»   » ರಾಜ್ಯದಲ್ಲಿ ಸಿನಿಮಾ ಪ್ರದರ್ಶನ ಸಮಯ ಬದಲುಬೆಳಗ್ಗೆ 11.30ಕ್ಕೆ ಮಾರ್ನಿಂಗ್‌ ಶೋ, ಸಂಜೆ 6ಕ್ಕೆ ಫಸ್ಟ್‌ ಶೋ

ರಾಜ್ಯದಲ್ಲಿ ಸಿನಿಮಾ ಪ್ರದರ್ಶನ ಸಮಯ ಬದಲುಬೆಳಗ್ಗೆ 11.30ಕ್ಕೆ ಮಾರ್ನಿಂಗ್‌ ಶೋ, ಸಂಜೆ 6ಕ್ಕೆ ಫಸ್ಟ್‌ ಶೋ

Posted By:
Subscribe to Filmibeat Kannada

ಮುಖಪುಟ  --> ಸ್ಯಾಂಡಲ್‌ವುಡ್‌  --> ಕನ್ನಡ ಚಿತ್ರ ಕುಟೀರ  --> ವರದಿಮಾರ್ಚ್‌ 03, 2003

ರಾಜ್ಯದಲ್ಲಿ ಸಿನಿಮಾ ಪ್ರದರ್ಶನ ಸಮಯ ಬದಲು
ಬೆಳಗ್ಗೆ 11.30ಕ್ಕೆ ಮಾರ್ನಿಂಗ್‌ ಶೋ, ಸಂಜೆ 6ಕ್ಕೆ ಫಸ್ಟ್‌ ಶೋ

ಕರ್ನಾಟಕದಲ್ಲಿ ಸಿನಿಮಾ ತೋರುವ ಸಮಯದಲ್ಲಿ ಏಕರೀತಿಯ ಸಮಯ ನಿಗದಿ ಪಡಿಸಲಾಗಿದ್ದು, ಏಪ್ರಿಲ್‌ 4 ರಿಂದ ಸಿನಿಮಾ ಪ್ರದರ್ಶನದ ಟೈಂ ಟೇಬಲ್‌ ಇಂತಾಗಲಿದೆ-
ಬೆಳಗಿನ ಆಟ- 11.30 ಗಂಟೆಗೆ
ಮ್ಯಾಟನಿ- ಮಧ್ಯಾಹ್ನ 2.30ಕ್ಕೆ
ಫಸ್ಟ್‌ ಶೋ- ಸಂಜೆ 6 ಗಂಟೆಗೆ
ಸೆಕೆಂಡ್‌ ಶೋ- ರಾತ್ರಿ 9 ಗಂಟೆಗೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೋಮವಾರ (ಮಾರ್ಚ್‌) ಈ ಏರ ಪ್ರಕಾರದ ಟೈಂ ಟೇಬಲ್ಲನ್ನು ಗೊತ್ತು ಪಡಿಸಿತು. ಮಂಡಳಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಸ್‌.ರಮೇಶ್‌ ಈ ತೀರ್ಮಾನವನ್ನು ಸುದ್ದಿಗಾರರಿಗೆ ತಿಳಿಸಿದರು.

ಕೆಲಸದ ವೇಳೆಯಿಂದಾಗಿ ಪ್ರೇಕ್ಷಕರಿಗೆ ಫಸ್ಟ್‌ ಶೋ ನೋಡುವುದು ಕಷ್ಟವಾಗಿತ್ತು. ಬಸ್‌ ಸಂಚಾರ ಹಾಗೂ ಬೆಳಗಿನ ಕೆಲಸದಿಂದಾಗಿ ಬೆಳಗಿನ ಆಟ ಕೂಡ ಎಷ್ಟೋ ಚಿತ್ರಮಂದಿರಗಳಲ್ಲಿ ಭಣಭಣ ಎನ್ನುತ್ತಿತ್ತು. ಹೀಗಾಗಿ ಸಿನಿಮಾ ಪ್ರದರ್ಶನದ ವೇಳೆಯನ್ನು ಬದಲಿಸಿದ್ದೇವೆ ಎಂದು ರಮೇಶ್‌ ಸಮರ್ಥಿಸಿಕೊಂಡರು. ಬದಲಾದ ವೇಳೆಯನ್ನು ಚಿತ್ರಮಂದಿರಗಳ ಮಾಲೀಕರು ಹಾಗೂ ವಿತರಕರು ಸ್ವಾಗತಿಸಿದ್ದಾರೆ ಎಂದರು.

ಏಕ ಗವಾಕ್ಷಿ ಪದ್ಧತಿ ಬರಲಿ : ಕನ್ನಡ ಚಿತ್ರಗಳಿಗೆ ಇರುವ ಸಬ್ಸಿಡಿಯನ್ನು ಯಾವುದೇ ಕಾರಣಕ್ಕೂ ಕಡಿತ ಮಾಡುವುದಿಲ್ಲ ಎಂದ ರಮೇಶ್‌, ನಕಲಿ ಸಿ.ಡಿ. ಹಾವಳಿ ಮತ್ತು ಚಿತ್ರೋದ್ಯಮದ ಇತರ ಸಮಸ್ಯೆಗಳನ್ನು ಬಗೆಹರಿಸಲು 10 ವರ್ಷಗಳ ಹಿಂದೆ ಇದ್ದ ಏಕ ಗವಾಕ್ಷಿ ಪದ್ಧತಿಯನ್ನು ಮತ್ತೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X