ಸೌಂದರ್ಯ ರಜನಿಕಾಂತ್ ವೆಡ್ಸ್ ಅಶ್ವಿನಿ ಕುಮಾರ್!
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಸೌಂದರ್ಯ ಇಂದು (ಆ.3) ಅಶ್ವಿನ್ ಕುಮಾರ್ ಕೈಹಿಡಿಯುವ ಮೂಲಕ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಇವರಿಬ್ಬರ ವಿವಾಹ ಮಹೋತ್ಸವವು ಚೆನ್ನೈನ ಮೇಯಮ್ಮಾಯ್ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು.
ಜಯಲಲಿತಾ ಸೇರಿದಂತೆ ಚಿತ್ರರಂಗದ ತಾರೆಗಳು ,ರಾಜಕಾರಣಿಗಳು ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಮದುವೆ ನಡೆಯಿತು. ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ನೂತನ ದಂಪತಿಗಳನ್ನು ಗುರು ಹಿರಿಯರು ಆಶೀರ್ವದಿಸಿದರು. ರಿಯಲ್ ಎಸ್ಟೇಟ್ ಉದ್ಯಮಿ ರಾಮ್ ಕುಮಾರ್ ಅವರ ಮಗ ಅಶ್ವಿನ್ ಕುಮಾರ್. ಈತ ಅಮೆರಿಕಾದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಸದ್ಯಕ್ಕೆ ತಂದೆಯ ವ್ಯವಹಾರಗಳನ್ನು ಅಶ್ವಿನ್ ನೋಡಿಕೊಳ್ಳುತ್ತಿದ್ದಾರೆ. ಇನ್ನು ಸೌಂದರ್ಯ ಆನಿಮೇಷನ್ ತಂತ್ರಜ್ಞಾನ ಪದವಿಧರೆ. ಸ್ವತಃ ರಜನಿಕಾಂತ್ ನಟಿಸುತ್ತಿರುವ ಸುಲ್ತಾನ್ ದಿ ವಾರಿಯರ್ ಎಂಬ ಆನಿಮೇಷನ್ ಚಿತ್ರಕ್ಕ್ಕೆ ಆಕ್ಷನ್, ಕಟ್ ಹೇಳಿದ್ದಾರೆ.
2010ರ ಫೆಬ್ರವರಿ ತಿಂಗಳಲ್ಲಿ ಸೌಂದರ್ಯ ನಿಶ್ಚಿತಾರ್ಥ ನಡೆದಿತ್ತು. ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಮತ್ತು ವಿವಿಐಪಿಗಳು ಸೇರಿದಂತೆ ಸಿನಿಮಾ ತಾರೆಗಳಾದ ಕಮಲ ಹಾಸನ್, ಅಜಿತ್ ಕುಮಾರ್, ಉದ್ಯಮಿಗಳು ಹಾಗೂ ರಾಜಕಾರಣಿಗಳು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Click it and Unblock the Notifications











