»   » ರಾಧಿಕಾ, ಶಿವುಗೆ ಚಿಗುರಿದ ಕನಸು

ರಾಧಿಕಾ, ಶಿವುಗೆ ಚಿಗುರಿದ ಕನಸು

Subscribe to Filmibeat Kannada

ಬೆಂಗಳೂರು : 2003-04ನೇ ಸಾಲಿನ ಶ್ರೇಷ್ಠ ನಟ ಪ್ರಶಸ್ತಿಗೆ ಶಿವರಾಜ್‌ಕುಮಾರ್‌(ಚಿಗುರಿದ ಕನಸು), ಶ್ರೇಷ್ಠ ನಟಿ ಪ್ರಶಸ್ತಿಗೆ ರಾಧಿಕಾ(ತಾಯಿ ಇಲ್ಲದ ತಬ್ಬಲಿ)ಪಾತ್ರರಾಗಿದ್ದಾರೆ.

ಡಾ.ಕೆ.ಶಿವರಾಮ ಕಾರಂತ್‌ ಅವರ ಕಾದಂಬರಿ ಆಧಾರಿತ ‘ಚಿಗುರಿದ ಕನಸು’ ವರ್ಷದ ಅತ್ಯುತ್ತಮ ಚಿತ್ರ ಸೇರಿದಂತೆ, ಐದು ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿ ಕೊಂಡಿದೆ. ರಮೇಶ್‌ ಯಾದವ್‌ ನಿರ್ಮಿಸಿ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿದ್ದ ‘ಶಾಂತಿ’ ಚಿತ್ರಕ್ಕೆ ಎರಡನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸಿಕ್ಕಿದೆ.

ಮೂರನೇ ಅತ್ಯುತ್ತಮ ಪ್ರಶಸ್ತಿ, ಅನಿತಾ ಕುಮಾರಸ್ವಾಮಿ ನಿರ್ಮಿಸಿ ಎಸ್‌. ನಾರಾಯಣ್‌ ನಿರ್ದೇಶಿಸಿದ್ದ ‘ಚಂದ್ರ ಚಕೋರಿ’ಸಂದಿದೆ. ರಾಜ್ಯಸರಕಾರ ಪಿ.ಎಚ್‌.ವಿಶ್ವನಾಥ್‌ ಅಧ್ಯಕ್ಷತೆಯಲ್ಲಿ ರಚಿಸಿದ್ದ, ರಾಜ್ಯಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಒಟ್ಟು 41 ಚಿತ್ರಗಳನ್ನು ವೀಕ್ಷಿಸಿದೆ. ಅಂತಿಮವಾಗಿ ಫಲಿತಾಂಶ ಪ್ರಕಟಿಸಿದೆ.

ಮೊದಲ ಅತ್ಯುತ್ತಮ ಚಿತ್ರಕ್ಕೆ ನೀಡುವ ಪ್ರಶಸ್ತಿ ಒಂದು ಲಕ್ಷರೂ. ನಗದು ಹಾಗೂ ಚಿನ್ನದ ಪದಕವನ್ನು ಒಳಗೊಂಡಿದೆ. ಅಲ್ಲದೇ ಚಿತ್ರದ ನಿರ್ದೇಶಕರಿಗೆ 20 ಸಾವಿರ ರೂ ನಗದು ಹಾಗೂ ಚಿನ್ನದ ಪದಕವನ್ನು ನೀಡಲಾಗುತ್ತದೆ. ಎರಡನೇ ಅತ್ಯುತ್ತಮ ಚಿತ್ರಕ್ಕೆ 75 ಸಾವಿರ ರೂ. ನಗದು ಮತ್ತು ಬೆಳ್ಳಿ ಪದಕ, ಮೂರನೇ ಅತ್ಯುತ್ತಮ ಚಿತ್ರಕ್ಕೆ 50 ಸಾವಿರ ರೂ.ನಗದು ಮತ್ತು ಬೆಳ್ಳಿ ಪದಕವನ್ನು ನೀಡಲಾಗುತ್ತದೆ. ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ವಿಜೇತರಿಗೆ ಒಂದು ಲಕ್ಷ ರೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು.

ಸ್ವದೇಶ್‌ ಮತ್ತು ಕನಸು : ‘ಸ್ವದೇಶ್‌’ಚಿತ್ರವು ಚಿಗುರಿದ ಕನಸು ಓಟದಲ್ಲಿಯೇ ಸಾಗುತ್ತದೆ. ಆ ಚಿತ್ರದ ನಿರ್ದೇಶಕ ಚಿಗುರಿದ ಕನಸು ಚಿತ್ರವನ್ನು ನೋಡಲಿ. ಸ್ವದೇಶ್‌ ನೋಡಲು ಮುಗಿ ಬೀಳುತ್ತಿರುವವರು, ಚಿಗುರಿದ ಕನಸು ನೋಡಲಿಲ್ಲ. ಆದರೂ ಸಿನಿಮಾ ಸೋಲಲಿಲ್ಲ ಎಂದು ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿರುವ ಟಿ.ಎಸ್‌.ನಾಗಾಭರಣ ಪ್ರತಿಕ್ರಿಯಿಸಿದ್ದಾರೆ.

ಪ್ರಶಸ್ತಿಗಳ ವಿವರ :

 • ಮೊದಲನೇ ಅತ್ಯುತ್ತಮ ಚಿತ್ರ: ಚಿಗುರಿದ ಕನಸು
 • ಎರಡನೇ ಅತ್ಯುತ್ತಮ ಚಿತ್ರ: ಶಾಂತಿ
 • ಮೂರನೇ ಅತ್ಯುತ್ತಮ ಚಿತ್ರ: ಚಂದ್ರಚಕೋರಿ
 • ಅತ್ಯುತ್ತಮ ಚಿತ್ರನಿರ್ಮಾಪಕಿ : ಪಾರ್ವತಮ್ಮ ರಾಜ್‌ಕುಮಾರ್‌
 • ಅತ್ಯುತ್ತಮ ಚಿತ್ರ ನಿರ್ದೇಶಕ ಪ್ರಶಸ್ತಿ : ಟಿ.ಎಸ್‌. ನಾಗಾಭರಣ(ಚಿಗುರಿದ ಕನಸು)
 • ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ : ಜಯಂತ್‌ ಕಾಯ್ಕಿಣಿ (ಚಿಗುರಿದ ಕನಸು)
 • ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ : ವಿ.ಮನೋಹರ್‌ (ಚಿಗುರಿದ ಕನಸು)
 • ಅತ್ಯುತ್ತಮ ನಟ ಪ್ರಶಸ್ತಿ : ಶಿವರಾಜ್‌ಕುಮಾರ್‌(ಚಿಗುರಿದ ಕನಸು)
 • ಅತ್ಯುತ್ತಮ ನಟಿ ಪ್ರಶಸ್ತಿ : ರಾಧಿಕಾ (ತಾಯಿ ಇಲ್ಲದ ತಬ್ಬಲಿ)
 • ಅತ್ಯುತ್ತಮ ಪೋಷಕ ನಟ : ರಂಗಾಯಣ ರಘು (ಮಣಿ)
 • ಅತ್ಯುತ್ತಮ ಪೋಷಕ ನಟಿ: ಉಮಾಶ್ರೀ (ಮಣಿ)
 • ಅತ್ಯುತ್ತಮ ಛಾಯಾಗ್ರಹಣ : ಪಿ.ಕೆ.ಎಚ್‌.ದಾಸ್‌
 • ಅತ್ಯುತ್ತಮ ಚಿತ್ರಕಥೆ : ಪ್ರೀತಿ ಪ್ರೇಮ ಪ್ರಣಯ
 • ಅತ್ಯುತ್ತಮ ಬಾಲನಟ ಪ್ರಶಸ್ತಿ; ವರ್ಷ (ಅಮಾಸ)
 • ಅತ್ಯುತ್ತಮ ಹಿನ್ನೆಲೆ ಗಾಯಕ : ಪಿಚ್ಚಳ್ಳಿ ಶ್ರೀನಿವಾಸ್‌ (ಅಮಾಸ)
 • ಅತ್ಯುತ್ತಮ ಹಿನ್ನೆಲೆ ಗಾಯಕಿ: ನಂದಿತಾ (ಜೋಗುಳ)
 • ಅತ್ಯುತ್ತಮ ಸಂಕಲನಕಾರ : ಬಿ.ಕೆಂಪರಾಜ್‌ (ಲಂಕೇಶ್‌ ಪತ್ರಿಕೆ)
 • ಅತ್ಯುತ್ತಮ ಗೀತೆ ರಚನೆ ; ಕೆ.ಕಲ್ಯಾಣ(ಪ್ರೀತಿ ಪ್ರೇಮ ಪ್ರಣಯ)
 • ಅತ್ಯುತ್ತಮ ಧ್ವನಿ ಗ್ರಾಹಕ : ಮುದನ್‌ (ನಂಜುಂಡಿ)
 • ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ : ಪಟ್ಟಾಭಿರಾಮರೆಡ್ಡಿ
 • ಚಲನಚಿತ್ರರಂಗಕ್ಕೆ ವಿಶಿಷ್ಠ ಕೊಡುಗೆ : ಕುಪ್ಪುಸ್ವಾಮಿ ನಾಯ್ಡು (ಚಾಮುಂಡೇಶ್ವರಿ ಸ್ಟುಡಿಯೋ)
(ಇನ್ಫೋ ವಾರ್ತೆ)
Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada