»   » ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ರೆಡಿ -ನಟ ಅಂಬರೀಷ್‌

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ರೆಡಿ -ನಟ ಅಂಬರೀಷ್‌

Subscribe to Filmibeat Kannada

ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಸ್ಥಾನ ವಹಿಸಿದರೆ ನಿಭಾಯಿಸಲು ಸಿದ್ಧ ಎಂದು ಚಿತ್ರನಟ ಮತ್ತು ಸಂಸದ ಅಂಬರೀಷ್‌ ಪುನರುಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರನಟನಾಗಿರುವ ಕಾರಣ ನನಗೆ ಸಾಕಷ್ಟು ಜನಪ್ರಿಯತೆಯಿದೆ. ರಾಜಕಾರಣದಲ್ಲಿಯೂ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದೇನೆ. ಹೈಕಮಾಂಡ್‌ ಆ ಹೊಣೆಯನ್ನು ಒಪ್ಪಿಸಿದರೆ ಸಮರ್ಥವಾಗಿ ನಿರ್ವಹಿಸಬಲ್ಲೆ ಎಂದರು.

ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ನಾನು ಪ್ರಯತ್ನಿಸಲಿಲ್ಲ. ಅರ್ಹತೆ ಗುರ್ತಿಸಿ ಸಚಿವ ಸ್ಥಾನ ನೀಡಿದರೆ, ಅದನ್ನು ಯಶಸ್ವಿಯಾಗಿ ನಿರ್ವಹಿಸುವೆನೆಂಬ ಆತ್ಮವಿಶ್ವಾಸ ನನ್ನಲ್ಲಿದೆ ಎಂದು ಅಂಬರೀಷ್‌ ಹೇಳಿದರು.

ಕೊಸರು : ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬ ಆಕಾಂಕ್ಷಿ ಎದ್ದುನಿಂತದ್ದನ್ನು ಕಂಡು ಪೂಜಾರಿ ಮನದಲ್ಲಿ ಪಾಪ ಕಸಿವಿಸಿಯಾಗಿರಬಹುದು!

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada