ಮುಂಬೈನಲ್ಲಿ ರೂಪದರ್ಶಿ ಪೂನಂ ಪಾಂಡೆ ಮಾದಕ ನಡಿಗೆ
ರೂಪದರ್ಶಿ ಪೂನಂ ಪಾಂಡೆ ಕನಸುಗಳು ಒಂದೂ ಕೈಗೂಡಲಿಲ್ಲ. ವಿಶ್ವಕಪ್ ಗೆದ್ದ ಭಾರತ ತಂಡದ ಮುಂದೆ ಬೆತ್ತಲಾಗುವ ಆಕೆಯ ಕನಸು ಕನಸಾಗಿಯೇ ಉಳಿಯಿತು. ಈಗ ಮತ್ತೊಂದು ಪ್ರಾಮಿಸ್ ಮಾಡಿದ್ದಾರೆ ಪೂನಂ. ಮುಂಬೈನಲ್ಲಿ ಅಸಭ್ಯ ಕಾಲ್ನಡಿಗೆ (ಸ್ಲಟ್‌ವಾಕ್) ಜಾಥಾ ನೇತೃತ್ವ ವಹಿಸುವುದಾಗಿ ತಿಳಿಸಿದ್ದಾರೆ. ಸ್ಲಟ್ ವಾಕ್ ಎಂದರೇನು?
ದೆಹಲಿ ಮತ್ತು ಮುಂಬೈನಲ್ಲಿ ಈ ಅಸಭ್ಯ ನಡಿಗೆ ನಡೆಯಲಿದೆ. ಈ ನಡಿಗೆಯಲ್ಲಿ ತಾವು ಭಾಗವಹಿಸುವುದಾಗಿ ಪೂನಂ ತಿಳಿಸಿದ್ದಾರೆ. ಟೊರೊಂಟೋ ಮತ್ತು ಮೊಲ್ಬೋರ್ನ್‌ನಲ್ಲಿ ಆರಂಭವಾದ ಈ ರೀತಿಯ ನಡಿಗೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಇದೇ ರೀತಿಯ ನಡಿಗೆ ಭಾರತಕ್ಕೂ ಅಡಿಯಿಟ್ಟಿದೆ.
ಇದಕ್ಕೆ ಹಿಂದಿಯಲ್ಲಿ "ಬೇಷರ್ಮಿ ಮೋರ್ಚಾ" ಎಂದು ಹೆಸರಿಡಲಾಗಿದೆ. ಕನ್ನಡದಲ್ಲಿ ಇದನ್ನು ನಾವು ಸಭ್ಯವಾಗಿ "ಮಾದಕ ನಡಿಗೆ, ಅಸಭ್ಯ ನಡಿಗೆ, ಅಶ್ಲೀಲ ನಡಿಗೆ..." ಎಂದು ಕರೆಯಬಹುದು. ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಬಾಳಿಕ ಹಾಗೂ ಲೈಂಗಿಕ ಕಿರುಕುಳನ್ನು ವಿರೋಧಿಸಿ ಈ ನಡಿಗೆ ನಡೆಯುತ್ತಿದೆ. ಸೆಪ್ಟೆಂಬರ್‌ನಲ್ಲಿ ಮುಂಬೈನಲ್ಲಿ ಸ್ಲಟ್‌ವಾಕ್ ನಡೆಯಲಿದೆ. (ಏಜೆನ್ಸೀಸ್)


Click it and Unblock the Notifications











