ಪವನ್ ಕಲ್ಯಾಣ್ ವಿರುದ್ಧ ಜಾಮೀನು ರಹಿತ ವಾರೆಂಟ್
ನಟ ಚಿರಂಜೀವಿ ಅವರ ಸಹೋದರ, ಪ್ರಜಾರಾಜ್ಯಂ ಪಕ್ಷದ ಅಂಗ ಸಂಸ್ಥೆ 'ಯುವರಾಜ್ಯಂ' ಅಧ್ಯಕ್ಷ ಹಾಗೂ ತೆಲುಗು ಚಿತ್ರರಂಗದ ನಟ ಪವನ್ ಕಲ್ಯಾಣ್ ವಿರುದ್ಧ ವನಪತ್ತಿ ಮುನ್ಸೀಫ್ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಪವನ್ ಕಲ್ಯಾಣ್ ವಿರುದ್ಧ ಮಾನನಷ್ಟ ಮೊಕದ್ದಮೆ ಆರೋಪ ಹೊರಿಸಲಾಗಿತ್ತು.
ಕಾಂಗ್ರೆಸ್ ಪಕ್ಷದ ನಾಯಕರನ್ನು ಪವನ್ ಕಲ್ಯಾಣ್ 'ದೇಶದ್ರೋಹಿಗಳು' ಎಂದು ಜರಿದಿದ್ದರು. ಈ ಸಂಬಂಧ ಕಿರಣ್ ಕುಮಾರ್ ಎಂಬ ವಕೀಲರು ಡಿಸೆಂಬರ್ 31, 2008ರಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ಸಲ್ಲಿಸಿದ್ದರು. ಈ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್ ಸೂಚಿಸಿತ್ತು.
ಆದರೆ ಪವನ್ ಕಲ್ಯಾಣ್ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದರು. ಪವನ್ ಕಲ್ಯಾಣ್ ವಿರುದ್ಧದ ಕೇಸನ್ನು ವಜಾಗೊಳಿಸುವಂತೆ ಅವರ ಪರ ವಕಾಲತ್ತು ವಹಿಸಿದ್ದ ವಕೀಲರು ಹೈಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ ಪವನ್ ಕಲ್ಯಾಣ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಚಿರಂಜೀವಿ ಪವನ್ ಕಲ್ಯಾಣ್ ವಾರೆಂಟ್ ಮಾನನಷ್ಟ ಮೊಕದ್ದಮೆ ಪ್ರಜಾರಾಜ್ಯಂ pavan kalyan nonbailable warrant chirajeevi defamatory case


Click it and Unblock the Notifications