ಜಾಕಿ' ರಾಣಿ ಭಾವನಾಗೆ ಕೂಡಿಬಂತು ಕಂಕಣಬಲ

By Rajendra

'ಜಾಕಿ' ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ಮಲ್ಲು ಬೆಡಗಿ ಭಾವನಾಗೆ ಕಂಕಣ ಬಲ ಕೂಡಿಬಂದಿದೆ. ಭಾವನಾ ಶೀಘ್ರದಲ್ಲೆ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕೇರಳದಿಂದ ತೇಲಿ ಬಂದಿದೆ. ಭಾವನಾ ತಂದೆ ತಾಯಿ ಸೂಕ್ತ ವರನ ಹುಡುಕಾಟದಲ್ಲಿದ್ದಾರೆ ಎಂಬ ಸುದ್ದಿ ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲೂ ಡೈನಮೇಟ್‌ನಂತೆ ಸಿಡಿಸಿದೆ.

ಸಾಮಾನ್ಯವಾಗಿ ಸಿನಿಮಾ ತಾರೆಯೊಬ್ಬರ ಮದುವೆ ಎಂದರೆ, ಮೊದಲು ಕಂಗಾಲಾಗುವವನು ನಿರ್ಮಾಪಕ. ಬೇಡಿಕೆಯಲ್ಲಿರುವ ತಾರೆಯೊಬ್ಬಳು ಗಂಡನ ಮನೆ ಸೇರಿದರೆ ಎಲ್ಲಿ ತನ್ನ ಚಿತ್ರಗಳಿಗೆ ಹೊಡೆತ ಬೀಳುತ್ತದೋ ಎಂಬ ಲೆಕ್ಕಾಚಾರ ನಿರ್ಮಾಪಕರದು. ಸದಯ್ಕ್ಕೆ ಭಾವನಾ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಭಾವನಾ ಮದುವೆ ಸುದ್ದಿಯೇನೋ ಬಂದಾಯ್ತು. ಆದರೆ ಭಾವನಾ ಮಾತ್ರ ಈ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆ. ತಮ್ಮ ಮದುವೆ ಯಾವಾಗ, ಏನು, ಎತ್ತ ಎಂಬ ಬಗ್ಗೆ ತುಟಿ ಪಿಟಕ್ ಎಂದಿಲ್ಲ. ಹಾಗಂತ ಇದೇನು ಯಾರೋ ಕಾಗೆ ಹಾರಿಸಿದ ಸುದ್ದಿಯಂತೂ ಅಲ್ಲ. ಒಂದಲ್ಲ ಒಂದಿನ ಮದುವೆ ಆಗಲೇ ಬೇಕಲ್ಲವೆ?!

'ಜಾಕಿ' ಜಾಕ್‌ಪಾಟ್ ಹೊಡೆದ ಬಳಿಕ ಭಾವನಾಗೆ ಕನ್ನಡದಲ್ಲಿ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ದ್ವಾರಕೀಶ್ ಆಕ್ಷನ್, ಕಟ್ ಹೇಳಲಿರುವ ಈ ಚಿತ್ರಕ್ಕೆ ಸುದೀಪ್ ನಾಯಕ ನಟ. ಚಿತ್ರದ ಹೆಸರು, ಕುಲ ಗೋತ್ರ, ಜನ್ಮ ನಕ್ಷತ್ರ, ರಾಶಿ ಇತ್ಯಾದಿ ವಿವರಗಳು ಇನ್ನಷ್ಟೆ ತಿಳಿಯಬೇಕಾಗಿದೆ. [ಜಾಕಿ]

More from Filmibeat

English summary
Actress Bhavana is going to get married soon. The latest buzz is that she may enter in to a wedlock soon. Sources says Bhavana’s parents are looking for a suitable alliance for their daughter. She acted in Kannada movie Jackie opposite to Puneet Rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X