twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣನ ಮುಂದೆ ನಿನ್ನ "ಆಟ" ನಡೆಯೋಲ್ಲ ಬಾಬಣ್ಣ

    |

    Shivanna 'Om'
    ಕನ್ನಡದಲ್ಲಿ ವಾರಕ್ಕೆ ಎವರೇಜ್ ಎರಡು ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. ಆದರೆ ಹೊಸಬರ ಚಿತ್ರಗಳು ಹೆಚ್ಚಾಗಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗುತ್ತಿರುವುದು ಚಿತ್ರೋದ್ಯಮಕ್ಕೆ ತಲೆನೋವು ತರುತ್ತಿರುವ ವಿಚಾರ. ಅಬ್ಬರದ ಪ್ರಚಾರದೊಂದಿಗೆ ಬಿಡುಗಡೆಗೊಂಡಿದ್ದ "ಆಟ" ಚಿತ್ರ ಮೂರೇ ವಾರದಲ್ಲಿ ಚಿತ್ರಮಂದಿರದಿಂದ ಕಾಲ್ಕಿತ್ತಿದೆ. 1995 ರಲ್ಲಿ ಶಿವರಾಜ್ ಕುಮಾರ್ ವೃತ್ತಿ ಬದುಕಿಗೆ ಹೊಸ ತಿರುವು ನೀಡಿದ್ದ 'ಓಂ' ಚಿತ್ರ ಆಟ ಚಿತ್ರದ ಜಾಗದಲ್ಲಿ ಪ್ರದರ್ಶನ ಕಾಣುತ್ತಿದೆ.

    ನಿರ್ಮಾಪಕ ಶೈಲೇಂದ್ರ ಬಾಬು ತನ್ನ ಮಗ ಸುಮಂತ್ ಶೈಲೆಂದ್ರನಿಗಾಗಿ ನಿರ್ಮಿಸಿದ್ದ ಆಟ ಚಿತ್ರ ಕೆ ಜಿ ರಸ್ತೆಯ ಸಾಗರ್ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿತ್ತು. ಆದರೆ ಮೂರು ವಾರದ ಪ್ರದರ್ಶನದ ನಂತರ ಆ ಜಾಗಕ್ಕೆ ಶಿವಣ್ಣ ಅಭಿನಯದ ಉಪೇಂದ್ರ ನಿರ್ದೇಶನದ ಓಂ ಚಿತ್ರ ಶುಕ್ರವಾರದಿಂದ (ಡಿ 2) ಪ್ರದರ್ಶನ ಗೊಳ್ಳುತ್ತಿದೆ.

    ದೊಡ್ಡ ಬಜೆಟಿನ ಸಿನಿಮಾಗಳಿಗಾಗಿ ಹೆದರಿ ಕೂತಿರುವ ನಿರ್ಮಾಪಕರು ತಮ್ಮ ಹೊಸ ಚಿತ್ರ ಬಿಡುಗಡೆ ಮಾಡದೆ ಇರುವ ಈ ಸಮಯದಲ್ಲಿ ಪ್ರೇಕ್ಷಕರ ಒತ್ತಾದದ ಮೇರೆಗೆ "ಓಂ", "ಸಂತ" ಎಂಬ ಜಾಹೀರಾತು ಎಲ್ಲಡೆ ಕಾಣಿಸುತ್ತಿದೆ. ಚಾಮರಾಜಪೇಟೆಯ ಉಮಾ ಚಿತ್ರಮಂದಿರದಲ್ಲೂ ಆಟ ಪ್ರದರ್ಶನ ರದ್ದಾಗಿ ಓಂ ಚಿತ್ರ ಪ್ರದರ್ಶನ ಗೊಳ್ಳುತ್ತಿದೆ. ಈ ಚಿತ್ರಮಂದಿರದಲ್ಲಿ ಶುಕ್ರವಾರ (ಡಿ 2) ಬಿಡುಗಡೆಗೊಂಡ ನಿರ್ದೇಶಕ ಪಿ ಎನ್ ಸತ್ಯಾ ಹಾಗೂ ಪೂಜಾಗಾಂಧಿ ಅಭಿನಯದ 'ಪಾಗಲ್' ಚಿತ್ರ ಬೆಳಗಿನ ಪ್ರದರ್ಶನಕ್ಕೆ ಮಾತ್ರ ಮೀಸಲು ಉಳಿದಂತೆ ಶಿವಣ್ಣನ ಆಟ.

    ಹಾಗಾದರೆ ಭರ್ಜರಿ ಖರ್ಚು ಮಾಡಿ, ಅದ್ದೂರಿ ಮಹೂರ್ತ ಮಾಡಿ, ಸಾಕಷ್ಟು ಪ್ರಚಾರ ಕೊಟ್ಟು ಬಿಡುಗಡೆಗೊಂಡಿದ್ದ "ಆಟ" ಚಿತ್ರದ ಕಥೆ ಅಷ್ಟೇನಾ ?

    English summary
    Producer Shailendra Babu's son new comer Sumant Shialendra's Aata movie failed in Box Office. Shivarajkumar's Om replaced Aata movie in several theaters in Bangalore.
    Sunday, December 4, 2011, 11:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X