»   » ಮಲ್ಲಿಕಾಗೆ ನಿಮಿಷಕ್ಕೊಂದು ಲಕ್ಷ; ಕೊಟ್ಟರೆ ಮಾತ್ರ ಡ್ಯಾನ್ಸ್‌ ಭಿಕ್ಷ!

ಮಲ್ಲಿಕಾಗೆ ನಿಮಿಷಕ್ಕೊಂದು ಲಕ್ಷ; ಕೊಟ್ಟರೆ ಮಾತ್ರ ಡ್ಯಾನ್ಸ್‌ ಭಿಕ್ಷ!

Posted By: Staff
Subscribe to Filmibeat Kannada
Mallika Sherawat
ಮೀಡಿಯಾದವರ ಕ್ಯಾಮೆರಾ ಕಂಡರೆ ಈ ಸೆಕ್ಸ್‌ ಬಾಂಬ್‌ಗೆ ಯಾಕೋ ಭಯ? ಈ ಪರಿ ಯಾಕೋ, ನಿಮಗೇನಾದರೂ ಗೊತ್ತಾ ಮಾರಾಯ್ರೇ...

ತನ್ನ ಜಲಕ್ರೀಡೆಯನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು ಹೋದದ್ದಕ್ಕೆ ಬೆಂಗಳೂರಿನಲ್ಲಿ ಮಲ್ಲಿಕಾ ಶೆರಾವತ್‌, ಮುಖಬಿಗಿದುಕೊಂಡಿದ್ದಳು. ಸಿಟ್ಟಿನಿಂದ ಮುಖ ಕೆಂಪಗೆ ಮಾಡಿಕೊಂಡಿದ್ದಳು. ಈಗ ಮುಂಬೈನಲ್ಲಿ ಇಂಥದ್ದೇ ಘಟನೆ ವರದಿಯಾಗಿದೆ.

ಇಷ್ಟಕ್ಕೂ ಮಲ್ಲಿಕಾ ರೇಗೋದು ಯಾಕೆ? -ಈ ಪ್ರಶ್ನೆಗೆ ಉತ್ತರ ಅತಿ ಸರಳ. ನೋಡೋರು ಮುಂದೆ ಎಷ್ಟು ಬೇಕಾದರು ಕುಣಿಯುತ್ತೇನೆ... ಆದರೆ ಅದನ್ನು ಮಾಧ್ಯಮಗಳು ಸೆರೆಯಬಾರದು ಎಂಬುದು ಮಲ್ಲಿಕಾ ಶೆರಾವತ್‌ರ ಷರತ್ತು. ಈಯಮ್ಮನ ಷರತ್ತಿಗೆ ಭಂಗವಾದರೆ, ಸಹಿಸೋದಿಲ್ಲ ಅನ್ನೋದು ಸಾಬೀತಾಗಿದೆ.

ಮಲ್ಲಿಕಾಳನ್ನು ಕರೆಸಿ, ಇಕ್ಕಟ್ಟಿಗೆ ಸಿಲುಕಿದ ಮುಂಬೈನ ಜೆ.ಡಬ್ಲ್ಯು ಮ್ಯಾರಿಯಟ್‌ ಹೋಟೆಲ್‌ನ ಆಡಳಿತ ವರ್ಗ ಈಗ ಕಣ್‌ಕಣ್‌ ಬಿಡುತ್ತಿದೆ. ಇಷ್ಟಕ್ಕೂ ಆದದ್ದೇನು ಅಂದ್ರೆ; ಹೋಟೆಲ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಮಲ್ಲಿಕಾಳ ನೃತ್ಯವನ್ನು ಏರ್ಪಡಿಸಲಾಗಿತ್ತು. 45ನಿಮಿಷಗಳ ಕುಣಿತಕ್ಕೆ ಆಕೆ 50ಲಕ್ಷ ರೂ. ಕೇಳಿದ್ದಳು. ಕಾರ್ಯಕ್ರಮಕ್ಕೆ ಬಂದವರಿಂದ ತಲೆಗೆ 5-10ಸಾವಿರದಂತೆ ಪ್ರವೇಶ ಶುಲ್ಕ ಪಡೆದಿತ್ತು. ಆರಂಭ ಚೆನ್ನಾಗಿಯೇ ಇತ್ತು. ಮೊದಲ 15ನಿಮಿಷ ನೋಡೋರಿಗೆ ಖುಷಿಯಾಗುವಂತೆಯೇ ಕುಣಿತ ಮಲ್ಲಿಕಾ ನಂತರ ನಾಪತ್ತೆ! ಕಾರಣ; ಟೀವಿ ಕ್ಯಾಮೆರಾಗಳು.

ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಅವಕಾಶ ನೀಡಬಾರದು ಎಂಬುದು ನನ್ನ ಷರತ್ತು. ಆದರೆ ಈಗ ಒಪ್ಪಂದ ಉಲ್ಲಂಘನೆಯಾಗಿದೆ . 50ಲಕ್ಷದ ಜೊತೆ ಇನ್ನೂ 15ಲಕ್ಷ ನೀಡಿ, ಇಲ್ಲದಿದ್ದರೆ ಕೋರ್ಟಿಗೆ ಹೋಗುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾಳೆ, ಚುಮ್ಮ.

ಈ ಮಧ್ಯೆ ನಿರ್ಮಾಪಕರ ಕಷ್ಟನಷ್ಟಗಳನ್ನು ಅರಿಯದ , ಕುಣಿಯುವ ಬೊಂಬೆಯ ಧರ್ಮಕರ್ಮಗಳನ್ನು ತಿಳಿಯಲೊಲ್ಲದ ಆಕೆಯ ಅಭಿಮಾನಿ ಹುಡುಗರು ಒಂದೇ ಸ್ವರದಲ್ಲಿ ಕಿರುಚುತ್ತಿದ್ದಾರೆ - ರೋಡಿಗಿಳಿಯೇ ಮಲ್ಲಿಕಾ, ಚಿಂದಿ ಮಾಡೇ ಚಂದ್ರಿಕಾ...

English summary
Mallika Sherawat is furious against the organizers of new year event recently concluded at Mumbai. She has threatened legal action against the event managers for violating the entertainment contract. On the other side her fans continue to shout Dance Mallika Dance.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada