»   » ಜೈಜಗದೀಶ್‌, ಈಗ ನಿರ್ದೇಶನಕ್ಕೂ ಸೈ!

ಜೈಜಗದೀಶ್‌, ಈಗ ನಿರ್ದೇಶನಕ್ಕೂ ಸೈ!

Subscribe to Filmibeat Kannada

ಹೌದು. ನಟರಾಗಿ, ನಿರ್ಮಾಪಕರಾಗಿ ಪರಿಚಿತರಾಗಿರುವ ಜೈಜಗದೀಶ್‌, ಈಗ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರು ನಿರ್ದೇಶಿಸುತ್ತಿರುವ ಹೊಸ ಚಿತ್ರದ ಹೆಸರು -ಮದನ. ಆದಿತ್ಯ ಚಿತ್ರದ ನಾಯಕ.

ನಿರ್ದೇಶನದ ಜೊತೆಗೆ ಜೈಜಗದೀಶ್‌ ಚಿತ್ರಕಥೆಯನ್ನೂ ಬರೆದಿದ್ದಾರೆ. ಸದ್ದಿಲ್ಲದೇ ಚಿತ್ರವನ್ನು ಆರಂಭಿಸಿರುವ ಜೈಜಗದೀಶ್‌, ತಮ್ಮ ಗುರುಗಳಾದ ಪುಟ್ಟಣ್ಣ ಕಣಗಾಲ್‌ ಅವರನ್ನು ನೆನೆಯುತ್ತಾರೆ. ತಮ್ಮ ಹೊಸ ಪ್ರಯತ್ನದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಅಂದ ಹಾಗೇ, ಕಳೆದ 30ವರ್ಷಗಳ ಹಿಂದೆ ಜೈಜಗದೀಶ್‌, ಸಹಾಯಕ ನಿರ್ದೇಶಕರಾಗಿಯೇ ಚಿತ್ರರಂಗ ಪ್ರವೇಶಿಸಿದ ಸಂಗತಿ ಬಹುಮಂದಿಗೆ ಗೊತ್ತಿಲ್ಲ. ನಂತರ ನಟರಾಗಿ ಅವರು 300 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಮೀಕ್ಷಾ ಎಂಬ ಹೊಸ ನಾಯಕಿ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಪಡೆಯುತ್ತಿದ್ದಾರೆ. ಆರ್‌.ಗಿರಿ ಛಾಯಾಗ್ರಹಣ ಚಿತ್ರಕ್ಕಿದೆ. ರಾಜೇಂದ್ರ ಕಾರಂತ್‌ ಮತ್ತು ಮಂಜು ಸಂಭಾಷಣೆ ಬರೆದಿದ್ದಾರೆ.

ಮತ್ತೊಂದು ಅಂಶ -ಈ ಚಿತ್ರದ ನಿರ್ಮಾಪಕರು ಜೈಜಗದೀಶ್‌!

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada