ದೀಪಾವಳಿ ಹಬ್ಬಕ್ಕೆ ಮೂರು ವಿಭಿನ್ನ ಚಿತ್ರಗಳು ತೆರೆಗೆ

By Rajendra

ದೀಪಾವಳಿ ಹಬ್ಬಕ್ಕೆ ಮೂರು ಕನ್ನಡ ಚಿತ್ರಗಳು ತೆರೆಗೆ ಬರುತ್ತಿವೆ. ಬಿಂದಾಸ್ ಹುಡುಗಿ, ಶಾಕ್ ಹಾಗೂ ರಾಷ್ಟ್ರಕವಿ ಕುವೆಂಪು ಚಿತ್ರಗಳು ಒಟ್ಟಿಗೆ ತೆರೆಕಾಣಲಿವೆ. ಈಗಾಗಲೆ ತೆರೆಕಂಡಿರುವ ಜಾಕಿ, ಕಿಚ್ಚ ಹುಚ್ಚ , ಯಕ್ಷ, ಗಾನ ಬಜಾನಾ, ಪಂಚರಂಗಿ ಹಾಗೂ ಗುಂಡ್ರಗೋವಿ ಚಿತ್ರಗಳು ಯಶಸ್ವಿ ಪ್ರದರ್ಶ ಕಾಣುತ್ತಿರುವ ಕಾರಣ ಹೊಸದಾಗಿ ಬಿಡುಗಡೆಯಾಗುತ್ತಿರುವ ಚಿತ್ರಗಳಿಗೆ ಚಿತ್ರಮಂದಿರ ಸಮಸ್ಯೆ ಎದುರಾಗಿದೆ.

ಪ್ರಿಯಾ ಹಾಸನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ 'ಬಿಂದಾಸ್ ಹುಡುಗಿ'. ಪ್ರಚಾರವನ್ನು ನೋಡಿದರೆ ಚಿತ್ರ ಬಿಂದಾಸ್ ಆಗಿಯೇ ಇರುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಈ ಚಿತ್ರಕ್ಕೆ ಗೌರಮ್ಮ ನಿರ್ಮಾಪಕರು. ಪ್ರಿಯಾ ಹಾಸನ್ ಜೊತೆ ರವಿಶಂಕರ್ ಅಭಿನಯವೂ ಇದೆ. ಚಿತ್ರಕ್ಕೆ ಯರ್ರಾ ರಮೇಶ್ ಸಂಗೀತ ನೀಡಿದ್ದಾರೆ.

ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿರುವ 'ಶಾಕ್' ಚಿತ್ರದ ವಿಶೇಷವೆಂದರೆ, ಈ ಚಿತ್ರವನ್ನು ಕೇವಲ ಒಂಭತ್ತು ದಿನಗಳಲ್ಲಿ ಚಿತ್ರೀಕರಿಸಿರುವುದು. ಹಿಂದಿಯ 'ಕೌನ್' ಚಿತ್ರ ರೀಮೇಕ್ ಇದಾಗಿದೆ. ಸಕಲೇಶಪುರದ ವಿಶಾಲ ಮನೆಯೊಂದರಲ್ಲಿ ಚಿತ್ರೀಕರಣ ನಡೆದಿದೆ. ಹಾರರ್ ಹಾಗೂ ಸೈಕಿಕ್ ಕಥಾಹಂದರವುಳ್ಳ ಈ ಚಿತ್ರದ ನಾಯಕಿ ಸುಮಾ ಗುಹಾ. ಇಡೀ ಚಿತ್ರ ಮನೆಯೊಂದರಲ್ಲಿ ನಡೆಯುತ್ತದೆ. ಹ ಸು ರಾಜಶೇಖರ್ ಆಕ್ಷನ್, ಕಟ್ ಹೇಳಿದ್ದಾರೆ.

ಯಾವುದೇ ಪ್ರಚಾರ, ಸದ್ದಿಲ್ಲದೆ ಬಿಡುಗಡೆಯಾಗುತ್ತಿರುವ ಮತ್ತೊಂದು ಚಿತ್ರ 'ರಾಷ್ಟ್ರಕವಿ ಕುವೆಂಪು'. ಕರ್ನಾಟಕ ರತ್ನ, ರಾಷ್ಟ್ರಕವಿ ಕುವೆಂಪು ಅವರ ಜೀವನ ಕಥೆಯನ್ನು ನಿರ್ದೇಶಕ, ಕಲಾವಿದ ಸಿ ಆರ್ ಸಿಂಹ ಬೆಳ್ಳಿತೆರೆಗೆ ತರುತ್ತಿದ್ದಾರೆ. ಕುವೆಂಪು ಪಾತ್ರದಲ್ಲಿ ಸಿ ಆರ್ ಸಿಂಹ ಅವರೇ ಕಾಣಿಸುತ್ತಿರುವುದು ವಿಶೇಷ. ಅವರ ಪುತ್ರ ಋತ್ವಿಕ್ ಸಿಂಹ ನಿರ್ದೇಶಿಸಿರುವ ಚಿತ್ರವಿದು.

ಪದ್ಮ ಪ್ರಕಾಶ್ ಮತ್ತು ಅರವಿಂದ ಪ್ರಕಾಶ್ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಕುವೆಂಪು ಅವರು ರಚಿಸಿರುವ ಎಂಟು ಗೀತೆಗಳಿಗೆ ವಿ ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ಬಿ ಎಸ್ ಬಸವರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈ ಮೂರು ವಿಭಿನ್ನ ಚಿತ್ರಗಳು ಈ ದೀಪಾವಳಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವಂತಾಗಲಿ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X