For Quick Alerts
  ALLOW NOTIFICATIONS  
  For Daily Alerts

  ಬ್ಯಾಂಕಾಕ್ ನಲ್ಲಿ ಹಣೆಗೆ ವಿಭೂತಿ ಹಚ್ಚಿರುವ ಶಿವಣ್ಣ

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೀಗ ಬ್ಯಾಂಕಾಕ್ ನಲ್ಲಿದ್ದಾರೆ. ಅವರು ಅಲ್ಲಿನ ವಿಮಾನ ನಿಲ್ದಾಣದಲ್ಲಿ 'ಶಿವ' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಅಲ್ಲಿ ವಿಮಾನ ನಿಲ್ದಾಣದ ಸುತ್ತಮುತ್ತ ಹಾಗೂ ಬ್ಯಾಂಕಾಕ್ ಸಿಟಿಯ ಕೆಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಿದ್ದಾರೆಂಬ ತಾಜಾ ಸುದ್ದಿ ನಮ್ಮ ಒನ್ ಇಂಡಿಯಾಕ್ಕೆ ಇದೀಗ ದೊರೆತಿದೆ.

  ಹಣೆಗೆ ವಿಭೂತಿ ಬಳಿದುಕೊಂಡು ಶಿವಣ್ಣ ಶಾಟ್ಸ್ ಗೆ ಸಿದ್ಧವಾಗಿದ್ದು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಸಹನಿರ್ದೇಶಕರೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ. ನಟಿ ರಾಗಿಣಿ ಕೂಡ ಶೀಘ್ರದಲ್ಲೇ ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಅವರು ಶಿವಣ್ಣನೊಂದಿಗೆ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿದೆ.

  ಓಂ ಪ್ರಕಾಶ್ ರಾವ್ ನಿರ್ದೇಶನದ ಶಿವ ಚಿತ್ರವನ್ನು ಶಿವಣ್ಣರ ಮೊದಲ ಚಿತ್ರ 'ಆನಂದ್' ಬಿಡುಗಡೆಯಾದ ದಿನ, ಜೂನ್ 16 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಪೋಸ್ಟ್ ಪ್ರಾಡಕ್ಷನ್ ಮುಗಿಸಿ ಅಂದೇ ತೆರೆಗೆ ಬರಲಿದೆ ಎನ್ನಲಾಗಿದೆ. ಈ ಎಲ್ಲಾ ಮಾಹಿತಿ ಬ್ಯಾಕಾಂಕ್ ನಿಂದ ನೇರವಾಗಿ ಒನ್ ಇಂಡಿಯಾ ಕನ್ನಡಕ್ಕೆ ಲಭಿಸಿದೆ. (ಒನ್ ಇಂಡಿಯಾ ಕನ್ನಡ)

  English summary
  Shivrajkumar Movie Shiva Shooting is going on Bangkok now. Shooting at Bangkok airport and some other places of city, under In Om Prakash Rao's Direction. Ragini Dwivedi to join for a song shoot. Shivanna dressed up with vibhooti on forehead and some sequence might have been shot. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X