For Quick Alerts
  ALLOW NOTIFICATIONS  
  For Daily Alerts

  2004: ಗೆದ್ದವರು ವಿರಳ, ಸೋತವರು ಬಹಳ

  By Staff
  |

  ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಂಕಿ- ಅಂಶದಂತೆ 2004ರಲ್ಲಿ 80 ಚಿತ್ರಗಳು ಬಿಡುಗಡೆಯಾಗಿವೆ. ಗಾಂಧಿನಗರ ಇವುಗಳಲ್ಲಿ ರಿಮೇಕು- ಸ್ವಮೇಕುಗಳ ಜೊತೆಗೆ ಕದ್ದಿದ್ದೂ ಇವೆ !

  ಈ ಸಲ ರೀಮೇಕ್‌ ಚಿತ್ರಗಳ ಸಂಖ್ಯೆ 19, ಸ್ವಂತ ಎಂದು ಹೇಳಿಕೊಂಡಿದ್ದೂ ಸೇರಿ ಸ್ವಮೇಕುಗಳ ಸಂಖ್ಯೆ 35. ಉಳಿದವು ಖುಲ್ಲಂಖುಲ್ಲಾ ಮಿಕ್ಸ್‌ ಚಿತ್ರಗಳು. ದರ್ಶನ್‌ ಹಾಗೂ ಸಾಯಿಕುಮಾರ್‌ ತಲಾ ಐದು ಚಿತ್ರಗಳಲ್ಲಿ ಅಭಿನಯಿಸಿ ೕ ವರ್ಷ ಅಗ್ರಸ್ಥಾನದಲ್ಲಿದ್ದಾರೆ. ದರ್ಶನ್‌ರ ಧರ್ಮ, ಭಗವಾನ್‌, ಕಲಾಸಿಪಾಳ್ಯ ಚಿತ್ರಗಳು ಯಶಸ್ಸು ಕಂಡವು. ‘ ಸಾಹುಕಾರ ’ ಸೇರಿದಂತೆ ವಿಷ್ಣುವರ್ಧನ್‌ ಅಭಿನಯದ ನಾಲ್ಕು ಚಿತ್ರಗಳು ತೆರೆಕಂಡು

  ‘ ಆಪ್ತಮಿತ್ರ’ ಸೂಪರ್‌ ಹಿಟ್‌ ಆಯ್ತು . ಇದಕ್ಕೆ ಕಾರಣ ಸೌಂದರ್ಯ ಎಂಬ ವಾಸ್ತವ. ರವಿಚಂದ್ರನ್‌ ಅಭಿನಯಿಸಿ ನಿರ್ದೇಶಿಸಿದ ‘ ಮಲ್ಲ’ ದಲ್ಲಿ ಪ್ರಿಯಾಂಕ ಮೈ ಚಳಿ ಬಿಟ್ಟು ಬಿಸಿ ಬಿಸಿ ದೃಶ್ಯ ಮತ್ತು ಹಾಡುಗಳಲ್ಲಿ ಅಭಿನಯದ ಅಭಿನಯಿಸಿದ್ದು ಚರ್ಚೆಗೆ ಗ್ರಾಸವಾಯ್ತು. ರವಿಚಂದ್ರನ್‌ ಅಭಿನಯದ ‘ ಮಲ್ಲ’ ಸೂಪರ್‌ಹಿಟ್‌, ‘ರಾಮಕೃಷ್ಣ ’ ಮಧ್ಯಮ ಯಶಸ್ಸು, ‘ ಸಾಹುಕಾರ ’ ತೋಪಾಯ್ತು. ರಮೇಶ್‌, ಕಾಶೀನಾಥ್‌, ಜಗ್ಗೇಶ್‌, ಶಿವರಾಜ್‌ಕುಮಾರ್‌, ಧರ್ಮ, ಥ್ರಿಲ್ಲರ್‌ ಮಂಜು ನಾಯಕರಾಗಿದ್ದ ತಲಾ ಮೂರು ಚಿತ್ರಗಳು ತೆರೆಕಂಡವು. ಪುನೀತ್‌, ಸುದೀಪ್‌, ಸುನಿಲ್‌ ಅವರ ತಲಾ ಎರಡು ಚಿತ್ರಗಳು ಬಿಡುಗಡೆಯಾದವು.‘ವೀರ ಕನ್ನಡಿಗ’ ಮತ್ತು ‘ರಂಗ ಎಸ್ಸೆಸೆಲ್ಸಿ’ ಯಶಸ್ಸಿ ಎಂದು ಬಿಂಬಿಸಲಾಯ್ತು. ನಾಯಕಿಯರ ಪೈಕಿ ಅನುಪ್ರಭಾಕರ್‌ ನಾಲ್ಕು, ದುರ್ಗಾಶೆಟ್ಟಿ , ರಕ್ಷಿತಾ, ರುಚಿತಾ ಪ್ರಸಾದ್‌ ತಲಾ ಮೂರು , ಪ್ರಿಯಾಂಕಾ, ಶ್ರುತಿ,ಭಾವನಾ, ರಮ್ಯಾ ತಲಾ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದರೆ 31 ಜನ ಪರಭಾಷಾ ನಟಿಯರು 31 ಚಿತ್ರಗಳಲ್ಲಿ ಅಭಿನಯಿಸಿ ಈ ವರ್ಷ ದಾಖಲೆ ನಿರ್ಮಿಸಿದ್ದಾರೆ. ಸಂಗೀತ ನಿರ್ದೇಶಕರಲ್ಲಿ ರಾಜೇಶ್‌ ರಾಮನಾಥ್‌ ಏಳು, ಸಾಧು ಕೋಕಿಲಾ ಐದು, ಗುರುಕಿರಣ್‌ ಐದು, ಹಂಸಲೇಖ ನಾಲ್ಕು, ಎಸ್‌.ಎ.ರಾಜಕುಮಾರ್‌ ನಾಲ್ಕು, ಕೃಪಾಕರ್‌, ವೆಂಕಟ್‌ ನಾರಾಯಣ್‌, ಮಹೇಶ್‌ ಇವರ ತಲಾ ಮೂರು ಚಿತ್ರಗಳು ಈ ವರ್ಷ ಬಿಡುಗಡೆಗೊಂಡಿವೆ. ಮಲ್ಲ,ದುರ್ಗಿ, ಕಲಾಸಿಪಾಳ್ಯ ಚಿತ್ರಗಳ ನಿರ್ಮಾಪಕ ರಾಮು ಎಲ್ಲಾ ಚಿತ್ರಗಳಲ್ಲೂ ಯಶಸ್ಸು ಕಂಡರು. ನಿರ್ದೇಶಕರ ಪೈಕಿ ರವಿಚಂದ್ರನ್‌.ಪಿ.ವಾಸು,ಓಂ ಪ್ರಕಾಶ್‌ ರಾವ್‌,ಸಾಯಿ ಪ್ರಕಾಶ್‌, ಇಂದ್ರಜಿತ್‌ ಲಂಕೇಶ್‌, ರವಿಶಂಕರ, ಮೆಹರ್‌ ರಮೇಶ್‌, ದಯಾಳ್‌ ಇವರು ಹೆಸರು ಗಳಿಸಿದ್ದು, ಈ ವರ್ಷ 14 ಜನ ಹೊಸನಿರ್ದೇಶಕರ ಆಗಮನವಾಗಿದೆ.

  ಈ ಸಲ, ಭುಗಿಲೆದ್ದ ಪರಭಾಷಾ ಚಿತ್ರದ ವ್ಯಾಜ್ಯ ಕೆಲವಾರು ದಿನಗಳವರೆಗೆ ಪ್ರತಿಭಟನೆಯ ಹೆಸರಿನಲ್ಲಿ, ಕಾರ್ಮಿಕರು, ಕಲಾವಿದರು, ತಂತ್ರಜ್ಞರಿಗೆ ಕೆಲಸವಿಲ್ಲದಂತೆ ಮಾಡಿತು. ಸೌಂದರ್ಯ ಸೇರಿದಂತೆ ಲೋಕೇಶ್‌, ರಾಜಾನಂದ್‌, ವಾದಿರಾಜ್‌,ಗಂಗಾಧರ್‌, ರಾಜಾರಾಂ, ಬಿ.ಸಿ.ಗೌರಿಶಂಕರ್‌, ಜಿ.ವಿ.ಅಯ್ಯರ್‌ ಮುಂತಾದವರು ನಮ್ಮನ್ನಗಲಿದರು.

  2004 ರ ಹೆಚ್ಚಿನ ಚಿತ್ರಗಳಲ್ಲಿ ಹೊಡೆದಾಟ, ರಕ್ತಪಾತ, ಅರೆ ಬೆತ್ತಲೆಯ ದೃಶ್ಯಗಳ್ತು, ಐಟೆಂ ಸಾಂಗ್‌ಗಳು ವಿಜೃಂಭಿಸಿದವು. ಕನ್ನಡಕ್ಕಾಗಿ ಹೋರಾಟಕ್ಕಿಳಿದ ನಿರ್ದೇಶಕರ ಚಿತ್ರದಲ್ಲೇ ಪರಭಾಷಾ ನಟ- ನಟಿಯರು, ಸಂಗೀತ ನಿರ್ದೇಶಕರು ಮಿಂಚಿದ್ದು ಈ ವರ್ಷದ ಚಿತ್ರರಂಗದ ಅತಿ ದೊಡ್ಡ ದುರಂತ.

  (ಸ್ನೇಹಸೇತು: ವಿಜಯ ಕರ್ನಾಟಕ)

  Post your views

  ಇದನ್ನೂ ಓದಿ-
  ಸ್ಯಾಂಡಲ್‌ವುಡ್‌ 2004: ಯಶಸ್ವಿ ಚಿತ್ರಗಳ ಜಾಡಿನಲ್ಲಿ....

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X