಳೆದಿದ್ದಾರೆ. ಕರಾವಳಿ ಹಾಗೂ ಬಯಲುಸೀಮೆಯ ಅದ್ಭುತ ದೃಶ್ಯಾವಳಿ ನಿಮಗೆ ಸಿಗುತ್ತದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರಾದ ಮುರಳಿ ಮೋಹನ್

ಒಟ್ಟಿನಲ್ಲಿ ಚಿತ್ರರಂಗಕ್ಕೆ ಇನ್ನೊಬ್ಬ ನಿರ್ದೇಶಕ ಸಮರ್ಥ ರೀತಿಯಲ್ಲಿ ಪಾದಾರ್ಪಣೆ ಮಾಡುತ್ತಿದ್ದಾನೆ. ಕನ್ನಡದ ಖ್ಯಾತ ನಟ, ಕಲಾಪೋಷಕ ಗುಬ್ಬಿ ವೀರಣ್ಣ ಅವರ ಮೊಮ್ಮಗನಾದ ಪ್ರೀತಂ, ತಮ್ಮ ಅಜ್ಜನ ಹೆಸರನ್ನು ಉಳಿಸುತ್ತಾರಾ?. ಇವರ ಹಾಗೇ ಸುಮ್ಮನೆ -ಪ್ಯಾರ್ ಹೋಗಯಾ ಚಿತ್ರ ಮುಂಗಾರುಮಳೆಯಂತೆ ಹಣದ ಸುರಿಮಳೆ ಸುರಿಸಿ ಜನಮೆಚ್ಚುಗೆ ಗಳಿಸುವುದೇ?. ಕಾದು ನೋಡಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada