ಕಾಜಲ್ ಅಗರವಾಲ್ ಈಗ ಹೊಸ ಲಕ್ಸ್ ಸುಂದರಿ

By Rajendra

ಮೋಹಕ ತಾರೆಯರಾದ ಶ್ರೀದೇವಿ, ಹೇಮಾ ಮಾಲಿನಿ, ಮಾಧುರಿ ದೀಕ್ಷಿತ್, ಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಹಾಗೂ ಅಸಿನ್ ಜೊತೆಗೆ ಇದೀಗ ಕಾಜಲ್ ಅಗರವಾಲ್ ಕೂಡ ಸೇರ್ಪಡೆಯಾಗಿದ್ದಾರೆ. ಕಾಜಲ್ ಈಗ ಹೊಸ ಲಕ್ಸ್ ಸುಂದರಿ.

ಸೌಂದರ್ಯ ಸಾಬೂನು ಲಕ್ಸ್ ಹೊಸ ಬ್ರಾಂಡ್ ಅಂಬಾಸಡರ್ ಆಗಿ ಕಾಜಲ್ ಒಂದು ವರ್ಷದ ಅಗ್ರಿಮೆಂಟ್‌ಗೆ ಸಹಿ ಹಾಕಿದ್ದಾರೆ. "ಲಕ್ಸ್, ಸಿನಿಮಾ ತಾರೆಗಳ ಸೌಂದರ್ಯ ಸಾಬೂನು" ಎಂಬ ಡೈಲಾಗ್ ಮತ್ತೊಮ್ಮೆ ಕಾಜಲ್ ನಾಲಿಗೆ ಮೇಲೆ ನುಲಿದಾಡಲಿದೆ.

ಲಕ್ಸ್ ಜಾಹೀರಾತಿಗಾಗಿ ಭಾರಿ ಸಂಭಾವನೆಯನ್ನೇ ಕಾಜಲ್‌ಗೆ ನೀಡಲಾಗಿದೆಯಂತೆ. ಮೂಲಗಳ ಪ್ರಕಾರ ಒಂದು ವರ್ಷದ ಅಗ್ರಿಮೆಂಟ್‌ಗೆ ಸುಮಾರು ರು.2 ಕೋಟಿ ಎಣಿಸಿದ್ದಾಗಿ ಸುದ್ದಿಯಿದೆ. ಈಗಾಗಲೆ ಜಾಹೀರಾತಿನ ಫೋಟೋ ಶೂಟ್ ಮುಗಿದಿದೆ. ಇತ್ತೀಚೆಗೆ ಎಫ್‌ಎಚ್‌ಎಂ ಮ್ಯಾಗಜಿನ್‌ನಲ್ಲಿ ಕಾಜಲ್ ತೆರೆದೆದೆಯ ಬಿಸಿಬಿಸಿ ಫೋಟೋಗಳು ಪಡ್ಡೆಗಳ ದೇಹದ ತಾಪಮಾನ 102 ಡಿಗ್ರಿ ಸೆಂಟಿಗ್ರೇಡ್‌ಗೆ ಹೆಚ್ಚಿಸಿದ್ದವು. (ಏಜೆನ್ಸೀಸ್)

More from Filmibeat

English summary
South Indian actress Kajal Aggarwal is now a present brand Ambassador of beauty soap ‘Lux’ after the famous Bollywood actresses like Sri Devi, Hema Malini, Madhuri Dixit, Aishwarya Rai, Priyanka Chopra, Katrina Kaif and Asin who promoted the brand ‘Lux’ earlier. She is now all set to endorse ‘Lux’ for one year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X