‘ಈ ಪ್ರೀತಿ ಏಕೆ ಭೂಮಿ ಮೇಲಿದೆ’ ಅಂತ ಪ್ರೇಮ್ ಹೇಳ್ತಾಯಿಲ್ಲ!
ಅಮ್ಮ, ಪ್ರೀತಿ, ರೌಡಿಸಂ ಎನ್ನುವ ಮೂರು ವಸ್ತುಗಳನ್ನು ಇಟ್ಟುಕೊಂಡು ಗಾಂಧಿನಗರದಲ್ಲಿ ಗೆದ್ದಿರುವ, ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಅವರ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರ ಪ್ರೇಮಿಗಳ ದಿನ(ಫೆ.14)ದಂದು ಸೆಟ್ಟೇರಲಿದೆ.
ಎಲ್ಲವನ್ನು ಗುಪ್ತ್‌ಗುಪ್ತ್ ಆಗಿಯೇ ಮಾಡುವ ಪ್ರೇಮ್, ಅವರ ಹೊಸ ಚಿತ್ರದಲ್ಲಿ ಅವರು ನಿರ್ದೇಶಕರು. ಜೊತೆಗೆ ನಾಯಕರೂ ಹೌದು. ‘ಜೋಗಿ ’ ಚಿತ್ರದ ಮೂಲಕ ತಮ್ಮ ಎಲ್ಲಾ ಜೇಬುಗಳನ್ನು ಭರ್ತಿ ಮಾಡಿಕೊಂಡ ಅಶ್ವಿನಿ ರಾಮಪ್ರಸಾದ್ ಈ ಚಿತ್ರದ ನಿರ್ಮಾಪಕರು.
ಪ್ರಚಾರದ ಮೂಲಕವೇ ‘ಜೋಗಿ’ಯನ್ನು ಆಕರ್ಷಕಗೊಳಿಸಿದ ಪ್ರೇಮ್, ಈ ಚಿತ್ರಕ್ಕೆ ಪ್ರಚಾರವೇ ಬೇಡ ಎನ್ನುತ್ತಿದ್ದಾರೆ. ಈ ಚಿತ್ರ ಮತ್ತು ಹಾಡುಗಳ ಬಗ್ಗೆ ಬಾಯಿಬಿಡದಂತೆ ಸಂಗೀತ ನಿರ್ದೇಶಕ ಆರ್.ಪಿ.ಪಟ್ನಾಯಕ್ ಅವರಿಗೂ ಸೂಚನೆ ನೀಡಿದ್ದಾರೆ.
ಪ್ರೇಮ್ ಜೊತೆ ಈ ಚಿತ್ರದ ಹಾಡಿನಲ್ಲಿ ಖ್ಯಾತ ಗಾಯಕಿ ಲತಾಮಂಗೇಶ್ಕರ್ ಧ್ವನಿ ಸೇರಿಸಲಿದ್ದಾರೆ ಎಂಬ ಮಾತು ಗಾಂಧಿ ನಗರದಲ್ಲಿದೆ. ಚಿತ್ರದ ನಾಯಕಿ ಯಾರು, ತಾರಾಗಣದಲ್ಲಿ ಯಾರ್ಯಾರಿದ್ದಾರೆ ಎಂಬ ಬಗ್ಗೆ ಪ್ರೇಮ್ ಮೌನ ಮೌನ ಮೌನ.
ರಕ್ಷಿತಾ ತಾಯಿ ಮಮತಾರಾವ್‌ಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರವಿದೆಯಂತೆ. ಮಳವಳ್ಳಿ ಸಾಯಿಕೃಷ್ಣ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ ಅನ್ನುವುದನ್ನು ಹೊರತು ಪಡಿಸಿ, ಇನ್ನುಳಿದ ವಿವರಗಳು ಲಭ್ಯವಿಲ್ಲ.
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications