twitter
    For Quick Alerts
    ALLOW NOTIFICATIONS  
    For Daily Alerts

    ಲಿಮ್ಕಾ ದಾಖಲೆಗೆ ಶಿವರಾಜ್ ಕುಮಾರ್ ಚಿತ್ರ ಸುಗ್ರೀವ

    By Rajendra
    |

    ಈಗಾಗಲೆ ಸೆಂಚುರಿ ವೀರನಾಗಿರುವ ಶಿವಣ್ಣನ ಮುಕುಟಕ್ಕೆ ಮತ್ತೊಂದು ಗರಿ ಇದು.ಶಿವರಾಜ್ ಕುಮಾರ್ ಅಭಿನಯದ 'ಸುಗ್ರೀವ' ಚಿತ್ರ ಲಿಮ್ಕಾ ಬುಕ್ ಆಫ್ ರೆಕಾರ್ಡ‌ನಲ್ಲಿ ಸ್ಥಾನ ಪಡೆದಿದೆ. ಕೇವಲ ಹದಿನೆಂಟು ಗಂಟೆಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲಾಗಿತ್ತು. ಹತ್ತು ಮಂದಿ ನಿರ್ದೇಶಕರ ಕನಸಿನ ಕೂಸು ಸುಗ್ರೀವ.

    ಮುಂಜಾನೆ ಆರು ಗಂಟೆಗೆ ಆರಂಭವಾದ ಚಿತ್ರೀಕರಣ ಮಧ್ಯರಾತ್ರಿ 12 ಗಂಟೆಗೆ ಪ್ಯಾಕಪ್ ಹೇಳುವ ಮೂಲಕ ಮುಗಿದಿತ್ತು. ತಂದೆ ಮತ್ತು ಮಗನ ನಡುವಿನ ಸಂಬಂಧ ಕುರಿತ ಸಾಹಸಭರಿತ ಕಥಾಹಂದರದ ಚಿತ್ರವಿದು. ಯಜ್ಞಾ ಶೆಟ್ಟಿ, ನಟ ದಿಲೀಪ್ ರಾಜ್, ಹರೀಶ್ ರಾಜ್ ಪಾತ್ರವರ್ಗದಲ್ಲಿದ್ದರು. ಚಿತ್ರದ ಪ್ರಧಾನ ನಿರ್ದೇಶಕ ಪ್ರಶಾಂತ್ ಮಂಪುಲ್ಲಿ.

    ಈ ಚಿತ್ರದ ದಾಖಲೆಯನ್ನು ಮುರಿಯಲು ಮತ್ತೊಂದು ಚಿತ್ರವನ್ನು 18 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಚಿತ್ರೀಕರಿಸುವುದಾಗಿ ತಿಳಿಸಿದ್ದಾರೆ. ಆದರೆ ಈ ಬಾರಿ ನಿರ್ದೇಶಕರು ಕನ್ನಡಕ್ಕೆ ಬದಲಾಗಿ ತಮಿಳಿನಲ್ಲಿ ಹೊಸ ದಾಖಲೆ ನಿರ್ಮಿಸಲು ಹೊರಟಿರುವುದು ವಿಶೇಷ. ಸುಗ್ರೀವ ಚಿತ್ರ ತಮಿಳು, ತೆಲುಗು ಭಾಷೆಗಳಲ್ಲೂ ಬರಲಿದೆ ಎಂದಿದ್ದಾರೆ ನಿರ್ದೇಶಕ ಪ್ರಶಾಂತ್ ಮಂಪುಲ್ಲಿ.

    ಅಣಜಿ ಫಿಲಂ ಲಾಂಛನದಲ್ಲಿ ಎಂ. ರುದ್ರೇಶ್ ಅರ್ಪಿಸಿ, ನಿರ್ಮಾಪಕ ಅಣಜಿ ನಾಗರಾಜ್ ನಿರ್ಮಿಸಿದ್ದ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಯಜ್ಞ ಶೆಟ್ಟಿ, ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಇದರ ಚಿತ್ರೀಕರಣಕ್ಕಾಗಿ 1,200 ಜನ ಕಾರ್ಮಿಕರು, 10 ಜನ ನಿರ್ದೇಶಕರು, ಹಾಗೂ ಛಾಯಾಗ್ರಾಹಕರು ಕೆಲಸ ಮಾಡಿದ್ದರು. ಇದೊಂದು ಪಕ್ಕಾ ಕಮರ್ಷಿಯಲ್ ಸಿನೆಮಾ ಆಗಿದ್ದು ಮೂರು ಫೈಟ್ಸ್, 3 ಹಾಡುಗಳನ್ನು ಕೂಡ ಚಿತ್ರದಲ್ಲಿ ಅಳವಡಿಸಲಾಗಿತ್ತು. ಸುಗ್ರೀವ ಚಿತ್ರ ವಿಮರ್ಶೆ.

    English summary
    Prashant Mampully’s Kannada movie 'Sugreeva' has entered the Limca Book of National Record for finishing the entire shoot of the film within 18 hours. The Shivarajkumar-Yajna Shetty-Dilip Raj starrer movie is action-based and revolves around the father-son relationship.
    Tuesday, May 3, 2011, 16:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X