'ತಮಸ್ಸು' ಚಿತ್ರದಲ್ಲಿ ನಾಸರ್ ಗೆ ಸುದರ್ಶನ್ ಕಂಠದಾನ

By Rajendra

'ತಮಸ್ಸು' ಚಿತ್ರದ ಮುಖ್ಯ ಪಾತ್ರಧಾರಿ ನಾಸರ್ ಅವರಿಗೆ ಸುದರ್ಶನ್ ಅವರು ಧ್ವನಿ ನೀಡಿದ್ದಾರೆ. ಸುದರ್ಶನ್ ಕಳೆದ ಕೆಲವು ದಿನಗಳಿಂದ ಯಾರಿಗೂ ಕಂಠದಾನ ಮಾಡಿರಲಿಲ್ಲ. ಆದರೆ ಅಗ್ನಿಶ್ರೀಧರ್ ಅವರು ನಾಸರ್ ಅವರಿಗೆ ಸುದರ್ಶನ್ ಅವರ ಧ್ವನಿಯೇ ಬೇಕು ಎಂದು ಅವರಿಂದಲ್ಲೇ ಡಬ್ಬಿಂಗ್ ಮಾಡಿಸಿದ್ದಾರೆ.

'ಆ ದಿನಗಳು' ಎಂಬ ಯಶಸ್ವಿ ಚಿತ್ರ ಸೇರಿದಂತೆ ಕೆಲವು ಚಿತ್ರಗಳಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದ ಪತ್ರಕರ್ತ ಅಗ್ನಿಶ್ರೀಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಕಥೆಗಾರರಾಗಿರುವ ಅವರು ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಮೇಘ ಮೂವೀಸ್ ಲಾಂಛನದಲ್ಲಿ ಸೈಯದ್ ಅಮಾನ್ ಹಾಗೂ ರವೀಂದ್ರ ಅವರು ನಿರ್ಮಿಸುತ್ತಿರುವ 'ತಮಸ್ಸು' ಚಿತ್ರದ ಡಬ್ಬಿಂಗ್ ಮುಕ್ತಾಯವಾಗಿದೆ.

ವಿಶಿಷ್ಟ ಕಥಾ ಸಾರಾಂಶವುಳ್ಳ ಈ ಚಿತ್ರದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿದ್ದು, ಪದ್ಮಪ್ರಿಯ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಾಸರ್, ಹರ್ಷಿಕಾ ಪೂರ್ಣಚ್ಛ, ಆಸೀಫ್, ಸುಧಾ ಬೆಳವಾಡಿ, ಸತ್ಯ ಮುಂತಾದವರ ತಾರಾಬಳಗವೂ ಈ ಚಿತ್ರಕ್ಕಿದೆ.

ಸಂದೀಪ್ ಚೌಟರ ಸಂಗೀತವಿರುವ ಈ ಚಿತ್ರಕ್ಕೆ ಸುಂದರನಾಥ ಸುವರ್ಣ ಅವರ ಛಾಯಾಗ್ರಹಣವಿದೆ. ನಾಗೇಂದ್ರ ಅರಸ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಶಶಿಧರ್ ಅಡಪ ಕಲಾ ನಿರ್ದೇಶನ ಹಾಗೂ ಮಧುಗಿರಿ ಪ್ರಕಾಶ್ ಅವರ ನಿರ್ಮಾಣ ನಿರ್ವಹಣೆ 'ತಮಸ್ಸು ಚಿತ್ರಕ್ಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X