»   » ಉಪ್ಪಿದೊಂದು ಕತೆ, ಅಂಬಿದು ಇನ್ನೊಂದು ಕತೆ, ಶಿವುದೂ?

ಉಪ್ಪಿದೊಂದು ಕತೆ, ಅಂಬಿದು ಇನ್ನೊಂದು ಕತೆ, ಶಿವುದೂ?

Posted By: Super
Subscribe to Filmibeat Kannada

ಉಪೇಂದ್ರ ಎಲ್ಲಕ್ಕೂ ಸೈ... ಪುನೀತ್‌ ಹೊಸ ಚಿತ್ರಗಳು... ಸ್ಟೇಟ್ಸ್‌ನಲ್ಲಿ ಶಕೀಲಾ ಲೀಲೆ... ಯುಗಾದಿಗೆ 'ಪ್ರೀತಿ ಏಕೆ ಭೂಮಿ ಮೇಲಿದೆ?' ಹಾಡುಗಳು...ಪುಷ್ಪಪಾದ

'ಒರಟ ಐ ಲವ್‌ ಯೂ' ಚಿತ್ರವನ್ನು ಉದ್ಯಮಿ ಸಿ.ಆರ್‌.ಮನೋಹರ್‌ ನಿರ್ಮಾಣ ಮಾಡುತ್ತಿದ್ದಾರೆ. ಅಭಿನಯ ತರಂಗದಲ್ಲಿ ನಟನೆ ಕಲಿತ ಪ್ರಶಾಂತ್‌ ಚಿತ್ರದ ನಾಯಕ. ಸೌಮ್ಯ ಚಿತ್ರದ ನಾಯಕಿ.

ಇಲ್ಲಿ ಅವಕಾಶಗಳು ಕಮ್ಮಿಯಾದವು ಎಂದೋ ಏನೋ ನಟ ಉಪೇಂದ್ರ ತೆಲುಗು ಚಿತ್ರರಂಗದತ್ತ ಪಾದಬೆಳೆಸಿದ್ದಾರೆ. ಖಳನಟನ ಪಾತ್ರವಾದರೂ ಪರವಾಗಿಲ್ಲ, ಹೀರೋಗಳಿಂದ ಒದೆತಿನ್ನಲೂ ಸಹಾ ಸೈ ಎನ್ನುತ್ತಿದ್ದಾರೆ. ಈ ಮಧ್ಯೆಉಪೇಂದ್ರರ ಹೊಸ ಚಿತ್ರ 'ಪರೋಡಿ' ಶುಕ್ರವಾರ(ಮಾ.2) ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕರು ಸಾಯಿಪ್ರಕಾಶ್‌.

'ದುನಿಯಾ' ಚಿತ್ರದ 'ಕರಿಯ ಐ ಲವ್‌ ಯೂ... ಕರುನಾಡ ಮೇಲಾಣೆ... ಬೆಳ್ಳಿ ಐ ಲವ್‌ ಯೂ ಬಿಳಿಮೋಡದ ಮೇಲಾಣೆ...' ಹಾಡು ಕೇಳುವಂತಿರುವ ಕಾರಣ, ಎಲ್ಲರ ಬಾಯಲ್ಲೂ ಬರುತ್ತಿದೆ. ಆದರೆ ಹಾಡು ಬರೆದ ವಿ.ಮನೋಹರ್‌ಗೆ ಯಾಕೋ ಅಗತ್ಯ ಪ್ರಚಾರ ಸಿಗುತ್ತಿಲ್ಲ. ಚಿತ್ರದ ಹೀರೋ ವಿಜಯ್‌ ಮತ್ತು ನಾಯಕಿ ರಶ್ಮೀ ಬಗ್ಗೆ ಒಳ್ಳೆ ಮಾತುಗಳು ಕೇಳಿ ಬರುತ್ತಿವೆ.

ಅಂಬರೀಷಣ್ಣ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ವಿಷ್ಯಾ ಎಲ್ಲರಿಗೂ ಗೊತ್ತು. ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ ಅನ್ನುತ್ತಿದ್ದ ಅವರಿಗೆ ಈಗ ಸಿನಿಮಾದಲ್ಲೂ ಆಸಕ್ತಿಯಿಲ್ಲವಂತೆ. ಈ ವಿಚಾರವನ್ನು ಅವರ ಪತ್ನಿ ಸುಮಲತಾ ಮೇಡಂ ಹೇಳಿದ್ದಾರೆ.

