»   » ರಕ್ಷಿತಾ : ಕಲಾಸಿಪಾಳ್ಯದಿಂದ ತಮಿಳಿಗೆ

ರಕ್ಷಿತಾ : ಕಲಾಸಿಪಾಳ್ಯದಿಂದ ತಮಿಳಿಗೆ

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೊ
ಒಂದೆಡೆ ತೆಲುಗಿನ ‘ಶಿವಮಣಿ’ ಹಾಗೂ ‘ಆಂಧ್ರಾವಾಲಾ’ ಚಿತ್ರಗಳ ದಾರುಣ ಸೋಲು, ಇನ್ನೊಂದೆಡೆ ಮಕಾಡೆ ಮಲಗಿರುವ ‘ಗೋಕರ್ಣ’ ಚಿತ್ರದಿಂದಾಗಿ ಕಂಗೆಟ್ಟಿದ್ದ ರಕ್ಷಿತಾಳ ಮೊಗದಲ್ಲಿ ಕಿರುನಗೆ ಮತ್ತೆ ಕಾಣಿಸಿಕೊಂಡಿದೆ.

ದರ್ಶನ್‌ ಅಭಿನಯದ ‘ಕಲಾಸಿಪಾಳ್ಯ’ ಚಿತ್ರದಲ್ಲಿ ರಕ್ಷಿತಾಗೆ ನಾಯಕಿಪಟ್ಟ ದೊರೆತಿದೆ. ರಾಮು ನಿರ್ಮಾಣದ ಈ ಚಿತ್ರದ ಕುರಿತು ಉದ್ಯಮದಲ್ಲಿ ಅಪಾರ ನಿರೀಕ್ಷೆಯಿದೆ. ಕಲಾಸಿಪಾಳ್ಯ ಮತ್ತೊಂದು ‘ಎಕೆ 47’ ಆಗಲಿದೆ ಎಂದು ರಾಮು ಆಪ್ತವಲಯ ಗುಸುಗುಟ್ಟುತ್ತಿದೆ. ರೌಡಿಸಂ ವಿಜೃಂಭಣೆಯ ಈ ಚಿತ್ರದಲ್ಲಿ ರಕ್ಷಿತಾ ಪಾತ್ರಕ್ಕೆ ಹೇಳಿಕೊಳ್ಳುವ ಸ್ಕೋಪ್‌ ಇಲ್ಲದಿದ್ದರೂ, ಆಕೆಯ ಪಾತ್ರದ ಪರಿಕಲ್ಪನೆ ನಿಜಕ್ಕೂ ಚೆನ್ನಾಗಿದೆ. ಕಲಾಸಿಪಾಳ್ಯದಲ್ಲಿ ರಕ್ಷಿತಾ ಅವರದು ಈ ಶತಮಾನದ ಆಧುನಿಕ ಹೆಣ್ಣಿನ ಪಾತ್ರ. ಕೊಳಗೇರಿಯಲ್ಲಿ ಹುಟ್ಟಿ ಬೆಳೆಯುವ ಹೆಣ್ಣುಮಗಳ ಪಾತ್ರವದು. ರಕ್ಷಿತಾ ಮಟ್ಟಿಗೆ ಇಂಥದೊಂದು ಪಾತ್ರವೇ ಹೊಸತು.

ಕಲಾಸಿಪಾಳ್ಯದ ಅಬ್ಬರದ ಜೊತೆಯಲ್ಲಿಯೇ, ತಮಿಳು ನಾಯಕ ನಟ ವಿಜಯ್‌ನ ಚಿತ್ರವೊಂದಕ್ಕೂ ರಕ್ಷಿತಾ ನಾಯಕಿಯಾಗಿ ಆಯ್ಕೆಯಾಗಿರುವ ಸುದ್ದಿ ಹೊರಬಿದ್ದಿದೆ. ಚಾಕೊಲೇಟ್‌ ಚಿತ್ರದ ನಿರ್ಮಾಪಕರೇ ರಕ್ಷಿತಾ ಅಭಿನಯಿಸುತ್ತಿರುವ ಹೊಸ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ತಮಿಳು ಚಿತ್ರಗಳತ್ತ ಕಣ್ಣಿಟ್ಟಿರುವ ರಕ್ಷಿತಾಗೆ, ತಮಿಳಿನಲ್ಲಿ ಬೇರು ಬಿಡಲು ಈ ಚಿತ್ರ ನೆರವಾಗುವ ಸಾಧ್ಯತೆಯಿದೆ.

ಹಾಗೆ ನೋಡಿದರೆ, ರಕ್ಷಿತಾಗೆ ತಮಿಳಿನಲ್ಲಿದು ಮೊದಲ ಚಿತ್ರವೇನೂ ಅಲ್ಲ . ಈ ಮುನ್ನ ‘ಧಮ್‌’ ಎನ್ನುವ ತಮಿಳುಚಿತ್ರದಲ್ಲಿ ರಕ್ಷಿತಾ ಅಭಿನಯಿಸಿದ್ದರು. ಆದರೆ ಸ್ವಲ್ಪ ಡುಮ್ಮಿ ಅನ್ನುವ ಕಾರಣಕ್ಕೆ ತಮಿಳರಿಗೆ ರಕ್ಷಿತಾ ಇಷ್ಟವಾಗಿರಲಿಲ್ಲ . ಈಗ ಒಪ್ಪಿಕೊಳ್ಳುತ್ತಾರೇನೊ ನೋಡಬೇಕು ?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada