ಕಿಲಾಡಿ ಕಿಟ್ಟಿಯಾದ ನಟ ಶ್ರೀನಗರ ಕಿಟ್ಟಿ

By Rajendra

ಈಗಾಗಲೆ ಕನ್ನಡದಲ್ಲಿ ಹಲವಾರು 'ಕಿಲಾಡಿ' ಚಿತ್ರಗಳು ತೆರೆಕಂಡಿವೆ. ಉದಾಹರಣೆಗೆ ಹೇಳುವುದಾದರೆ, ಕಿಲಾಡಿ ಕಿಟ್ಟು, ಕಿಲಾಡಿ ಪುಟ್ಟು, ಕಿಲಾಡಿ ಜೋಡಿ, ಕಿಲಾಡಿ ಅಳಿಯ, ಕಿಲಾಡಿಗಳು ಇತ್ಯಾದಿ ಇತ್ಯಾದಿ. ಈಗ ಇದೇ ಸಾಲಿಗೆ ಮತ್ತೊಂದು ಕಿಲಾಡಿ ಚಿತ್ರ ಸೇರ್ಪಡೆಯಾಗುತ್ತಿದೆ. ಚಿತ್ರದ ಹೆಸರು 'ಕಿಲಾಡಿ ಕಿಟ್ಟಿ'.

ಈ ಚಿತ್ರದ ನಾಯಕ ನಟ ಶ್ರೀನಗರ ಕಿಟ್ಟಿ. ಇದು ತೆಲುಗಿನ ಯಶಸ್ವಿ ಚಿತ್ರ 'ಬ್ಲೇಡ್ ಬಾಬ್ಜಿ' ರೀಮೇಕ್. ಮೂಲ ಚಿತ್ರದಲ್ಲಿ ಅಲ್ಲರಿ ನರೇಶ್ ಅಭಿನಯಿಸಿದ್ದರು. 'ಕಿಲಾಡಿ ಕಿಟ್ಟಿ' ಚಿತ್ರಕ್ಕೆ ಇಬ್ಬರು ನಾಯಕಿಯರು ಹರಿಪ್ರಿಯಾ ಹಾಗೂ ನಿವೇದಿತಾ.

ಕಿಲಾಡಿ ಕಿಟ್ಟಿ ಚಿತ್ರದ ಪೂಜಾ ಕಾರ್ಯಕ್ರಮಗಳು ನೆರವೇರಿದ್ದು ಫೋಟೋ ಶೂಟ್ ಕೂಡ ಮುಗಿದಿದೆ. ನವೆಂಬರ್ 11ರಿಂದ ಬೆಂಗಳೂರಿನಲ್ಲಿ ರೆಗ್ಯೂಲರ್ ಶೂಟಿಂಗ್ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಹರಿಪ್ರಿಯಾ ಹಾಗೂ ಶ್ರೀನಗರ ಕಿಟ್ಟಿ ಜೊತೆಯಾಗಿ ಅಭಿನಯಿಸುತ್ತಿರುವ ಚಿತ್ರ ಇದಾಗಿದೆ.

ಕಿರುತೆರೆ ಧಾರಾವಾಹಿಗಳ ನಿರ್ಮಾಪಕ ಎಸ್ ವಿ ಶಿವಕುಮಾರ್ ಚಿತ್ರದ ನಿರ್ಮಾಪಕರು. ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು 'ಒಲವೇ ಮಂದಾರ' ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ರವಿಕುಮಾರ್ ಸನಾ ಛಾಯಾಗ್ರಹಣ ಚಿತ್ರಕ್ಕಿದೆ. ರೀಮೇಕ್ ಚಿತ್ರಗಳ ನಿರ್ದೇಶಕ ಅನಂತರಾಜು ಅವರ ಆಕ್ಷನ್, ಕಟ್‌ನಲ್ಲಿ ಚಿತ್ರ ಮೂಡಿಬರಲಿದೆ.

ಇದೊಂದು ಪಕ್ಕಾ ಹಾಸ್ಯ ಪ್ರಧಾನ ಚಿತ್ರವಾಗಿದ್ದು ಪಾತ್ರವರ್ಗದಲ್ಲಿ ರಂಗಾಯಣ ರಘು, ದಿಲೀಪ್ ರಾಜ್, ಶರಣ್, ಮುಖ್ಯಮಂತ್ರಿ ಚಂದ್ರು, ಆನಂದ್, ವಿ ಮನೋಹರ್, ಸತ್ಯಜಿತ್ ಹಾಗೂ ಮಿಮಿಕ್ರಿ ದಯಾನಂದ್ ಮುಂತಾದವರು ಇದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Kannada actor Srinagar Kitty new film titled as Kiladi Kitty. The movie is being directing by Ananthnaraju. This is a remake of Telugu hit movie Blade Babji starring Allari Naresh in the lead. Haripriya, Nivedhitha (Smitha), Rangayana Raghu, Dilipraj, Sharan, Mukyamantri Chandru are in the cast.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X