For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರಗಳ ಹಾಸ್ಯ ನಟ ಕರಿಬಸವಯ್ಯ ಇನ್ನಿಲ್ಲ

  By Rajendra
  |

  Actor Karibasavaiah no more
  ಕನ್ನಡ ಚಿತ್ರಗಳ ಹಾಸ್ಯ ನಟ ಹಾಗೂ ರಂಗಭೂಮಿ ಕಲಾವಿದ ಕರಿಬಸವಯ್ಯ (51) ಶುಕ್ರವಾರ (ಫೆ.3) ಮಧ್ಯಾಹ್ನ 2.30ರ ಸುಮಾರಿಗೆ ನಿಧನರಾಗಿದ್ದಾರೆ. ಅಪಘಾತಕ್ಕೀಡಾಗಿದ್ದ ಅವರನ್ನು ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಪ್ರಿಸ್ಟೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ.

  ಜನವರಿ 31ರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಅವರು ಕನಕಪುರದಿಂದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಹಿಂತಿರುಗಬೇಕಾದರೆ ಅವರ ಕಾರು ಅಪಘಾತಕ್ಕೀಡಾಗಿದೆ. ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾರನ್ನು ಸ್ವತಃ ಅವರೇ ಚಾಲನೇ ಮಾಡುತ್ತಿದ್ದರು. ರಸ್ತೆಯಲ್ಲಿನ ಹಳ್ಳ ತಪ್ಪಿಸಲು ಹೋಗಿ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಕಾರು ಉರುಳಿ ಬಿದ್ದಿತ್ತು. ಹರಿಕತೆ ಕಾರ್ಯಕ್ರಮ ನಡೆಸಿಕೊಡುವ ಸಲುವಾಗಿ ಅವರು ಕನಕಪುರಕ್ಕೆ ತೆರಳಿದ್ದರು.

  ಕನ್ನಡ ಚಿತ್ರರಂಗಕ್ಕೆ ಕರಿಬಸವಯ್ಯ ಅವರ ಸಾವು ದಿಢೀರ್ ಎಂದು ಬರಸಿಡಿಲಿನಂತೆ ಎರಗಿದೆ. 'ಉಂಡೂ ಹೋದ ಕೊಂಡೂ ಹೋದ' ಚಿತ್ರದ ಮೂಲಕ ಬಣ್ಣ ಹಚ್ಚಿದ ಇವರು ಕೊಟ್ರೇಶಿ ಕನಸು, ಜನುಮದ ಜೋಡಿ, ಮುಂಗಾರಿನ ಮಿಂಚು, ಹೀಗೆ ಸಾಕಷ್ಟು ಚಿತ್ರಗಳಲ್ಲಿ ಗಮನಾರ್ಹವಾಗಿ ನಟಿಸಿದವರು. ಸದ್ಯ ಬಿಡುಗಡೆಯಾಗಲಿರುವ ಅವರ ಚಿತ್ರಗಳೆಂದರೆ ಸಂಗೊಳ್ಳಿ ರಾಯಣ್ಣ ಹಾಗೂ ಚಿತ್ರಮಂದಿರ. ಅವರ ದಿಢೀರ್ ಕಣ್ಮರೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. (ಒನ್‌ಇಂಡಿಯಾ ಕನ್ನಡ)

  English summary
  Kannada films comedy actor Karibasavaiah died on February 3rd at Pristine Hospital in Bangalore. He met with a car accident and broke back bone Jan 31st. Karibasavaiah made debut from Nagathihalli Chandrasekhar film ‘Undu Hodha Kondu Hodha’ and acted in over 100 films. He was a well known Harikatha Vidwan too. R.I.P

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X