ವಾಂಖೆಡೆ ಮೈದಾನದಲ್ಲಿ ಸಿನಿಮಾ ತಾರೆಗಳ ಹಂಗಾಮ

By Rajendra

Stars watches world cup finals
ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಹಲವಾರು ಸಿನಿಮಾ ತಾರೆಗಳು ಶೂಟಿಂಗ್‌ಗೆ ಚಕ್ಕರ್ ಹಾಕಿ ಮುಂಬೈನ ವಾಂಖೆಡೆ ಮೈದಾನಕ್ಕೆ ಬಂದಿಳಿದಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಹಿಂದಿ ಚಿತ್ರರಂಗದ ನಟ ಹಾಗೂ ರಾಜಕಾರಣಿ ವಿನೋದ್ ಖನ್ನ ಅವರು ಭಾರತ ಶ್ರೀಲಂಕಾ ಪಂದ್ಯವನ್ನು ಸವಿದವರಲ್ಲಿ ಪ್ರಮುಖರು.

ತೆಲುಗು ಚಿತ್ರರಂಗದ ಮಹೇಶ್ ಬಾಬು, ವಿಕ್ಟರಿ ವೆಂಕಟೇಶ್ ಹಾಗೂ ಸಿದ್ಧಾರ್ಥ್ ಕೂಡ ವಾಂಖೆಡೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಉದ್ಯಮಿಗಳಾದ ಅಂಬಾನಿ, ವಿಜಯ್ ಮಲ್ಯ ಕೂಡ ಪಂದ್ಯದರೋಚಕ ಕ್ಷಣಗಳನ್ನು ಕಂಡು ಬೆಕ್ಕಸ ಬೆರಗಾದರು. ಅಮೀರ್ ಖಾನ್ ಹಾಗೂ ಅವರ ಪತ್ನಿ ಕಿರಣ್ ರಾವ್, ಸಂಗೀತ ಬಿಜಲಾನಿ, ಸೈಫ್ ಅಲಿ ಖಾನ್, ಪ್ರೀತಿ ಜಿಂಟಾ, ಶಾಹಿದ್ ಕಪೂರ್, ಸುನಿಲ್ ಶೆಟ್ಟಿ, ರಣಬೀರ್ ಕಪೂರ್ ಅವರಂತೂ ಪಂದ್ಯವನ್ನು ಆದ್ಯಂತ ಸವಿದರು.

ಹಲವಾರು ಪಂದ್ಯಗಳು ಚೆನ್ನೈನಲ್ಲಿ ನಡೆದಾಗಲೂ ರಜನಿಕಾಂತ್ ಮೈದಾನಕ್ಕೆ ಹೋಗಿ ಪಂದ್ಯದ ರೋಚಕ ಕ್ಷಣಗಳನ್ನು ಸವಿದಿರಲಿಲ್ಲ. ಆದರೆ ಅವರು ಫೈನಲ್ ಪಂದ್ಯಕ್ಕೆ ತನ್ನ ಪುತ್ರಿಯರ ಜೊತೆ ಆಗಮಿಸಿದ್ದದ್ದು ಪ್ರೇಕ್ಷಕರ ಸಂಭ್ರಮವನ್ನು ಇಮ್ಮಡಿಸಿತ್ತು. ಸಾಮಾನ್ಯವಾಗಿ ಕ್ರೀಡೆಗಳೆಂದರೆ ಗಾವುದ ದೂರ ಉಳಿಯುವ ರಜನಿಕಾಂತ್ ಶನಿವಾರದ ಪಂದ್ಯವನ್ನು ತುಂಬು ಉತ್ಸಾಹದಿಂದ ಸವಿದದ್ದು ವಿಶೇಷ.

More from Filmibeat

English summary
Superstar Rajinikanth was spotted at Wankhade stadium in Mumbai watching world cup cricket finals. Stars at the World Cup final included Rajinikanth, Aamir Khan, Saif Ali Khan and Sunil Shetty, while other celebrities include Mukesh and Nita Ambani. From Tollywood, Prince Maheshbabu, victory Venkatesh and Siddharth are seen at the stadium.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X