ಪಾರಿಜಾತ ಹಿಡಿದು ಕುಣಿಯುತ್ತಿರುವ ಮನಸಾರೆ ಜೋಡಿ

By Mahesh

Diganth and Aindrita Pair in Parijatha
ಸಮುದ್ರ ಮಥನ ಕಾಲದಲ್ಲಿ ಜನಿಸಿದ ದೇವಪುಷ್ಪ ಪಾರಿಜಾತದ ಹಿಂದೆ ಬಿದ್ದಿದ್ದಾರೆ ಮನಸಾರೆ ಜೋಡಿ. ದಿಗಂತ್ ಹಾಗೂ ಐಂದ್ರಿತಾ ರೇ ಸಿನಿರಸಿಕರ ಮನಸೂರೆ ಮಾಡಲು ಮತ್ತೆ ಒಂದಾಗಿ ನಟಿಸುತ್ತಿದ್ದಾರೆ. ಸುಮಾರು ಒಂದೂವರೆ ವರ್ಷಗಳ ನಂತರ ಈ ಹಿಟ್ ಜೋಡಿ ಮತ್ತೆ ಮೈಸೂರಿನಲ್ಲಿ ಥಕ ಥೈ ಎಂದು ಕುಣಿಯುತ್ತಿದೆ.

ಡ್ಯಾನ್ಸ್ ಕೋರಿಯೋಗ್ರಫರ್ ಆಗಿ ಕನ್ನಡ ಚಿತ್ರರಂಗದಲ್ಲಿ ತಕ್ಕಮಟ್ಟಿನ ಹೆಸರು ಗಳಿಸಿರುವ ಪ್ರಭು ಶ್ರೀನಿವಾಸ್ ಈ ಚಿತ್ರಕ್ಕೆ ನಿರ್ದೇಶಕರು. ಮಧುರ ಗೀತೆಗಳ ಮೋಡಿಗಾರ ಮನೋಮೂರ್ತಿ ಸಂಗೀತ ಚಿತ್ರದ ಹೈಲೈಟ್. ಅರಮನೆ ನಗರಿ ಮೈಸೂರಿನಲ್ಲಿ ಜನವರಿ 24 ರಂದು ಸೆಟ್ಟೇರಿರುವ ಈ ಚಿತ್ರದ ಚಿತ್ರೀಕರಣ ಮಾನಸ ಗಂಗೋತ್ರಿಯಲ್ಲಿ ಕಳೆದ ವಾರದಿಂದ ಚಿತ್ರೀಕರಣ ಆರಂಭಿಸಿದೆ. ಒಂದೇ ಹಂತದಲ್ಲಿ ಪೂರ್ತಿ ಚಿತ್ರೀಕರಣ ಮುಗಿಸುವ ಯೋಜನೆಯನ್ನು ನಿರ್ದೇಶಕರು ಹಾಕಿಕೊಂಡಿದ್ದಾರೆ. ಅದೇನೂ ಕಷ್ಟವಾಗದು ಬಿಡಿ.

ಮತ್ತೊಂದು ರಿಮೇಕ್ : ಕಥೆ, ಚಿತ್ರಕಥೆ, ಬೇಕಾದರೆ ಟ್ಯೂನ್ ಕೂಡಾ ಇದೆ. ಚಿತ್ರೀಕರಣ ಮಾತ್ರ ಕನ್ನಡ ನಾಡಿನಲ್ಲಿ ಮಾಡಿದರೆ ಸಾಕು ಮಿಕ್ಕ ಕಚ್ಚಾವಸ್ತು ತಮಿಳಿನಿಂದ ಎರವಲು ಪಡೆಯಬಹುದು. ಬಾಸ್ ಎಂಗಿರ ಬಾಸ್ಕರನ್ ಎಂಬ ತಮಿಳು ಚಿತ್ರ ( ಇಂಗ್ಲೀಷ್ ಅರ್ಥ: Bhaskaran alias Boss)ದಲ್ಲಿ ಆರ್ಯ, ನಯನತಾರಾ ಮಾಡಿದ್ದ ಪಾತ್ರವನ್ನೇ ಇಲ್ಲಿ ದಿಗಂತ್, ಐಂದ್ರಿತಾ ರಿಪೀಟ್ ಮಾಡುತ್ತಿದ್ದಾರೆ. ಸೋಮಾರಿ ಪಾತ್ರಗಳಲ್ಲಿ ಕಾಣಿಸಿಕೊಂಡು ಖ್ಯಾತಿ ಗಳಿಸಿರುವ ಧೂದ್ ಪೇಡ ದಿಗಂತ್ ಹೇಳಿ ಮಾಡಿಸಿದಂಥ ಪಾತ್ರ ಈ ಚಿತ್ರದಲ್ಲಿದೆ. ಆದರೆ, ಹಳಸಿದ ಚಿತ್ರಾನ್ನಕ್ಕೆ ಹೊಸ ಒಗ್ಗರಣೆ ಹಾಕಿ ಹೊಸ ರುಚಿ ಎಂದಾಗ ಸಹಿಸುವುದು ಅಚ್ಚ ಕನ್ನಡಿಗರಿಗೆ ಕಷ್ಟ ಕಷ್ಟ. ಕಾಸ್ಮೊಪಾಲಿಟನ್ ಪ್ರಜೆಗಳಿಗೆ ಎಲ್ಲವೂ ಓಕೆ.

More from Filmibeat

English summary
Manasare fame hit pair of Diganth and Aindrita Ray Starrer Parijatha movie shooting is under progress in Palace city Mysore. Movie is remake of Tamil hit Boss Engira Bhaskaran and is directed by Dance choreographer turned director Prabhu sreenivas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X