ರೂಪದರ್ಶಿ ಪೂನಂ ಪಾಂಡೆ ಪ್ಯಾರಿಸ್ ಪ್ರಣಯ

ಭಾರತದಲ್ಲಿ ಬೆತ್ತಲಾಗುವುದು ಬಿಸಿಸಿಐಗೆ ಇಷ್ಟವಿಲ್ಲದಿದ್ದರೆ ಹೇಳಲಿ ಪ್ಯಾರಿಸ್‌ನಲ್ಲಿ ಆಗುತ್ತೇನೆ. ಬಿಸಿಸಿಐ ಏನು ಸರ್ಕಾರಿ ಸಂಸ್ಥೆಯಲ್ಲ ಎಂದಿದ್ದಾರೆ ಪೂನಂ. ಏತನ್ಮಧ್ಯೆ ಆಕೆಯನ್ನು ಬಂಧಿಸುವಂತೆ ಆರ್ ಕೆ ಪಾಂಡೆ ಎಂಬುವವರು ಭೋಪಾಲ್ ಕೋರ್ಟ್‌ನಲ್ಲಿ ಕೇಸು ಕೂಡ ದಾಖಲಿಸಿದ್ದಾರೆ. ಬಿಜೆಪಿಯ ಮಹಿಳಾ ವಿಭಾಗ ಮುಂಬೈ ಪೊಲೀಸ್ ಕಮಿಷನರ್ ಅವರಿಗೆ ಬರೆದಿರುವ ಪತ್ರದಲ್ಲಿ ಪೂನಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ತಮ್ಮ ಬೆತ್ತಲೆ ಸೇವೆ ಬಗ್ಗೆ ಬಿಸಿಸಿಐಗೆ ಪೂನಂ ಸುದೀರ್ಘ ಪತ್ರವನ್ನು ಬರೆದಿದ್ದರು.
ಆದರೆ ಈಗ ಆಕೆಯ ಸೇವೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತನ್ನ ಪ್ರದರ್ಶನಕ್ಕೆ ಪ್ಯಾರಿಸ್ ಆಯ್ಕೆ ಮಾಡಿಕೊಂಡಿದ್ದಾರೆ. ಪೂನಂ ಒಂದು ವೇಳೆ ಬೆತ್ತಲಾದರೂ ಆಗದಿದ್ದರೂ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಏಕೆಂದರೆ ಈಕೆ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಅವಮಾನ ಮಾಡಿಲ್ಲ. ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ ಎಂದು ಆಕೆಯ ವಿರುದ್ಧದ ವಕೀಲರು ತಿಳಿಸಿದ್ದಾರೆ. ಏಪ್ರಿಲ್ 5ರಂದು ಕೇಸಿನ ವಿಚಾರಣೆ ನಡೆಯಲಿದೆ.


Click it and Unblock the Notifications











