twitter
    For Quick Alerts
    ALLOW NOTIFICATIONS  
    For Daily Alerts

    ಜೀಸಸ್ ಕ್ರಿಸ್ತ ಕಾಲವಶವಾಗಿದ್ದು ಕಾಶ್ಮೀರದಲ್ಲಿ?!

    By Rajendra
    |

    Jesus Christ
    ಭಾರತದ ಮುಕುಟ ಕಾಶ್ಮೀರದಲ್ಲಿ ಜೀಸಸ್ ಕ್ರಿಸ್ತನ ಸಮಾಧಿ ಇದೆ ಎಂದು ಭಾರತೀಯ ಫಿಲಂಸ್ ಡಿವಿಷನ್ ನಿರ್ಮಿಸಿರುವ ಚಿತ್ರ ಹೊಸ ಸತ್ಯವನ್ನು ಹೊರಗೆಡಹಿದೆ. ಒಂದು ಗಂಟೆ ಕಾಲಾವಧಿಯ ಈ ಚಿತ್ರವನ್ನು ಕೇರಳದ 4ನೇ ಅಂತಾರಾಷ್ಟ್ರೀಯ ಡಾಕ್ಯುಮೆಂಟರಿ ಮತ್ತು ಕಿರುಚಿತ್ರ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು.

    ಬೌದ್ಧ ಧರ್ಮ ಜನ್ಮ ತಾಳಲು ಜೀಸಸ್ ಕ್ರಿಸ್ತ ಪ್ರಮುಖ ಪಾತ್ರವಹಿಸಿದರು ಎಂಬ ಮಹತ್ವದ ಮಾಹಿತಿಯನ್ನೂ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರವನ್ನು ಯಶೇಂದ್ರ ಪ್ರಸಾದ್ ಎಂಬುವರು ನಿರ್ದೇಶಿಸಿದ್ದಾರೆ. ಅವರು ಮಾತನಾಡುತ್ತಾ, "ಕಾಶ್ಮೀರದಲ್ಲಿ ಕ್ರಿಸ್ತ ಕಳೆದ ಕೊನೆಯ ದಿನಗಳ ಬಗ್ಗೆ ಚಿತ್ರ ಬೆಳಕು ಚೆಲ್ಲುತ್ತದೆ. " ಎಂದಿದ್ದಾರೆ.

    ಪಾಲಿ, ಸಂಸ್ಕೃತ ಹಾಗೂ ಅರೇಬಿಕ್ ಭಾಷೆಗಳಲ್ಲಿ ದೊರೆತಿರುವ ಐತಿಹಾಸಿಕ ದಾಖಲೆಗಳಲ್ಲಿ ಪ್ರವಾದಿ ಯುಝಾ ಅಸಫ್ ಅವರನ್ನು ಇಲ್ಲೆ ಮಣ್ಣು ಮಾಡಲಾಯಿತು. ಅವರು ಬೇರಾರು ಅಲ್ಲ ಜೀಸಸ್ ಕ್ರಿಸ್ತ ಎಂದಿದ್ದಾರೆ ಚಿತ್ರದ ನಿರ್ದೇಶಕರು . ಜೀಸಸ್ ಅವರನ್ನು ಹತ್ಯೆ ಮಾಡಿ ಸಿಲುಬೆಗೇರಿಸಿಲ್ಲ. ಅವರು ಪ್ಯಾಲೆಸ್ಟೇನ್‌ನಿಂದ ಭಾರತಕ್ಕೆ ಬಂದರು. ಪ್ರವಾದಿಗಳು ಸಮಾಜವನ್ನು ಒಡೆಯಲಿಲ್ಲ, ಅದನ್ನು ಒಂದು ಮಾಡಲು ಪ್ರಯತ್ನಿಸಿದರು ಎಂಬ ಸಂದೇಶ ಸಾರುತ್ತದೆ ಎಂದಿದ್ದಾರೆ ನಿರ್ದೇಶಕರು. (ಏಜೆನ್ಸೀಸ್)

    English summary
    The Films Division of India that produced a documentary film speculates that the famous Rozabal Shrine of Srinagar contains the tomb of Jesus Christ. It claims that Jesus died in Kashmir.
    Wednesday, August 3, 2011, 18:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X