ವರಲಕ್ಷ್ಮಿ ಹಬ್ಬಕ್ಕೆ ಜೋಗಯ್ಯ ಬರ್ತಾ ಇಲ್ಲ, ಆ.19ಕ್ಕೆ ಎಂಟ್ರಿ

By Mahesh

Jogayya Movie Release
ನಿರ್ದೇಶಕ ಪ್ರೇಮ್ ಅವರ ಕನಸಿನ ಕೂಸು, ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ನೂರನೇ ಚಿತ್ರ ಜೋಗಯ್ಯ ರಿಲೀಸಿಂಗ್ ಡೇಟ್ ಮತ್ತೆ ಬದಲಾಗಿದೆ. ವರಮಹಾಲಕ್ಷ್ಮಿ ಹಬ್ಬದಂದು ಅಂದರೆ ಆಗಸ್ಟ್ 12ರಂದು ಬಿಡುಗಡೆಯಾಗುತ್ತಿಲ್ಲ. ಬಿಡುಗಡೆ ಒಂದು ವಾರ ತಡವಾಗುತ್ತಿದೆ, ಆಗಸ್ಟ್ 19ರಂದು ಚಿತ್ರ ಬಿಡುಗಡೆ ನಿಶ್ಚಿತ ಎಂದಿದ್ದಾರೆ ನಿರ್ದೇಶಕ ಪ್ರೇಮ್.

ಕೆಲವು ವರ್ಷಗಳ ಹಿಂದೆ ಬಿಡುಗಡೆಗೊಂಡಿದ್ದ ಜೋಗಿ ಚಿತ್ರ ಕೂಡ ಇದೇ ತಾರೀಕಿನಂದು ಬಿಡುಗಡೆಗೊಂಡಿತ್ತು. ಬಹುಶಃ ಆ ಸೆಂಟಿಮೆಂಟ್ ಗಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಪ್ರೇಮ್ ಒಂದು ವಾರ ಮುಂದೂಡಿರಬಹುದು. ಸದಾ ಸುದ್ದಿಯಲ್ಲಿರುವುದು ಮತ್ತು ಹೈಪ್ ಕ್ರಿಯೇಟ್ ಮಾಡುವುದು ಪ್ರೇಮ್ ಗೇಣು ಹೊಸದಲ್ಲ. 250 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಪ್ರೇಮ್ ಈಗಾಗಲೇ ತಿಳಿಸಿದ್ದಾರೆ.

ಭಾರತೀಯ ಸಿನಿಮಾ ಇತಿಹಾಸದಲ್ಲಿ ಇದೇ ಮೊದಲಬಾರಿಗೆ 3ಡಿ ತಂತ್ರಜ್ಞಾನದಲ್ಲಿ ಚಿತ್ರದ ಒಂದು ಹಾಡು ಮತ್ತು ಸ್ಟಂಟ್ ದೃಶ್ಯ ಇರುತ್ತದೆ ಎಂದು ಪ್ರೇಮ್ ಹೇಳಿದ್ದಾರೆ. ಪ್ಲಾಟಿನಂ ಡಿಸ್ಕ್ ಸಮಾರಂಭವನ್ನು 75,000 ಸಿಡಿ ಬಿಕರಿಯಾಗುವ ಮೊದಲೇ ನಡೆಸಿ ಬಿಟ್ಟಿದ್ದಾರೆ.

ರಾಜ್ಯಾದ್ಯಂತ ಚಿತ್ರಕ್ಕೆ ಭಾರೀ ಬೇಡಿಕೆ ಇದ್ದು, ಚಿತ್ರಮಂದಿರಗಳ ಬಳಿ ನೂಕು ನುಗ್ಗಲು ತಪ್ಪಿಸಲು ಹತ್ತು ದಿನಗಳ ಮುಂಚೆಯೇ ಅಡ್ವಾನ್ಸ್ ಬುಕ್ಕಿಂಗ್ ನೀಡಲು ನಿರ್ಧರಿಸುವುದಾಗಿ ನಿರ್ಮಾಪಕಿ ರಕ್ಷಿತಾ ಪ್ರೇಮ್ ಈಗಾಗಲೇ ತಿಳಿಸಿದ್ದಾರೆ. ಜೋಗಯ್ಯ ಟಿ ಶರ್ಟ್‌‍ಗಳು ಮತ್ತು ಕ್ಯಾಪ್‌ಗಳನ್ನು ಅಭಿಮಾನಿಗಳಿಗೆ ಆಗಲೇ ಚಿತ್ರತಂಡ ವಿತರಿಸಿದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ 'ಜೋಗಯ್ಯ' ಬರಲಿದ್ದಾನೆ ಎನ್ನುವುದು ನಿರ್ಮಾಪಕರ ಆಶಯ.

More from Filmibeat

English summary
Director Prem better known for his gimmick and publicity stunt. Now changed the release date of much awaited movie Jogayya Earlier Shivaraj Kumar Starrer movie was set to release on Aug 12 But it will be releasing on Aug 19. As announced earlier Jogayya movie will be released in 250 theaters across Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X