»   »  ಯುಗಾದಿಗೆ ಬರುತ್ತಿದ್ದಾರೆ ಕನ್ನಡದ ಕಿರಣ್ ಬೇಡಿ

ಯುಗಾದಿಗೆ ಬರುತ್ತಿದ್ದಾರೆ ಕನ್ನಡದ ಕಿರಣ್ ಬೇಡಿ

Subscribe to Filmibeat Kannada
Malashri in Krian bedi avatar
ಕನ್ನಡ ಚಿತ್ರರಂಗಕ್ಕೆ ಅದ್ದೂರಿತನ ತಂದುಕೊಟ್ಟ ನಿರ್ಮಾಪಕರಲ್ಲಿ ರಾಮು ಕೂಡ ಒಬ್ಬರು. ಕನ್ನಡ ಚಿತ್ರಗಳ ಮೇಲೆ ಕೋಟಿ ರೂಪಾಯಿ ವ್ಯಯಿಸಿದ ಧೀಮಂತ ನಿರ್ಮಾಪಕ ಅವರು. ಈಗ ಕನ್ನಡ ಚಿತ್ರರಂಗದಲ್ಲಿ ಶ್ರೀಮಂತಿಕೆಗೇನು ಕಡಿಮೆ ಇಲ್ಲ. ಆದರೂ ಕೋಟಿ ನಿರ್ಮಾಪಕ ಎಂಬ ಹೆಸರು ರಾಮು ಅವರ ಪಾಲಾಗಿದೆ.

ಪ್ರಸ್ತುತ ಅವರ ಸಂಸ್ಥೆಯ ನಿರ್ಮಾಣದ ಮಾಲಾಶ್ರೀ ಅಭಿನಯದ 'ಕನ್ನಡದ ಕಿರಣ್‌ಬೇಡಿ' ಚಿತ್ರಕ್ಕೆ ಚಿತ್ರೀಕರಣ ಸೇರಿದಂತೆ ಎಲ್ಲಾ ಚಟುವಟಿಕೆಗಳು ಪೂರ್ಣವಾಗಿದ್ದು ಮೊದಲಪ್ರತಿ ಸಿದ್ದವಾಗಿದೆ. ನೂತನ ಸಂವತ್ಸರದ ಆರಂಭ ಅಂದರೆ ಯುಗಾದಿ ವೇಳೆಗೆ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ದತೆ ನಡೆಸುತ್ತಿದ್ದಾರೆ.

ಕಿರಣ್‌ಬೇಡಿ ಪಾತ್ರವನ್ನು ನಿರ್ವಹಿಸುವುದ್ದಕ್ಕಾಗಿ ಮಾಲಾಶ್ರೀ ಪೂರ್ವದಲ್ಲಿ ಸಾಕಷ್ಟು ತಯಾರಿ ನಡೆಸಿ ಸಾಹಸ ಸನ್ನಿವೇಶಗಳಲ್ಲಿ ನೈಜವಾಗಿ ಪಾಲ್ಗೊಂಡಿದ್ದಾರೆ. ರಾಮು ಸಂಸ್ಥೆಯ 25ನೇ ಚಿತ್ರವಾಗಿರುವ 'ಕನ್ನಡದ ಕಿರಣ್‌ಬೇಡಿ' ಚಿತ್ರವನ್ನು ಓಂಪ್ರಕಾಶ್‌ರಾವ್ ನಿರ್ದೇಶಿಸಿದ್ದಾರೆ. ಕೆ.ಎಂ.ವಿಷ್ಣುವರ್ಧನ್ ಛಾಯಾಗ್ರಹಣ, ರಂಗನಾಥ್ ಸಂಭಾಷಣೆ, ಹಂಸಲೇಖ ಸಾಹಿತ್ಯ_ಸಂಗೀತ, ಪಳನಿರಾಜ್ ಸಾಹಸ, ಪ್ರದೀಪ್‌ ಅಂಟೋನಿ ನೃತ್ಯ, ಸರಿಗಮವಿಜಿ ಸಹನಿರ್ದೇಶನ, ಇಸ್ಮಾಯಿಲ್, ಕುಮಾರ್ ಕಲೆ, ಭರತ್, ಸೋಮು ನಿರ್ಮಾಣನಿರ್ವಹಣೆಯಿದೆ. ಈ ಚಿತ್ರದ ತಾರಾಬಳಗದಲ್ಲಿ ಮಾಲಾಶ್ರೀ, ಶ್ರೀನಿವಾಸಮೂರ್ತಿ, ಆಶೀಷ್‌ವಿದ್ಯಾರ್ಥಿ, ರಂಗಾಯಣರಘು, ಸಾಧುಕೋಕಿಲಾ, ಬುಲೆಟ್‌ಪ್ರಕಾಶ್, ಜಿ.ವಿ.ಮಹೇಶ್, ಧರ್ಮ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಕನ್ನಡ ಚಿತ್ರರಂಗದ ದುಸ್ಥಿತಿಯ ಬಗ್ಗೆ ರಾಮು ವಿಷಾದ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada