»   » ರವಿಗೆ ಮತ್ತೆ ಜೋಡಿಯಾದ ಜಗ್ಗಿ

ರವಿಗೆ ಮತ್ತೆ ಜೋಡಿಯಾದ ಜಗ್ಗಿ

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೊ
‘ಗಡಿಬಿಡಿ ಗಂಡ’ ಚಿತ್ರದ ಬಳಿಕ ರವಿಚಂದ್ರನ್‌ ಮತ್ತು ಜಗ್ಗೇಶ್‌ ಜೋಡಿ ಮತ್ತೆ ಒಂದಾಗಿದೆ.

ನಗೆಗಾರ ಜಗ್ಗೇಶ್‌ ಹಾಗೂ ಕನಸುಗಾರ ರವಿಚಂದ್ರನ್‌ ಜೋಡಿ ‘ಗಡಿಬಿಡಿ ಗಂಡ’ ಚಿತ್ರದಲ್ಲಿ ಜನಪ್ರಿಯತೆ ಗಳಿಸಿದ್ದರೂ, ಆನಂತರದ ದಿನಗಳಲ್ಲಿ ಅದೇಕೋ ಇಬ್ಬರೂ ಒಟ್ಟಿಗೆ ನಟಿಸಲು ಮನಸ್ಸು ಮಾಡಿರಲಿಲ್ಲ . ಈಗ ಇಬ್ಬರ ದೆಸೆಯೂ ಚೆನ್ನಾಗಿಲ್ಲ ! ಕಷ್ಟಕಾಲದಲ್ಲಿ , ಕ್ರೇಜಿಸ್ಟಾರ್‌ ಮತ್ತು ನವರಸ ನಾಯಕ ಒಂದಾಗಿ ನಟಿಸಲು ತೀರ್ಮಾನಿಸಿದ್ದಾರೆ. ಚಿತ್ರದ ಹೆಸರು- ‘ರಾಮಕೃಷ್ಣ’.

ತಮಿಳಿನ ಜನಪ್ರಿಯ ಚಿತ್ರ ‘ಆಣ್‌ಪಾವಮ್‌’ನ್ನು ನಿರ್ದೇಶಕ ಸಾಯಿಪ್ರಕಾಶ್‌ ಕನ್ನಡಕ್ಕೆ ಭಟ್ಟಿ ಇಳಿಸುವ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರದ ತೆಲುಗು ಅವತರಣಿಕೆಯೂ ಯಶಸ್ಸು ಕಂಡಿದೆ. ಕನ್ನಡದಲ್ಲೂ ಯಶ ಸಿಗಬಹುದು ಎಂಬುದು ಚಿತ್ರಕ್ಕೆ ಹಾಸ್ಯ, ಪ್ರೇಮ, ಸೆಂಟಿಮೆಂಟ್‌ ಬೆಸೆದ ಸಾಯಿಪ್ರಕಾಶ್‌ ಅಂಬೋಣ.

ಮಹೇಶ್‌ ಸುಖಧರೆಯ ‘ಸಂಭ್ರಮ’ದ ಮಲಯಾಳಿ ಚೆಲುವೆ ಕಾವೇರಿ ‘ರಾಮಕೃಷ್ಣ’ ಚಿತ್ರದ ನಾಯಕಿ. ಈ ಚಿತ್ರದಲ್ಲಿ ರವಿಚಂದ್ರನ್‌ ಸಾಥಿಯಾಗುವ ಮೂಲಕ ಕೃಷ್ಣಸುಂದರಿ ಕಾವೇರಿ ಕನ್ನಡದಲ್ಲಿ ಎರಡನೇ ಇನಿಂಗ್ಸ್‌ ಪ್ರಾರಂಭಿಸುತ್ತಿದ್ದಾರೆ. ‘ಜಗ್ಗೇಶ್‌’ರಿಗೆ ಲೈಲಾ ನಾಯಕಿ.

ಬಾಲ ಮುತ್ತಯ್ಯ ‘ರಾಮಕೃಷ್ಣ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಛಾಯಾಗ್ರಹಣ ಸಿ. ಸೀತಾರಾಂ ಅವರದು. ಸಂಗೀತ ಎಸ್‌.ಎ. ರಾಜ್‌ಕುಮಾರ್‌.

ಮುಖ್ಯಮಂತ್ರಿ ಚಂದ್ರು, ಸಾಧು ಕೋಕಿಲ, ಶ್ರಿನಿವಾಸ ಮೂರ್ತಿ, ದೊಡ್ಡಣ್ಣ ‘ರಾಮಕೃಷ್ಣ’ ತಾರಾಗಣದಲ್ಲಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada