ಹಿಂದಿ ರಿಮೇಕ್ ಚಿತ್ರದಲ್ಲಿ ವಿಷ್ಣು, ಸುದೀಪ್ ಜೋಡಿ

ಸದ್ಯ ವರ್ಮಾರ 'ರಣ್' ಚಿತ್ರದಲ್ಲಿ ಬಿಜಿಯಾಗಿರುವ ಸುದೀಪ್ ಈ ಚಿತ್ರದ ಶೂಟಿಂಗ್ ಮುಗಿದ ಮೇಲೆ ಕನ್ನಡ 'ಸರಕಾರ' ಚಿತ್ರಕ್ಕೆ ಕೈಹಾಕಲಿದ್ದಾರೆ. ಹಿಂದಿಯಲ್ಲಿ 'ಸರ್ಕಾರ್' ಆದರೆ ಕನ್ನಡದಲ್ಲಿ ಇದು 'ಸರಕಾರ'. ವರ್ಮಾರ ಚಿತ್ರದಲ್ಲಿ ನಟಿಸುವುದು ಒಂದು ಹೊಸ ಅನುಭವವಾದರೆ ಅವರ ಚಿತ್ರವನ್ನು ರಿಮೇಕ್ ಮಾಡುವುದು ಇನ್ನೊದು ರೀತಿಯ ಅನುಭವವೆನ್ನುತ್ತಾರೆ ಸುದೀಪ್.
ಮೂಲ ಹಿಂದಿ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಟಿಸಿದ್ದರು. ಕನ್ನಡದಲ್ಲಿ ಅಮಿತಾಬ್ ಪಾತ್ರವನ್ನು ವಿಷ್ಣುವರ್ಧನ್ ಹಾಗೂ ಅಭಿಷೇಕ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ನೋಡಿದ ದಿನವೇ ಇದನ್ನು ಕನ್ನಡಕ್ಕೆ ರಿಮೇಕ್ ಮಾಡಲು ಸುದೀಪ್ ಯೋಚಿಸಿದ್ದರಂತೆ. ಆದರೆ ವಿಷ್ಣುವರ್ಧನ್ ಮೊದಲು ಒಪ್ಪದಿದ್ದ ಕಾರಣ ಯೋಜನೆಯನ್ನು ಮುಂದೂಡಿದರಂತೆ. ಈಗ ವಿಷ್ಣು ಒಪ್ಪಿದ್ದರಿಂದ ಸದ್ಯದಲ್ಲೇ ಚಿತ್ರ ಸೆಟ್ಟೇರಲಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
kannada movie sudeep ವಿಷ್ಣುವರ್ಧನ್ vishnuvardhan ಸುದೀಪ್ remake ರೀಮೇಕ್ ಅಮಿತಾಬ್ ಬಚ್ಚನ್ amitabh bachchan abhishek bachchan ಅಭಿಷೇಕ್ ಬಚ್ಚನ್ ram gopal varma ರಾಮ್ ಗೋಪಾಲ್ ವರ್ಮ ಸರ್ಕಾರ್ film sarkar


Click it and Unblock the Notifications