ಹೊಸ ಇತಿಹಾಸ ಬರೆಯಲಿರುವ ಸಂಗೊಳ್ಳಿ ರಾಯಣ್ಣ
ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿವೀವೀರ ಸಂಗೊಳ್ಳಿ ರಾಯಣ್ಣ ಚಿತ್ರ ಹೊಸ ಇತಿಹಾಸ ಬರೆಯಲಿದೆ. ಸರಿಸುಮಾರು ರು.30 ಕೋಟಿ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದ್ದು, 77 ವರ್ಷಗಳ ಕನ್ನಡ ಸಿನಿ ಇತಿಹಾಸದಲ್ಲೇ ಭಾರಿ ಬಜೆಟ್ ಚಿತ್ರವಾಗಿ ಹೊಸ ದಾಖಲೆ ಬರೆಯಲಿದೆ.
ಒಟ್ಟು 175 ದಿನಗಳ ಕಾಲ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ನಿರ್ಮಾಪಕ ಆನಂದ್ ಅಪ್ಪುಗೋಳ್ ಅತ್ಯಂತ ಕಾಳಜಿಯಿಂದ ತೆರೆಗೆ ತರುತ್ತಿದ್ದಾರೆ. ನಾಗಣ್ಣ ನಿರ್ದೇಶನ, ಕೇಶವಾದಿತ್ಯ ಸಂಭಾಷಣೆ, ರಮೇಶ್ ಬಾಬು ಅವರ ಛಾಯಾಗ್ರಹಣ ಪ್ರೇಕ್ಷಕರನ್ನು ಸ್ವಾತಂತ್ರ್ಯಪೂರ್ವಕ್ಕೆ ಕರೆದೊಯ್ಯಲಿದೆ ಎನ್ನುತ್ತಾರೆ ನಿರ್ದೇಶಕರು.
ಚಿತ್ರದ ತಾರಾಗಣದಲ್ಲಿ ನಿಖಿತಾ ತುಕ್ರಲ್, ಶ್ರೀನಿವಾಸಮೂರ್ತಿ, ಶೋಭರಾಜ್, ಉಮಾಶ್ರೀ, ದೊಡ್ಡಣ್ಣ, ಸಿ.ಆರ್.ಸಿಂಹ, ರಮೇಶ್ ಭಟ್, ಶಿವಕುಮಾರ್, ಧರ್ಮ, ಸೌರವ್, ಸತ್ಯಜಿತ್, ಬ್ರಹ್ಮಾವರ್, ಕರಿಬಸವಯ್ಯ, ಕಿಲ್ಲರ್ ವೆಂಕಟೇಶ್, ಅರವಿಂದ್ ಬಿರೇದಾರ್, ರಾಜೇಶ್ ಹಾಗೂ ವಿಜಯ ಸಾರಥಿ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)
More from Filmibeat
English summary
Challenging Star Darshan and Nikita Thukral starrer 'Kranthiveera Sangolli Raayann' biggest film ever made in Kannada cinema history of 77 years. The movie is Rs.30 cr venture said the actor.
ನಿಖಿತಾ ತುಕ್ರಲ್ ದರ್ಶನ್ ಬೆಳಗಾವಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ nikita thukral darshan belgaum kranthiveera sangolli raayanna


Click it and Unblock the Notifications











