ಕನ್ನಡ ಸಿನಿ ನಟ ಪಟ್ರೆ ಅಜಿತ್‌ ಮೇಲೆ ವಕೀಲರ ದಾಳಿ

By Rajendra

Actor Patre Ajith
ಪತ್ರಕರ್ತರು, ಪೊಲೀಸರು ಹಾಗೂ ಸಾರ್ವಜನಿಕರ ಮೇಲೆ ದಾಳಿ ಮಾಡಿದ ವಕೀಲರು ಇದೀಗ ಕನ್ನಡದ ಸಿನಿ ನಟ ಪಟ್ರೆ ಅಜಿತ್ ಮೇಲೆ ತಮ್ಮ ಪ್ರತಾಪವನ್ನು ತೋರಿಸಿದ್ದಾರೆ. ಇಷ್ಟಕ್ಕೂ ಪಟ್ರೆ ಅಜಿತ್ ಏನಂತಹ ಅಪರಾಧ ಮಾಡಿದರು? ಕಪ್ಪು ಕೋಟಿನ ವಕೀಲರೊಬ್ಬರ ವಕ್ರದೃಷ್ಟಿ ಇವರ ಮೇಲೇಕೆ ಬಿತ್ತು?

ಅಜಿತ್ ಪತ್ರಕರ್ತರ ಪರ ವಹಿಸಿ ಮಾತನಾಡಿರುವುದೇ ಈ ವಕೀಲರ ಪಿತ್ತ ಕೆರಳಲು ಕಾರಣವಾಗಿದೆ. ತಮ್ಮ ಫೇಸ್‌ಬುಕ್‌ನಲ್ಲಿ ಅಜಿತ್ ಪತ್ರಕರ್ತರ ಮೇಲಿನ ವಕೀಲರ ಗೂಂಡಾಗಿರಿಯನ್ನು ಖಂಡಿಸಿದ್ದರು. ಇದರಿಂದ ಕುಪಿತರಾದ ಲೋಕೇಶ್ ಎಂಬ ವಕೀಲರು ಪಟ್ರೆ ವಿರುದ್ಧ ಹರಿಹಾಯ್ದಿದ್ದಾರೆ.

ಪಟ್ರೆ ಅಜಿತ್ ಕಾನೂನು ಪದವೀಧರರು ಹೌದು. ವಕೀಲರ ಅಮಾನವೀಯ ಕೃತ್ಯವನ್ನು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ಖಂಡತುಂಡವಾಗಿ ಖಂಡಿಸಿದ ಅವರು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದರಿಂದ ಕುಪಿರಾದ ಸನ್ಮಾರ್ಗ ಲಾ ಚೇಂಬರ್ ಮುಖ್ಯಸ್ಥರಾದ ಲೋಕೇಶ್ ತಮಗೆ ಬೆದರಿಕೆ ಒಡ್ಡಿದ್ದಾಗಿ ಅಜಿತ್ ತಿಳಿಸಿದ್ದಾರೆ. ಅಜಿತ್ ಅವರನ್ನು ಬಾರ್ ಕೌನ್ಸಿಲ್‌ನಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿರುವುದಾಗಿ ಪಟ್ರೆ ಅಜಿತ್ ಹೇಳಿದ್ದಾರೆ. (ಏಜೆನ್ಸೀಸ್)

More from Filmibeat

English summary
Kannada actor Patre Ajith claims that one of the lawyer attacks on his facebook account. Because the actor condemns lawyers attack on media. He further said that the lawyer threatened him to kicked out from Bar Council, the actor himself as a law graduate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X