»   » ತೆಲುಗು ಚಿತ್ರಸೀಮೆಗೆ ದುನಿಯಾ ಪಯಣ

ತೆಲುಗು ಚಿತ್ರಸೀಮೆಗೆ ದುನಿಯಾ ಪಯಣ

Subscribe to Filmibeat Kannada
a still from duniya movie
ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ದಾಖಲಿಸಿ ನೆರೆರಾಜ್ಯಗಳು ಹುಬ್ಬೇರಿಸುವಂತೆ ಮಾಡಿದ ಚಿತ್ರ 'ದುನಿಯಾ'. ಈಗ ಈ ಚಿತ್ರ ತೆಲುಗಿಗೆ ರೀಮೇಕ್ ಆಗುತ್ತಿದೆ. ತೆಲುಗಿನ'ದೊಂಗ ರಾಮುಡು', 'ಟಾಪ್ ಹೀರೋ' ಚಿತ್ರಗಳ ನಿರ್ಮಾಪಕ ಅಜಂತಾ ಗೋಪಿನಾಥ್ ಹೊಸಬರೊಂದಿಗೆ ಈ ಚಿತ್ರವನ್ನು ನಿರ್ಮಿಸಲಿದ್ದಾರೆ.

ಸಿಕಂದ್ರಾಬಾದ್ ನ ಪವನ್ ಎಂಬ ಹೊಸಬರನ್ನು ನಾಯಕ ನಟನನ್ನಾಗಿ ಆಯ್ಕೆ ಮಾಡಲಾಗಿದೆ. ತೆಲುಗಿನ ಖ್ಯಾತ ನಿರ್ದೇಶಕ ಮುತ್ಯಾಲ ಸುಬ್ಬಯ್ಯ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಲಕ್ಷ್ಮಣ್ ಕುಮಾರ್ ಎಂಬುವವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಎನೌಕೌಂಟರ್ ಸ್ಪೆಷಲಿಸ್ಟ್ ಪಾತ್ರಕ್ಕಾಗಿ ಹುಡುಕಾಟ ನಡೆದಿದೆ.

ಫೆಬ್ರವರಿ 2007ರಲ್ಲಿ ತೆರೆಕಂಡಿದ್ದ ದುನಿಯಾ ಚಿತ್ರ ನಿರ್ದೇಶಕ ಸೂರಿ ಸೇರಿದಂತೆ ನಟ, ನಟಿಯರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿತು. ವಿಜಯ್ ಮತ್ತು ರಶ್ಮಿ ಅವರ ಉತ್ತಮ ನಟನೆಗೆ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿತ್ತು . ತೆಲುಗಿನಿಂದ ಅನೇಕ ಚಿತ್ರಗಳು ಕನ್ನಡಕ್ಕೆ ರೀಮೇಕ್ ಆಗುತ್ತಿರುವ ಈ ಸಂದರ್ಭದಲ್ಲಿ ಕನ್ನಡದ ಚಿತ್ರ ತೆಲುಗಿಗೆ ರೀಮೇಕ್ ಆಗುತ್ತಿರುವುದು ಮೆಚ್ಚ ಬೇಕಾದ ಸಂಗತಿ.ತೆಲುಗಿನಲ್ಲೂ ದುನಿಯಾ ಜಯಭೇರಿ ಬಾರಿಸಲಿ ಎಂದು ಆಶಿಸೋಣ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada