»   » ಶಿವಣ್ಣನ ನಾಯಕಿ ಯಾರು? ಎಸ್ಸೆಮ್ಮೆಸ್‌ ಕಳಿಸಿದವರಿಗೆ ಪ್ರೆೃಜು!

ಶಿವಣ್ಣನ ನಾಯಕಿ ಯಾರು? ಎಸ್ಸೆಮ್ಮೆಸ್‌ ಕಳಿಸಿದವರಿಗೆ ಪ್ರೆೃಜು!

Subscribe to Filmibeat Kannada


ಶಿವರಾಜ್‌ಕುಮಾರ್‌ರ ಹೊಸ ಚಿತ್ರ, ಚಿತ್ರೀಕರಣಕ್ಕೆ ಮುನ್ನವೇ ಸುದ್ದಿಮಾಡುತ್ತಿದೆ. ಅನನ್ಯ ಎಂಟರ್‌ಪ್ರೆೃಸಸ್‌ ಅರ್ಪಿಸುತ್ತಿರುವ ಈ ಚಿತ್ರದ ಹೆಸರು ‘ಸತ್ಯ ಇನ್‌ ಲವ್‌’. ಚಿತ್ರದ ನಾಯಕಿ ಯಾರು? ಎನ್ನುವ ಸ್ಪರ್ಧೆ ಆರಂಭಗೊಂಡಿದೆ.

ಆಸಿನ್‌(ಅ), ಭೂಮಿಕಾ(ಆ), ಜೆನಿಲಿಯಾ(ಇ), ತ್ರಿಶಾ(ಈ) ಆಯ್ಕೆಗಳನ್ನು ನೀಡಲಾಗಿದ್ದು, ‘ಎಸ್‌ಎಂಎಸ್‌ ಕಳುಹಿಸಿ, ಅದೃಷ್ಟವಂತರಾಗಿ’ ಎನ್ನುವ ಶೀರ್ಷಿಕೆಯಡಿಯಲ್ಲಿ ಜಾಹೀರಾತುಗಳು ಪ್ರಕಟವಾಗಿವೆ. ಗೆದ್ದವರಿಗೆ ಬಹುಮಾನಗಳು, ಜೊತೆಗೆ ಚಿತ್ರೀಕರಣ ಸಂದರ್ಭದಲ್ಲಿ ಶಿವಣ್ಣನ ಒಂದು ದಿನ ಕಳೆಯೋ ಅವಕಾಶವನ್ನು ಕಲ್ಪಿಸಲಾಗಿದೆ. 25ಜನ ಅದೃಷ್ಟವಂತರನ್ನು ಆಯ್ಕೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸುವುದು ಅತಿ ಸುಲಭ. ಉದಾಹರಣೆಗೆ ನಿಮ್ಮ ಆಯ್ಕೆ ತ್ರಿಶಾ ಆಗಿದ್ದರೆ, ಖಐಔ ಈ ಎಂದು ಟೈಪ್‌ ಮಾಡಿ 8888ಕ್ಕೆ ಎಸ್‌ಎಂಎಸ್‌ ಕಳುಹಿಸಬೇಕು. ಯಾರು ಎಷ್ಟು ಬೇಕಾದರೂ ಪ್ರವೇಶಗಳನ್ನು ಕಳಿಸಬಹುದು.

ಗುರುಕಿರಣ್‌ ಸಂಗೀತ, ಮಲವಳ್ಳಿ ಸಾಯಿಕೃಷ್ಣ ಸಂಭಾಷಣೆ ಚಿತ್ರಕ್ಕಿದೆ. ಫೆಬ್ರವರಿ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ. ಇದು ಶಿವಣ್ಣನ ಪಾಲಿಗೆ ಇನ್ನೊಂದು ‘ಓಂ’ಕಾರ, ಇನ್ನೊಂದು ‘ಜೋಗಿ’ಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಚಿತ್ರದ ನಿರ್ದೇಶಕ ರಾಘವ ಲೋಕಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada