ಅಕ್ಟೋಬರ್ 6ಕ್ಕೆ ನಿಮ್ಮ ಹೆಮ್ಮೆಯ ಚಿತ್ರ ಪರಮಾತ್ಮ!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಪರಮಾತ್ಮ' ಚಿತ್ರ ಅಕ್ಟೋಬರ್ 6ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಅಧಿಕೃತ ಪತ್ರಿಕಾ ಪ್ರಕಟಣೆಯೂ ಹೊರಬಿದ್ದಿದೆ. ಬೆಂಗಳೂರಿನ ಸಂತೋಷ್ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ 'ಪರಮಾತ್ಮ' ತೆರೆ ಅಲಂಕರಿಸಲಿದ್ದಾನೆ.
ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಪರಮಾತ್ಮ'ನನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು 'ಯು' ಸರ್ಟಿಫಿಕೇಟ್ ನೀಡಿದೆ. ದೀಪಾ ಸನ್ನಿದ್ಧಿ, ಐಂದ್ರಿತಾ ರೇ ಹಾಗೂ ರಮ್ಯಾ ಬಾರ್ನಾ ಚಿತ್ರದ ನಾಯಕಿಯರು. ಮೂವರು ನಾಯಕಿಯರಿಗೂ ಒಬ್ಬನೇ ನಾಯಕ 'ಪರಮಾತ್ಮ'!
ವಿ ಹರಿಕೃಷ್ಣ ಸಂಗೀತ ಸಂಯೋಜನೆಯ ಹಾಡುಗಳು ಈಗಾಗಲೆ ಜನಪ್ರಿಯವಾಗಿವೆ. ಯಾವನಿಗ್ ಗೊತ್ತು, ಚೆಂಬೇಶ್ವರ, ಕತ್ತಲಲ್ಲಿ ಕರಡೀಗೆ, ಪರವಶನಾದೆನೂ ಹಾಡುಗಳು ಮೊಬೈಲ್‌ಗಳಲ್ಲಿ, ಎಫ್‌ಎಂ ರೇಡಿಯೋಗಳಲ್ಲಿ ಎಲ್ಲೆಂದರಲ್ಲಿ ಕರ್ಣಾನಂದ ನೀಡುತ್ತಿವೆ. ಯೋಗರಾಜ್ ಭಟ್ ಮತ್ತು ಪುನೀತ್ ಕಾಂಬಿನೇಷನ್ ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗಿದೆ ಎಂಬ ಬಗ್ಗೆ ಕುತೂಹಲವಿದ್ದೇ ಇದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











