»   » ಗೋವಾ ಚಿತ್ರೋತ್ಸವದಲ್ಲಿ ಪ್ರಶಸ್ತಿಗಳ ಸುರಿಮಳೆ

ಗೋವಾ ಚಿತ್ರೋತ್ಸವದಲ್ಲಿ ಪ್ರಶಸ್ತಿಗಳ ಸುರಿಮಳೆ

Subscribe to Filmibeat Kannada

*ಜೇಕಬ್ ವರ್ಗೀಸ್,ಗೋವಾ

ಸ್ವರ್ಣ ಮಯೂರ ಸೇರಿದಂತೆ ಎರಡು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಕಜಕಿಸ್ತಾನಿ ನಿರ್ದೇಶಕ ಸರ್ಜಿ ಡ್ವೊರ್ಟ್‌ಸೆವೊಯ್ ಭಾಜನರಾದದ್ದು ಗೋವಾ ಚಲನ ಚಿತ್ರೋತ್ಸವದ ವಿಶೇಷ. 'ತುಲ್ಪನ್" ಚಿತ್ರಕ್ಕಾಗಿ ಈ ಗೌರವಗಳು ಸಂದವು.

ಆಯ್ಕೆ ಸಮಿತಿ ನೀಡುವ ವಿಶೇಷ ಪ್ರಶಸ್ತಿ ಶ್ರೀಲಂಕಾದ ಅಭಿನೇತ್ರಿ ಮಾಲಿನಿ ಪೌನ್ಸೆಕಾ ಅವರ ಪಾಲಿಗೆ, 'ಆಕಾಶ ಕುಸುಮ್" ಚಿತ್ರದ ನಟನೆಗೆ. ಪ್ರಶಸ್ತಿ ಪಡೆದ ಅವರು ನಮಗೆ ಈಗ ಶಾಂತಿ ಬೇಕಿದೆ ಎಂದರು.

ಕಿರುಚಿತ್ರಗಳ ಅಂತರರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಬೆಲ್ಜಿಯಂನ 'ಪ್ಲಾಟ್ ಪಾಯಿಂಟ್" ಸ್ವರ್ಣ ಜ್ಯೋತಿ ಪ್ರಶಸ್ತಿ ಪಡೆಯಿತು. ರಜತ ಜ್ಯೋತಿ ಸಮ್ಮಾನ ದೆಹಲಿಯ ಹುಡುಗಿ ಗೀತಿಕಾ ನಾರಂಗ್‌ಳ 'ಗುಡ್ ನೈಟ್"ಗೆ. ಸ್ಪೇನ್‌ನ 'ಮಂಡೇ ಟು ಫ್ರೈಡೇ" ಪರಿಸರ ಕುರಿತ ಶ್ರೇಷ್ಠ ಕಿರುಚಿತ್ರ ಗೌರವಕ್ಕೆ ಪಾತ್ರವಾಯಿತು. 'ವಿಶೇಷ ಜೂರಿ ಪ್ರಶಸ್ತಿ" ಫ್ರಾನ್ಸ್‌ನ ಗೇಬ್ರಿಯಲ್ ಬ್ರೆನನ್ ಪಾಲಾಯಿತು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada