ಶಿವಮೊಗ್ಗದಲ್ಲಿ ಶಿವರಾಜ್ 'ಮೈಲಾರಿ' ಜಾತ್ರೆ

By * ಕೆಆರ್ ಸೋಮನಾಥ್, ಶಿವಮೊಗ್ಗ

Shivaraj Kumar in Shivamogga
ಶಿವಮೊಗ್ಗ, ಫೆ. 3 : 'ಮೈಲಾರಿ' ಚಿತ್ರದ ವಿಜಯ ಜಾತ್ರೆಯಲ್ಲಿ ಪಾಲ್ಗೊಳ್ಳಲು ಗುರುವಾರ ನಗರಕ್ಕೆ ಆಗಮಿಸಿದ ಚಿತ್ರನಟ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್‌ರವರಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಅಭಿಮಾನದ ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಶಿವರಾಜ್ ರನ್ನು ನೋಡಿ, ಕೈಕುಲುವ ಧಾವಂತದಲ್ಲಿ ಸ್ವಲ್ಪ ನೂಕುನುಗ್ಗಲು ಕೂಡ ಉಂಟಾಯಿತು. ಅಭಿಮಾನಿಗಳನ್ನು ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ಮಾಡಬೇಕಾಯಿತು.

ನಂತರ ಗೋಪಿ ವೃತ್ತದಲ್ಲಿ ನಡೆದ ಬಹಿರಂಗ ಸಮಾರಂಭದಲ್ಲಿ ಶಿವರಾಜ್‌ಕುಮಾರ್ ಮಾತನಾಡಿ, ಶಿವಮೊಗ್ಗ ನಗರದ ಪ್ರೇಕ್ಷಕರು ತಮ್ಮ ಅಭಿನಯದ ಎಲ್ಲ ಚಿತ್ರಗಳನ್ನು ನೋಡಿ, ಮೆಚ್ಚಿದ್ದಾರೆ. ತಮ್ಮ ಬೆಳವಣಿಗೆಗೆ ಇಲ್ಲಿಯ ಜನತೆಯ ಕೊಡುಗೆ ಅಪಾರವಾಗಿದೆ ಎಂದು ಸಂತಸ ವ್ಯಕ್ಡಪಡಿಸಿದರು.

ಮೈಲಾರಿ ಚಿತ್ರಕ್ಕೆ ರಾಜ್ಯಾದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಚಿತ್ರ 50 ದಿನ ಪೂರೈಸಿ, ಶತದಿನದತ್ತ ಹೆಜ್ಜೆ ಇಟ್ಟಿದೆ. ಚಿತ್ರತಂಡದ ಶ್ರಮ ಸಾರ್ಥಕವಾಗಿದೆ ಎಂದರು.

ಕನ್ನಡದ ಚಿತ್ರಗಳನ್ನು ಪ್ರೇಕ್ಷಕರು ಹೆಚ್ಚು ಹೆಚ್ಚಾಗಿ ನೋಡಬೇಕು. ಕನ್ನಡ ಚಿತ್ರಗಳನ್ನು ಬೆಳೆಸಬೇಕು. ಹಾಗೆಯೇ ತಮ್ಮ ಅಭಿನಯದ 'ಜೋಗಯ್ಯ' ಚಿತ್ರ ಇಷ್ಟರಲ್ಲಿಯೇ ಬಿಡುಗಡೆಯಾಗಲಿದ್ದು, 'ಮೈಲಾರಿ' ಚಿತ್ರಕ್ಕೆ ನೀಡಿದಷ್ಟೆ ಪ್ರೋತ್ಸಾಹವನ್ನು ನೀಡಬೇಕು ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು.

More from Filmibeat

English summary
Kannada actor Shivaraj Kumar's movie Mylari celebrated 50 days completion in Shimoga by organizing Mylari Jatre. Thousands gathered to see Hatrick hero Shivaraj Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X