ಪ್ರಕಾಶ್ ರೈ ನಿರ್ಮಾಣದಲ್ಲಿ ಕನ್ನಡಕ್ಕೆ ತೆಲುಗಿನ ಐತೇ
'ನಾನು ನನ್ನ ಕನಸು' ಗೆಲುವಿನ ಸಂತಸದಲ್ಲಿರುವ ಪ್ರಕಾಶ್ ರೈ ಅವರ ಡ್ಯ್ಯುಯೆಟ್ ಮೂವೀಸ್ ಮತ್ತು ಮೀಡಿಯಾ ಹೌಸ್ ಚಿತ್ರ ನಿರ್ಮಾಣ ಸಂಸ್ಥೆಗಳು ಮತ್ತೆರಡು ಚಿತ್ರಗಳನ್ನು ನಿರ್ಮಿಸಲು ಮುಂದಾಗಿವೆ. ಮೀಡಿಯಾ ಹೌಸ್ ನ ಪಾಲುದಾರದಲ್ಲಿ ಒಬ್ಬರಾದ ಬಿ ಸುರೇಶ್ ನಿರ್ದೇಶನದಲ್ಲಿ ಒಂದು ಚಿತ್ರ ಮೂಡಿಬರಲಿದೆ. ಈ ಚಿತ್ರಗಳಿಗೆ ಸಂಬಂಧಿಸಿದ ಸ್ಕ್ರಿಪ್ಟ್ ವರ್ಕ್ ಈಗಾಗಲೆ ಸಿದ್ಧವಾಗಿದೆ.
ಪ್ರಕಾಶ್ ರೈ ಮತ್ತೊಂದು ಚಿತ್ರವನ್ನು ನಿರ್ಮಿಸಲಿದ್ದು ಅವರ ನಿರ್ದೇಶನದ ಜವಾಬ್ದಾರಿಯನ್ನು ದಯಾಳ್ ಪದ್ಮನಾಭನ್ ಗೆ ವಹಿಸಿದ್ದಾರೆ. ತೆಲುಗಿನ 'ಐತೇ' ಎಂಬ ಯಶಸ್ವಿ ಚಿತ್ರವನ್ನು ಕನ್ನಡಕ್ಕೆ ತರುವ ಪ್ರಯತ್ನವನ್ನು ಪ್ರಕಾಶ್ ರೈ ಮಾಡುತ್ತಿದ್ದಾರೆ. ಚಿತ್ರದ ತಾರಾಗಣ, ತಾಂತ್ರಿಕ ವರ್ಗದ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ.
ಬಿ ಸುರೇಶ್ ನಿರ್ದೇಶಿಸಲಿರುವ ಚಿತ್ರಕ್ಕೆ 'ಮಿಠಾಯಿ' ಎಂದು ಹೆಸರಿಡಲಾಗಿದೆ ಎಂಬುದು ಸದ್ಯದ ಮಾಹಿತಿ. ತನ್ನ ಸುತ್ತಮುತ್ತಲಿನ ಜನಕ್ಕೆ ಪ್ರೀತಿ ಹಂಚುವ ವ್ಯಕ್ತಿಯಾಗಿ ಪ್ರಕಾಶ್ ರೈ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ಒಟ್ಟಿನಲ್ಲಿ ಪ್ರಕಾಶ್ ರೈ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಪ್ರಯೋಗಗಳನ್ನು ಮಾಡಲು ಸಿದ್ಧರಾಗಿದ್ದಾರೆ.


Click it and Unblock the Notifications











