ಕನ್ನಡದ ತಾರಾ ಮೇಡಂಗೆ ಸಂತಸದ ದಿನಗಳು!

By Rajendra

ತಾರಾ ಮೇಡಂ ಒಂದು ಕಡೆ ಸುಮ್ಮನೆ ಕೂರುವವರಲ್ಲಾ. ಏನಾದರು ಮಾಡುತಿರುವ ತಮ್ಮ ನೀ ಸುಮ್ಮನಿರ ಬೇಡ ಎಂಬ ಮಾತಿಗೆ ಅವರು ಬದ್ಧ. ಈಗ ಅವರು ಹೊಸದಾಗಿ ಒಂದೆರಡು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ 'ಕಿರಾತಕ' ಚಿತ್ರವೂ ಒಂದು.

ಅಂದಹಾಗೆ ಈ 'ಕಿರಾತಕ' ತಮಿಳಿನ 'ಕಲಾವಾಣಿ' ಚಿತ್ರದ ರೀಮೇಕ್. ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಈ ಚಿತ್ರ ಉತ್ತಮ ವಿಮರ್ಶೆಯನ್ನೂ ಪಡೆದಿತ್ತು. ಮೂಲ ಚಿತ್ರದಂತೆ ಕನ್ನಡದಲ್ಲೂ ಬಹುತೇಕ ಹೊಸಬರೊಂದಿಗೆ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ ಎಂದು ತಾರಾ ಮೇಡಂ ವಿವರ ನೀಡಿದ್ದಾರೆ.

ತಮಿಳಿನಲ್ಲಿ ಸರಣ್ಯ ನಿರ್ವಹಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಯಶ್ ಪೋಷಿಸುತ್ತಿದ್ದಾರೆ. ನಾಯಕಿ ಪಾತ್ರಕ್ಕೆ ಹೊಸ ಮುಖವನ್ನು ಪರಿಚಯಿಸಲಾಗುತ್ತಿದೆ. 'ಕಿರಾತಕ' ಚಿತ್ರಕ್ಕೆ ಪ್ರದೀಪ್ ಅವರ ನಿರ್ದೇಶನವಿದೆ. ಬೆಂಗಳೂರಿನಲ್ಲಿ ಯಾಡ್ ಫಿಲಂ ನಿರ್ಮಿಸುತ್ತಿದ ಪ್ರದೀಪ್ ಪ್ರಸ್ತುತ ಚೆನ್ನೈನಲ್ಲಿ ನೆಲೆಸಿದ್ದಾರೆ.

ಸದ್ಯಕ್ಕೆ 'ಕಿರಾತಕ' ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಹೊಸಬರೊಂದಿಗೆ ನಟಿಸುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ ತಾರಾ. 'ಎರಡನೆ ಮದುವೆ' ಮುಂದುವರಿದ ಭಾಗ 'ಮತ್ತೊಂದು ಮದುವೇನಾ' ಚಿತ್ರದಲ್ಲೂ ತಾರಾ ಅಭಿನಯಿಸುತ್ತಿದ್ದಾರೆ. ಎರಡನೆ ಮದುವೆ ಚಿತ್ರಕ್ಕಿಂತಲೂ ಹೆಚ್ಚಿನ ಹಾಸ್ಯವನ್ನು ಈ ಚಿತ್ರದಲ್ಲಿ ನಿರೀಕ್ಷಿಸಬಹುದು ಎನ್ನುತ್ತಾರೆ ತಾರಾ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X