ಶೀಘ್ರ ಬಾಗಿಲು ತೆರೆಯಲಿದೆ ನಮಿತಾ ಡಾನ್ಸ್ ಸ್ಕೂಲ್
ಶೀಘ್ರದಲ್ಲೆ ಚೆನ್ನೈನಲ್ಲಿ ನೃತ್ಯ ತರಬೇತಿ ಶಾಲೆಯನ್ನು ಪ್ರಾರಂಭಿಸುತ್ತಿರುವುದಾಗಿ ಗ್ಲಾಮರ್ ಬೆಡಗಿ ನಮಿತಾ ಪ್ರಕಟಿಸಿದ್ದಾರೆ. ಸಲ್ಸಾ ಮತ್ತು ಭರತನಾಟ್ಯ ತರಬೇತಿಯನ್ನು ತಮ್ಮ ನೃತ್ಯ ತರಬೇತಿ ಶಾಲೆಯಲ್ಲಿ ನೀಡಲಿರುವುದಾಗಿ ಅವರು ಹೇಳಿದ್ದಾರೆ.
"ನಾನು ಭರತನಾಟ್ಯ ಮತ್ತು ಸಲ್ಸಾ ನೃತ್ಯಗಳಲ್ಲಿ ಪ್ರವೀಣೆ. ಈ ಪ್ರತಿಭೆಯನ್ನು ಯಾಕೆ ವ್ಯರ್ಥ ಮಾಡಬೇಕು. ಹಾಗಾಗಿ ನೃತ್ಯ ತರಬೇತಿ ಶಾಲೆಯನ್ನು ತೆರೆಯುತ್ತಿದ್ದೇನೆ " ಎಂದಿದ್ದಾರೆ ನಮಿತಾ. ಇಲ್ಲಿ ಭಾರತೀಯ ಮತ್ತು ಪಾಶ್ಚಿಮಾತ್ಯ ನೃತ್ಯ ರೀತಿಗಳನ್ನು ಕಲಿಸಲಾಗುತ್ತದಂತೆ.
ತಮ್ಮ ಶಾಲಾ ದಿನಗಳ ಬಗ್ಗೆ ಮಾತನಾಡಿರುವ ನಮಿತಾ, ಶಾಲಾ ದಿನಗಳಲ್ಲಿ ನಾನು ಬೈಕುಗಳನ್ನು ಓಡಿಸುತ್ತಿದ್ದೆ. ಹುಡುಗರೊಂದಿಗೆ ಫೈಟ್ ಮಾಡುತ್ತಿದ್ದೆ. ತರಗತಿಗಳಿಗೆ ಚಕ್ಕರ್ ಹಾಕುತ್ತಿದ್ದೆ. ಆದರೂ ಕ್ಲಾಸಿನಲ್ಲೇ ನಾನೇ ಫಸ್ಟ್ ಬರುತ್ತಿದ್ದೆ ಎಂದು ನಮಿತಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ನಮಿತಾ ಕನ್ನಡದ ಎರಡು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಒಂದು 'ನಮಿತಾ ಐ ಲವ್ ಯು' ಹಾಗೂ ಮತ್ತೊಂದು 'ಭಗವಾನ್ ಎಂಎಲ್‌ಎ'. ಸಿಕ್ಕಾಪಟ್ಟೆ ಧಡೂತಿಯಾಗಿರುವ ನಮಿತಾ ಭರತನಾಟ್ಯ ಹಾಗೂ ಸಲ್ಸಾ ಹೇಗೆ ಕಲಿಸುತ್ತಾರೆ ಎಂಬುದೇ ಈಗಿನ ಪ್ರಶ್ನೆ.


Click it and Unblock the Notifications











