ದರ್ಶನ್ ಜೊತೆ 'ಬುಲ್ ಬುಲ್' ಕಾಜಲ್ ಅಗರವಾಲ್

By Rajendra

ತೆಲುಗು ನಟಿ ಕಾಜಲ್ ಅಗರವಾಲ್ ಕನ್ನಡಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಬುಲ್ ಬುಲ್' ಚಿತ್ರದಲ್ಲಿ ಕಾಜಲ್ ಅಭಿನಯಿಸಲಿದ್ದಾರೆ. ತೆಲುಗಿನ ಯಶಸ್ವಿ ಚಿತ್ರ 'ಡಾರ್ಲಿಂಗ್' ರೀಮೇಕ್ ಬುಲ್ ಬುಲ್. ಎಂ ಡಿ ಶ್ರೀಧರ್ ನಿರ್ದೇಶಿಸುತ್ತಿರುವ ಚಿತ್ರವನ್ನು ದಿನಕರ್ ತೂಗುದೀಪ ನಿರ್ಮಿಸುತ್ತಿದ್ದಾರೆ.

ತೆಲುಗು 'ಡಾರ್ಲಿಂಗ್' ಚಿತ್ರದಲ್ಲಿ ಪ್ರಭಾಸ್ ಜೊತೆ ಕಾಜಲ್ ಅಭಿನಯಿಸಿದ್ದರು. ಅತ್ತ ಕಾಜಲ್ ತೆಲುಗಿನಲ್ಲಿ ಸಖತ್ ಬ್ಯುಸಿ ನಟಿ. ಇತ್ತ ದರ್ಶನ್ ಕೂಡ ಸುಮ್ಮನೆ ಕೂತಿಲ್ಲ. ಸಂಗೊಳ್ಳಿ ರಾಯಣ್ಣ, ಚಿಂಗಾರಿ ಸೇರಿದಂತೆ ಇನ್ನೂ ಹೆಸರಿಡದ ಹಲವು ಚಿತ್ರಗಳಲ್ಲಿ ಬ್ಯ್ಯುಸಿಯಾಗಿದ್ದಾರೆ. ಹಾಗಾಗಿ ಇವರಿಬ್ಬರ ಡೇಟ್ಸ್ ಹೊಂದಾಣಿಕೆಯಾಗುವುದು ಸ್ವಲ್ಪ ಕಷ್ಟವಾಗಿದೆ.

ದರ್ಶನ್ ಜೊತೆ ಅಭಿನಯಿಸಲು ಕಾಜಲ್ ಒಪ್ಪಿದ್ದಾರಂತೆ. ಸಂಭಾವನೆ ಸೇರಿದಂತೆ ಎಲ್ಲ ಮಾತುಕತೆಗಳು ಮುಗಿದಿವೆ. ಈಗ ಡೇಟ್ಸ್ ಹೊಂದಾಣಿಕೆ ಮಾಡುವುದೇ ಮುಂದಿನ ಕೆಲಸ ಎನ್ನುತ್ತಾರೆ ನಿರ್ಮಾಪಕ ದಿನಕರ್. ವಿ ಹರಿಕೃಷ್ಣ ಸಂಗೀತ, ಎ ವಿ ಕೃಷ್ಣಕುಮಾರ್ ಅವರ ಛಾಯಾಗ್ರಹಣ 'ಬುಲ್ ಬುಲ್' ಚಿತ್ರಕ್ಕಿರುತ್ತದೆ. (ದಟ್ಸ್ ಕನ್ನಡ ಸಿನಿವಾರ್ತೆ)

More from Filmibeat

English summary
South Indian actress Kajal Aggarwal is all set to act with Darshan in Bul Bul. Bul Bul is the remake of the Telugu film Darling. The movie is producing by Dinakar Toogudeepa. Kajal Aggarwal was also the heroine opposite Prabhas in Darling.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X