ಶಾರುಖ್ ಬಕ್ರೀದ್ ಗೆ ಬೆಂಗಳೂರು ಬಕ್ರಾಗಳು
ಬಕ್ರೀದ್ ಹಬ್ಬದ ಆಚರಣೆ ಇದೇ ತಿಂಗಳು 7ಕ್ಕೆ. ಈ ಹಬ್ಬದಲ್ಲಿ ನಟ ಶಾರುಖ್ ಖಾನ್ ಉಪಯೋಗಿಸಲಿದ್ದಾರೆ ಬೆಂಗಳೂರು ಬಕ್ರಾಗಳನ್ನು. ಇದು ನಾನ್ ವೆಜ್ ಅಡಿಗೆಗೆ ಖ್ಯಾತಿ ಪಡೆದ ಹಬ್ಬ. ಶಾರುಖ್ ತಾಯಿ ಬೆಂಗಳೂರು ಮೂಲದವರು. ಹಾಗಾಗಿ ಶಾರುಖ್ ಕುಟುಂಬಕ್ಕೆ ಬೆಂಗಳೂರು ಬಕ್ರಾಗಳೆಂದರೆ ಬಲು ಪ್ರೀತಿಯಂತೆ.
ಶಾರುಖ್ ನ ಮಹಾ ಅಭಿಮಾನಿ ಮೊಹಮ್ಮದ್ ಎಮ್ ಡಿ ಇಬ್ರಾಹಿಮ್, ಬಕ್ರೀದ್ ಗಾಗಿ ಪ್ರತಿವರ್ಷ 3 ಮೇಕೆ ಹಾಗೂ 3 ಕುರಿಗಳನ್ನು ಕಳುಹಿಸುತ್ತಿದ್ದರಂತೆ. ಆದರೆ ಈ ವರ್ಷ 2 ಆಡುಗಳನ್ನು ಕಳುಹಿಸಲು ಪ್ಲಾನ್ ಮಾಡಿದ್ದ ಇಬ್ರಾಹಿಮ್, ಕಿಂಗ್ ಖಾನ್ ಅತಿಹತ್ತಿರದ ಸಂಬಂಧಿ 'ಮಹಾರಾಜ್ ಫರ್ನಿಚರ್' ಕಡೆಯಿಂದ ಒಬ್ಬರು ಬಂದು ಕೇಳಿದ್ದರಿಂದ ಒಟ್ಟೂ 6 ಕುರಿ-ಮೇಕೆಗಳನ್ನು ಕಳಿಸಲು ಒಪ್ಪಿದ್ದಾಗಿ DNA ಗೆ ತಿಳಿಸಿದ್ದಾರೆ.
ಬೆಂಗಳೂರು ಬಕ್ರಾಗಳು ಎಷ್ಟು ಫೇಮಸ್ ಎಂದು ಬಾಲಿವುಡ್ ಗೂ ತಿಳಿದಿದೆ. ಈದ್ ಮಿಲಾದ್ ಗೆ ಶಾರುಖ್ ಮನೆಗೆ ಬೆಂಗಳೂರು ಬಕ್ರಾಗಳೇ ಬೇಕು ಅಂದ್ರೆ ಅದೇನು ಸಾಮಾನ್ಯದ ಮಾತೇ? ಬಕ್ರಾಗಳು ಈಗ ಸಖತ್ ಖುಷಿಯಾಗ್ತಾರೇನೋ. ಹೌದು, ಬಕ್ರಾಗಳು ಅಂದ್ರೆ ಕುರಿಗಳು ಸಾರ್ ಮೇಕೆಗಳು ಮೇಡಮ್! ಅದನ್ನು ತಿಳ್ಕೊಳ್ದೇ ಹೋದ್ರೆ ನೀವೇ ಬಕ್ರಾಗಳಾಗ್ತೀರಾ. ಆದ್ರೂ, ಶಾರುಖ್ ಹೊಟ್ಟೆ ಸೇರೋ ಭಾಗ್ಯ ನಮ್ಗಿಲ್ಲ ಬಿಡಿ.


Click it and Unblock the Notifications