ಯುಗಾದಿ ದಿನ 'ಜೋಗಿ' ಖ್ಯಾತಿಯ ನಿರ್ದೇಶಕ, ಹಾಲಿ ನಟ ಪ್ರೇಮ್‌ರ 'ಪ್ರೀತಿ ಏಕೆ ಭೂಮಿ ಮೇಲಿದೆ?' ಚಿತ್ರದ ಧ್ವನಿ ಸುರುಳಿ ಬಿಡುಗಡೆಯಾಗಲಿದೆಯಂತೆ! ಅಶ್ವಿನಿ ಕ್ಯಾಸೆಟ್‌ ಕಂಪನಿ ಮತ್ತೆ ದುಡ್ಡು ಬಾಚುತ್ತಾ ಅನ್ನೋದನ್ನು ಕಾದು ನೋಡೋಣ.

ಶಿವರಾಜ್‌ ಕುಮಾರ್‌ ಮತ್ತು ಉಪೇಂದ್ರರ ಚಿತ್ರಗಳು ಮುಗ್ಗರಿಸುತ್ತಿರುವನ್ನು ನೋಡಿದರೆ, ಎಂಥವರೂ ಹೆದರುತ್ತಾರೆ. ಈ ಮಧ್ಯೆ ಶಿವರಾಜ್‌ ಕುಮಾರ್‌ ಮತ್ತು ಉಪೇಂದ್ರ ಅವರ ಕಾಂಬಿನೇಷನ್‌ನಲ್ಲಿ ಹೊಸ ಚಿತ್ರ ಸೆಟ್ಟೇರಿದೆ. ಚಿತ್ರದ ಹೆಸರು; 'ಲವ್‌-ಕುಶ್‌'.

ಪುನೀತ್‌ರ 'ಅರಸು' ಕಷ್ಟಪಟ್ಟುಕೊಂಡು ಥಿಯೇಟರ್‌ಗೆ ಕಚ್ಚಿಕೊಂಡಿದ್ದಾನೆ! 'ರಿಷಿ' ಚಿತ್ರದ ನಿರ್ದೇಶಕ ಪ್ರಕಾಶ್‌ ನಿರ್ದೇಶನದಲ್ಲಿ ಪುನೀತ್‌ರ ಹೊಸ ಚಿತ್ರಕ್ಕೆ ಸಿದ್ಧತೆಗಳು ನಡೆದಿವೆ. ಮಾ.21ರಂದು ಚಿತ್ರದ ಮುಹೂರ್ತ ನಡೆಯಲಿದೆ. ಇದರ ಜೊತೆಗೆ ಡಿ.ರಾಜೇಂದ್ರ ಬಾಬು ನಿರ್ದೇಶನದ ಚಿತ್ರದಲ್ಲಿ ಪುನೀತ್‌ ಅಭಿನಯಿಸುವ ಸಾಧ್ಯತೆಗಳಿವೆ. ಜನಾರ್ದನ ಮಹರ್ಷಿ ಚಿತ್ರಕ್ಕೆ ಈ ಚಿತ್ರಕ್ಕೆ ಕತೆ ಬರೆದಿದ್ದಾರೆ.

'16ರಿಂದ 60' ಅನ್ನೋ 'ದೊಡ್ಡವರ ಚಿತ್ರ' ಸ್ಟೇಟ್ಸ್‌ ಚಿತ್ರಮಂದಿರದಲ್ಲಿ ತುಂಬಿದ ಗೃಹಗಳಿಂದ ಪ್ರದರ್ಶನಗೊಳ್ಳುತ್ತಿದೆ. ಶಕೀಲಾ ಪೋಸ್ಟರ್‌ಗಳು ಬೆಂಗಳೂರಿನ ಬೀದಿಬೀದಿಗಳಲ್ಲಿ ಕಣ್ಣಿಗೆ ರಾಚುತ್ತಿವೆ!

English summary
Latest cine bits from Sandalwood : Orata I Love You Movie Launch, Upendras Parodi released, Puneet's New Films, Lava Kusha' Starts...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada