For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿಹೆಜ್ಜೆಯಲ್ಲಿ ಪ್ರಣಯರಾಜ ಶ್ರೀನಾಥ್ ಜತೆ ಮಾತುಕತೆ

  By Rajendra
  |
  ಪ್ರಣಯರಾಜ ಶ್ರೀನಾಥ್ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ. ಮೂರು ದಶಕಗಳ ಕಾಲ ಕನ್ನಡ ಚಿತ್ರರಸಿಕರನ್ನು ತಮ್ಮ ವಿಭಿನ್ನ ಅಭಿನಯದಿಂದ ಸೆಳೆದವರು. ಶ್ರೀನಾಥ್ ಮೂಲ ಹೆಸರು ನಾರಾಯಣ ಸ್ವಾಮಿ. ಉದಯ ವಾಹಿನಿಯ ಉಪಾಧ್ಯಕ್ಷರಾಗಿರುವ ಶ್ರೀನಾಥ್ 'ಆದರ್ಶ ದಂಪತಿಗಳು' ಗೇಮ್ ಶೋ ಮೂಲಕ ಇಂದಿನ ಕಾಲದ ಪ್ರೇಕ್ಷಕರಿಗೂ ಹತ್ತಿರವಾಗಿದ್ದಾರೆ.

  ರಂಗಭೂಮಿ ಹಿನ್ನೆಲೆಯಿಂದ ಬಂದ ಶ್ರೀನಾಥ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು ಪುಟ್ಟಣ್ಣ ಕಣಗಾಲ್. 'ಲಗ್ನ ಪತ್ರಿಕೆ' ಚಿತ್ರದ ಮೂಲಕ ಆರಂಭವಾದ ಅವರ ಸಿನಿ ಪಯಣ 400 ಚಿತ್ರಗಳ ಮೈಲುಗಲ್ಲಿಗೆ ಸಾಕ್ಷಿಯಾಯಿತು. ಶ್ರೀನಾಥ್ ಅವರು ಪೂರ್ಣ ಪ್ರಮಾಣದ ನಾಯಕರಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು 'ಮಧುರ ಮಿಲನ' ಚಿತ್ರದ ಮೂಲಕ.

  ಕೊಲಂಬಿಯಾ ವಿಶ್ವವಿದ್ಯಾಲಯ ಶ್ರೀನಾಥ್ ಅವರಿಗೆ ಡಾಕ್ಟರೇಟ್ ಗೌರವವನ್ನು ಕೊಟ್ಟು ಸನ್ಮಾನಿಸಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸುವ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ನವೆಂಬರ್ 12ರಂದು ಸಂಜೆ 4 ಗಂಟೆಗೆ ಡಾ.ಶ್ರೀನಾಥ್ ಭಾಗವಹಿಸಲಿದ್ದಾರೆ. ಅವರ ಸಿನಿಮಾ ಜೀವನದ ಅನುಭವಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲಿದ್ದಾರೆ.

  ಬೆಸುಗೆ, ಶುಭಮಂಗಳ, ಮಾನಸ ಸರೋವರ, ಗರುಡ ರೇಖೆ, ಪಾಯಿಂಟ್ ಪರಿಮಳ, ಕಿಲಾಡಿ ಜೋಡಿ, ಎರಡು ರೇಖೆಗಳು, ಪಟ್ಟಣ್ಣಕ್ಕೆ ಬಂದ ಪತ್ನಿಯರು ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯಕ್ಕೆ ಕಿರುತೆಯಲ್ಲೂ ಬ್ಯುಸಿಯಾಗಿದ್ದು ಬಂಗಾರ, ಜಗಳಗಂಟಿಯರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Pranaya Raja Srinath (King of Romance) because of his success in various movies involving the love stories is the chief guest at the monthly program of Karnataka Chalanachitra Academy ‘Belli Hejje’. It is slated for 12th of November at Badami House in Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X