ಇದೇ ಭಾನುವಾರ ಶಂಖನಾದ ನೋಡಲು ಮರೀಬೇಡಿ

By Rajendra

Aravind in Shankhanada
ಕನ್ನಡ ಚಿತ್ರರಂಗದಲ್ಲಿ 'ಶಂಖನಾದ' ತನ್ನದೇ ಆದಂತಹ ಛಾಪು ಮೂಡಿಸಿದ ಚಿತ್ರ. ಈ ಚಿತ್ರ ನೋಡಬೇಕು ಎಂಬುದು ಉತ್ಕಟ ಸಿನಿಮಾ ಅಭಿಮಾನಿಗಳ ಬಯಕೆ. ಅವರ ಬಯಕೆಯನ್ನು ಈಡೇರಿಸುತ್ತಿದೆ ಕೆ ವಿ ಸುಬ್ಬಣ್ಣ ಆಪ್ತ ಸಮೂಹ ಹಾಗೂ ಕನ್ನಡ ವಾರ್ತಾ ಇಲಾಖೆ.

ಅರವಿಂದ್, ರಮೇಶ್ ಭಟ್, ಅಭಿನಯಾ, ಹೊನ್ನಯ್ಯ, ಆಂಜಪ್ಪ ಮುಖ್ಯಭೂಮಿಕೆಯಲ್ಲಿದ್ದ ಚಿತ್ರವನ್ನು ಉಮೇಶ್ ಕುಲಕರ್ಣಿ ನಿರ್ದೇಶಿಸಿದ್ದರು. ಡಾ.ಸಿ.ಅಶ್ವತ್ಥ್ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ನವರಸ ಫಿಲಂಸ್ ಲಾಂಛನದಲ್ಲಿ ಈ ಚಿತ್ರ 1986ರಲ್ಲಿ ತೆರೆಕಂಡಿತ್ತು.

ಈ ವಿಭಿನ್ನ ಚಿತ್ರದ ಪ್ರದರ್ಶನವನ್ನು ಕುಮಾರಸ್ವಾಮಿ ಲೇಔಟ್‌ನ ಟೀಚರ್ಸ್ ಕಾಲೋನಿಯಲ್ಲಿರುವ ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರಲ್ಲಿ ಏರ್ಪಡಿಸಲಾಗಿದೆ. ಭಾನುವಾರ (ಆ.7) ಸಂಜೆ 3.30ಕ್ಕೆ 'ಶಂಖನಾದ'ವನ್ನು ಕಣ್ತುಂಬಿಕೊಳ್ಳಬಹುದು. ಚಿತ್ರತಂಡದೊಂದಿಗೂ ಚರ್ಚೆ, ಸಂವಾದ ಮಾಡಬಹುದಾಗಿದೆ. ಕಾರ್ಯಕ್ರಮವನ್ನು ಮಿಸ್ ಮಾಡ್ಕೋಬೇಡಿ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
The screening of Kannada movie Shankhanada will be held on Sunday 7th of August at 3.30 pm at KV Subbanna Aptha Rangamandira, situated at Teachers Colony first stage in Kumaraswamy layout.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X